ಟ್ರಂಪ್ ವಿರುದ್ಧ ನಟಿ ಲೈಂಗಿಕ ದೌರ್ಜನ್ಯ ಆರೋಪ..!
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹೊಸ್ತಿಲಿನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.
ನಟಿ ರೂಪದರ್ಶಿ ಆಮಿ ಡೋರಿಸ್ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ
20 ವರ್ಷದ ಹಿಂದೆ ಅಮೆರಿಕದ ಟೆನ್ನಿಸ್ ಟೂರ್ನಮೆಂಟ್‌ನಲ್ಲಿ ಡೊನಾಲ್ಡ್ ಟ್ರಂಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಮಾಜಿ ರೂಪದರ್ಶಿ, ನಟಿ ಆಮಿ ಡೋರಿಸ್ ಆರೋಪಿಸಿದ್ದಾರೆ.
1997 ಸೆಪ್ಟೆಂಬರ್ 5ರಂದು ಟೂರ್ನಮೆಂಟ್‌ನಲ್ಲಿ ಟ್ರಂಪ್‌ನ ವಿಐಪಿ ಬಾಕ್ಸ್ ಬಾತ್‌ರೂಂ ಹೊರಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ನಟಿ ಆರೋಪಿಸಿದ್ದಾರೆ.
ಆಗ ಡೋರಿಸ್ 24 ವರ್ಷ ವಯಸ್ಸಿನ ಖ್ಯಾತ ರೂಪದರ್ಶಿಯಾಗಿದ್ದರು.
ಟ್ರಂಪ್ ನನ್ನನ್ನು ತಪ್ಪಿಸಿಕೊಳ್ಳಲಾಗದಂತೆ ಹಿಡಿದುಕೊಂಡು ನನ್ನ ಗಂಟಲೊಳಗೆ ನಾಲಗೆ ತುರುಕಿದ್ದಾರೆ. ಹಾಗೆಯೇ ಲೈಂಗಿಕ ದೌರ್ಜನ್ಯ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ನಾನು ಟ್ರಂಪ್‌ನನ್ನು ತಳ್ಳಲು ಪ್ರಯತ್ನಿಸಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ನಾನು ಟ್ರಂಪ್ ನಾಲಗೆ ಕಚ್ಚಿ ನೋಯಿಸಿರಬಹುದು ಎಂದಿದ್ದಾರೆ.
ಈ ಬಗ್ಗೆ ತನ್ನ ಲಾಯರ್ ಮೂಲಕ ಸ್ಪಷ್ಟನೆ ನೀಡಿರುವ ಟ್ರಂಪ್ ಯಾವುದೇ ರೀತಿಯಲ್ಲಿ ತೊಂದರೆ ಮಾಡಿಲ್ಲ, ದೌರ್ಜನ್ಯ ಮಾಡಿಲ್ಲ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಡೋರಿಸ್ ಟ್ರಂಪ್ ಜೊತೆಗಿದ್ದ ಕ್ಷಣಗಳ ಫೋಟೋಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ.
ಟೂರ್ನಮೆಂಟ್ ಟಿಕೆಟ್ ಸೇರಿ ನ್ಯೂಯಾರ್ಕ್‌ನಲ್ಲಿ ಜೊತೆಯಾಗಿ ಹಲವು ದಿನ ಉಳಿದುಕೊಂಡ ಫೋಟೋ ಶೇರ್ ಮಾಡಿದ್ದಾರೆ.
ಟ್ರಂಪ್‌ಗೆ ಆಗ 51 ವರ್ಷ ವಯಸ್ಸಾಗಿತ್ತು. ಎರಡನೇ ಪತ್ನಿ ಮಾರ್ಲ ಮಾಪಲ್ಸ್ ಅವರನ್ನು ವಿವಾಹವಾಗಿದ್ದರು.
ಡೋರಿಸ್‌ಗೆ ಈಗ 48 ವರ್ಷ ವಯಸ್ಸಾಗಿದ್ದು, ಇಬ್ಬರು ಟ್ವಿನ್ಸ್ ಹೆಣ್ಣು ಮಕ್ಕಳಿದ್ದಾರೆ.
2016ರಲ್ಲಿ ಮಹಿಳೆಯರು ತಮಗೆದುರಾಗಿ ಆದ ಅತ್ಯಾಚಾರದ ಬಗ್ಗೆ ಮಾತಾನಡಿದಾಗ ತಾವು ಮಾತನಾಡುವ ನಿರ್ಧಾರ ಮಾಡಿದ್ದರು ಡೋರಿಸ್.
ಆಕೆಯ ಅಂದಿನ ಬಾಯ್‌ಫ್ರೆಂಡ್ ಆಕೆಯನ್ನು 1997ರಲ್ಲಿ ನ್ಯೂಯಾರ್ಕ್‌ಗೆ ಲಾಂಗ್ ವೀಕೆಂಡ್‌ಗೆ ಕರೆದೊಯ್ದಾಗ ಟ್ರಂಪ್ ಜೊತೆ ಹಲವು ದಿನ ಉಳಿದುಕೊಂಡಿದ್ದರು.
ನನ್ನ ಲೆನ್ಸ್‌ನಲ್ಲಿ ಸಮಸ್ಯೆ ಇತ್ತು. ಅದನ್ನು ಸರಿ ಮಾಡುವುದಕ್ಕಾಗಿ ಬಾತ್‌ರೂಂ ಕಡೆ ಹೋಗಿದ್ದಾಗ ಘಟನೆ ನಡೆದಿದೆ ಎಂದಿದ್ದಾರೆ.