ನ್ಯೂಯಾರ್ಕ್(ಸೆ.09) ಭಯೋತ್ಪಾದಕರಿಂದ ದೇಶದ ರಕ್ಷಣೆಗಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಮತ್ತೆ ಅಧ್ಯಕ್ಷರಾಗಿ ಪುನಾರಾಯ್ಕೆ ಆಗಬೇಕು ಎಂದು ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಾಗಿದ್ದ ಒಸಮಾ ಬಿನ್‌ ಲಾಡೆನ್‌ ಸೋದರ ಸೊಸೆ ನೂರ್‌ ಬಿನ್‌ ಲಾಡೆನ್‌ ಪ್ರತಿಪಾದಿಸಿದ್ದಾರೆ.

ಇಮ್ರಾನ್‌ ಸಂಪುಟದ 7 ಸಚಿವರು ಉಭಯ ಪೌರತ್ವ ಹೊಂದಿರುವವರು!

ಜೊತೆಗೆ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಅವರಿಗೇ ಮತ ಚಲಾಯಿಸುವಂತೆ ಮತದಾರರಿಗೆ ನೂರ್‌ ಬಿನ್‌ ಲಾಡೆನ್‌ ಕೋರಿದ್ದಾರೆ. ಒಂದು ವೇಳೆ ಡೆಮಾಕ್ರಟ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, 2001ರ 9/11ರ ಕರಾಳ ದಿನದಂಥ ಘಟನೆ ಮರುಕಳಿಸಲಿದೆ ಎಂದು ಎಚ್ಚರಿಸಿದ್ದಾರೆ.

ಈ ಹಿಂದೆ ಒಬಾಮಾ/ಬೈಡನ್‌ ಆಡಳಿತಾವಧಿಯಲ್ಲಿ ಐಸಿಸ್‌ ಜಾಲ ತನ್ನ ಕಬಂಧ ಬಾಹುವನ್ನು ವಿಸ್ತರಿಸಿಕೊಂಡಿತ್ತು. ಆದರೆ, ಟ್ರಂಪ್‌ ಭಯೋತ್ಪಾದಕರನ್ನು ಹುಟ್ಟಡಗಿಸಲು ಸಮರ್ಥರಿದ್ದಾರೆ. ದೇಶ ಮತ್ತ ವಿಶ್ವದ ರಕ್ಷಣೆಗಾಗಿ ಟ್ರಂಪ್‌ ಪುನಾರಾಯ್ಕೆಯಾಗಬೇಕು ಎಂದಿದ್ದಾರೆ.