ವಾಶಿಂಗ್ಟನ್(ಸೆ.18)  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ದ ವೈಟ್ ಹೌಸ್ ಮಾಜಿ ಸಹಾಯಕ, ಕೊರೋನಾ ವೈರಸ್ ಟಾಸ್ಕ್ ಫೋರ್ಸ್ ತಂಡದ ನೇತೃತ್ವದ ಹಿಸಿದ್ದ ಒಲಿವಿಯಾ ಟ್ರೋಯ್ ಕಿಡಿ ಕಾರಿದ್ದಾರೆ. ಅಸಮರ್ಪಕ ಆಡಳಿತದಿಂದ ಬೇಸತ್ತಿದ್ದೇನೆ. ಹೀಗಾಗಿ ಚುನಾವಣೆಯಲ್ಲಿ ನನ್ನ ಬೆಂಬಲ ಟ್ರಂಪ್ ಬದಲು ಜೋ ಬೈಡೆನ್‌ಗೆ ಎಂದು ಟ್ರೊಯ್ ಹೇಳಿದ್ದಾರೆ.

ಟ್ರಂಪ್ ವಿರುದ್ಧ ನಟಿ ಲೈಂಗಿಕ ದೌರ್ಜನ್ಯ ಆರೋಪ..!

ವಿಡಿಯೋ ಮೂಲಕ ಟ್ರಂಪ್ ವಿರುದ್ಧ ಹರಿಹಾಯ್ದಿರುವ ಒಲಿವಿಯಾ ಟ್ರೋಯ್, ಟ್ರಂಪ್ ಬೆರೆಯವರ ಕುರಿತು ಕಾಳಜಿವಹಿಸುವುದಿಲ್ಲ. ಅಮೆರಿಕ ನಿವಾಸಿಗಳ ಕುರಿತು ಟ್ರಂಪ್‌ಗೆ ಕಾಳಜಿ ಇದ್ದರೆ ಕೊರೋನಾ ವೈರಸ್ ಈ ರೀತಿ ಅಬ್ಬರಿಸುತ್ತಿರಲಿಲ್ಲ. ಇಷ್ಟೇ ಅಲ್ಲ ಕೊರೋನಾ ವೈರಸ್ ಕುರಿತು ಸಭೆಯಲ್ಲಿ ಟ್ರಂಪ್, ಈ ಸಾಂಕ್ರಾಮಿಕ ರೋಗ ಒಳ್ಳೆಯದು. ಕಾರಣ ಕೆಟ್ಟ ವ್ಯಕ್ತಿಗಳಿಂದ ದೂರವಿರಬಹುದು. ಜೊತೆಗೆ ಕೈಕುಲುಕುವುದರಿಂದಲೂ ದೂರವಿರಬಹುದು ಎಂದಿದ್ದರು ಎಂದು ಒಲಿವಿಯಾ ಟ್ರೋಯ್ ಹೇಳಿದ್ದಾರೆ.

 

ದೇಶದ ರಕ್ಷಣೆಗಾಗಿ ಟ್ರಂಪ್‌ ಪುನಾರಾಯ್ಕೆಯಾಗಬೇಕು: ಉಗ್ರ ಲಾಡೆನ್‌ ಸಂಬಂಧಿ

ಅಮೆರಿಕ ಅಧ್ಯಕ್ಷನಾದ ಮೇಲೆ ಎಲ್ಲರ ಕಾಳಜಿ ಟ್ರಂಪ್‌ಗೆ ಇರಬೇಕು. ಆದರೆ ಟ್ರಂಪ್ ಮಾತುಗಳಲ್ಲಿ ಕೊರೋಾನಾ ವೈರಸ್ ಸಭೆಗಳಲ್ಲಿ ಅದು ಕಾಣಲಿಲ್ಲ ಎಂದು ಟ್ರೋಯ್ ಹೇಳಿದ್ದಾರೆ. ಈ ಕಾರಣಕ್ಕೆ ಚುನಾವಣೆಯಲ್ಲಿ ನಾನು ಡೆಮಾಕ್ರಟಿಕ್‌ನ ಜೋ ಬೈಡೆನ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಟ್ರೋಯ್ ಆರೋಪಗಳಿಗೆ ಟ್ರಂಪ್ ತಿರುಗೇಟು ನೀಡಿದ್ದಾರೆ. ಕೊರೋನಾ ಟಾಸ್ ಫೋರ್ಸ್ ತಂಡದಿಂದ ಹೊರನಡೆಯುವಾಗ ಒಲಿವಿಯಾ ಟ್ರೋಯ್ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಸರ್ಕಾರದ ಆಡಳಿತ ವೈಖರಿ, ಕೊರೋನಾ ವಿರುದ್ಧದ ಹೋರಾಟದಲ್ಲಿ ತೆಗೆದುಕೊಂಡ ವಿಧಾನಗಳನ್ನು ಶ್ಲಾಘಿಸಿದ್ದಾರೆ. ಇಷ್ಟೇ ಅಲ್ಲ ವೈಟ್ ಹೌಸ್ ಟಾಸ್ಕ್ ಫೋರ್ಸ್ ತಂಡದಲ್ಲಿ ಕೆಲಸ ಮಾಡಿ ಹೆಮ್ಮೆ ಇದೆ ಎಂದು ಪತ್ರದಲ್ಲಿ ಬರೆದಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

ಒಲಿವಿಯಾ ಟ್ರೋಯ್ ಅವರನ್ನು ಭೇಟಿಯಾಗಿಲ್ಲ. ಪತ್ರದಲ್ಲಿ ಹೇಳಿರುವುದೇ ಬೇರೆ. ಇದೀಗ ಹೇಳುತ್ತಿರುವುದೇ ಬೇರೆ. ಹೀಗಾಗಿ ಟ್ರೋಯ್ ಆರೋಪವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಹಿಂದೂ ಸಾಮ್ರಾಜ್ಯ: ಚುನಾವಣೆಯ ಸ್ವರೂಪವನ್ನೇ ಬದಲಾಯಿಸಿದ ಮೋದಿಯ ಹೆಜ್ಜೆ!...
"