ನ್ಯೂಯಾರ್ಕ್(ಏ.28): ಕೊರೋನಾ ವೈರಸ್‌ನಿಂದ ಅತ್ಯಧಿಕ ಪ್ರಮಾಣದ ಸಾವು​ ಸಂಭವಿಸುತ್ತಿರುವ ಅಮೆರಿಕದಲ್ಲಿ ಭಾರತೀಯ ಮೂಲದ ಸಾವಿರಾರು ವೈದ್ಯರು ಕೊರೋನಾ ಯೋಧರಾಗಿ ಹೋರಾಡುತ್ತಿದ್ದಾರೆ. ಅಮೆರಿಕದಲ್ಲಿ ಕೊರೋನಾಕ್ಕೆ ಚಿಕಿತ್ಸೆ ನೀಡುತ್ತಿರುವ ಪ್ರತಿ 7 ವೈದ್ಯರ ಪೈಕಿ ಒಬ್ಬರು ಭಾರತೀಯ ಮೂಲದವರಾಗಿದ್ದಾರೆ.

"

ಅಮೆರಿಕದಲ್ಲಿ ಭಾರತೀಯ ವೈದ್ಯರ ಕರ್ತವ್ಯವನ್ನು ಶ್ಲಾಘಿಸಿರುವ ಭಾರತೀಯ ಮೂಲದ ಅಮೆರಿಕನ್‌ ವೈದ್ಯರ ಒಕ್ಕೂಟದ ಅಧ್ಯಕ್ಷ ಡಾ ಸುರೇಶ್‌ ರೆಡ್ಡಿ, ಅಮೆರಿಕದಲ್ಲಿ ಪ್ರತಿ 7 ವೈದ್ಯರಲ್ಲಿ ಒಬ್ಬರು ಭಾರತೀಯ ಮೂಲದವರಾಗಿದ್ದಾರೆ. ಅವರು ಕೊರೋನಾ ವೈರಸ್‌ ವಿರುದ್ಧ ಮುಂಚೂಣಿಯಲ್ಲಿ ನಿಂತು ಯೋಧರಂತೆ ಹೋರಾಡುತ್ತಿದ್ದಾರೆ ಎಂದಿದ್ದಾರೆ.

ಕೊರೋನಾ ಪೀಡಿತರಿಗೆ ಸೋಂಕುನಾಶಕ ದ್ರವ ಚುಚ್ಚಿ: ಟ್ರಂಪ್ ಭಯಾನಕ ಐಡಿಯಾ!

ಅಮೆರಿಕದ ಸಂಪೂರ್ಣ ಆರೋಗ್ಯ ವ್ಯವಸ್ಥೆಯೇ ಈಗ ಸೇನೆಯಾಗಿ ಮಾರ್ಪಟ್ಟಿದೆ. ಕೊರೋನಾ ವೈರಸ್‌ ವಿರುದ್ಧದ ಹೋರಾಟ ಒಂದೆರಡು ತಿಂಗಳಿನಲ್ಲಿ ಮುಗಿಯುವಂಥದ್ದಲ್ಲ. ಇನ್ನೂ 1ರಿಂದ 2 ವರ್ಷಗಳವರೆಗೆ ಮುಂದುವರಿಯಲಿದೆ. ಸೂಕ್ತ ಔಷಧ ಕಂಡುಹಿಡಿಯುವವರೆಗೂ ಈ ವೈರಸ್‌ ವಿಶ್ವ ಸಮುದಾಯವನ್ನು ಬಾಧಿಸಲಿದೆ ಎಂದು ಹೇಳಿದ್ದಾರೆ.

ಚೀನಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೋನಾ ವೈರಸ್ ಮೊದಲಿಗೆ ಇಟಲಿ ಹಾಗೂ ಸ್ಪೇನ್ ದೇಶಗಳನ್ನು ಅತಿ ಹೆಚ್ಚು ಕಾಡಿತ್ತು. ಇದಾದ ಬಳಿಕ ಅಮೆರಿಕದಲ್ಲಿ ಕೊರೋನಾ ಅಕ್ಷರಶಃ ಮರಣ ಮೃದಂಗವನ್ನೇ ಬಾರಿಸಿದೆ. ಸದ್ಯ ಅಮೆರಿಕಾದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದ್ದು 56 ಸಾವಿರಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ.