ಯುರೋಪ್‌ನಲ್ಲಿನ ತೀವ್ರ ಬೇಸಿಗೆಯಿಂದ ಉಂಟಾದ ಕಾಡ್ಗಿಚ್ಚು ಹೊಸ ಆತಂಕವನ್ನು ಸೃಷ್ಟಿಸಿದೆ. ಫ್ರಾನ್ಸ್, ಜರ್ಮನಿಯಂತಹ ದೇಶಗಳಲ್ಲಿ ವಿಶ್ವಯುದ್ಧದ ಸಮಯದಲ್ಲಿ ಹೂತಿಟ್ಟಿದ್ದ ಬಾಂಬ್‌ಗಳು ಈಗ ಸ್ಫೋಟಗೊಳ್ಳುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ಪ್ರಾಣಭೀತಿ ಎದುರಾಗಿದೆ.

ಲಂಡನ್‌: ಈ ಬಾರಿ ಬಿರು ಬೇಸಿಗೆಯನ್ನು ಕಂಡ ಯುರೋಪ್‌ನಲ್ಲೀಗ ಹೊಸ ಆತಂಕ ಸೃಷ್ಟಿಯಾಗಿದೆ. ಬಿಸಿಲಿನ ತಾಪದಿಂದಾಗಿ ಪಶ್ಚಿಮ ಯುರೋಪ್‌ನಲ್ಲಿ ಕಾಡ್ಗಿಚ್ಚು ಉಂಟಾಗಿದ್ದು, ಪರಿಣಾಮ ಅನೇಕ ಕಡೆಗಳಲ್ಲಿ ವಿಶ್ವಯುದ್ಧಗಳ ಸಮಯದಲ್ಲಿ ನೆಲದಡಿ ಹೂತುಹೋಗಿದ್ದ ಬಾಂಬ್‌ಗಳು ಈಗ ಹೊರಬಂದು ಸಿಡಿಯತೊಡಗಿವೆ.

2ನೇ ಮಹಾಯುದ್ಧದ ಕಾಲದ ಮದ್ದುಗುಂಡುಗಳ ಸಂಗ್ರಹ

ಫ್ರಾನ್ಸ್, ಜರ್ಮನಿ, ಬೆಲ್ಜಿಯಂ ಮತ್ತು ನೆದರ್ಲೆಂಡ್‌ನಲ್ಲಿ ಇಂತಹ ಸ್ಫೋಟಗಳು ವರದಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ಪ್ರಾಣಭೀತಿ ಶುರುವಾಗಿದೆ. ನೈಋತ್ಯ ಫ್ರಾನ್ಸ್‌ನ ಬೋರ್ಡೋ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡಕ್ಕೆ, 2ನೇ ಮಹಾಯುದ್ಧದ ಕಾಲದ ಮದ್ದುಗುಂಡುಗಳ ಸಂಗ್ರಹ ಕಾರಣ ಎಂದು ತಿಳಿದುಬಂದಿದೆ. ಅಂತೆಯೇ, ಪೂರ್ವ ಬೆಲ್ಜಿಯಂನ ಲೀಜ್ ಪ್ರಾಂತ್ಯದಲ್ಲೂ ಇಂಥ ಸ್ಫೋಟಗಳು ಆಗಿವೆ.

ಇಂಥ ಸಾಲುಸಾಲು ಘಟನೆಗಳ ಬೆನ್ನಲ್ಲೇ, ಬೆಂಕಿ ವ್ಯಾಪಿಸಿದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಹೂತುಹೋಗಿರುವ ಮದ್ದುಗುಂಡುಗಳ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಲಂಡನ್‌ನ ಶಾಂತಿ ಮತ್ತು ಸಂಘರ್ಷ ಅಧ್ಯಯನ ತಜ್ಞೆ ಸಾರಾ ನ್ಜೆರಿ, ‘ಹವಾಮಾನ ಬದಲಾವಣೆಯು ಈಗ ಹಿಂದಿನ ವಿಷಯಗಳನ್ನು ಹೊರಗೆ ತರುವ ಮತ್ತು ಪುನಃ ಅವುಗಳನ್ನು ಸಕ್ರಿಯಗೊಳಿಸುತ್ತಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಣ್ಣಾ, ಹತ್ತು ದಿನದಲ್ಲಿ ರಾಖಿ ಹಬ್ಬ ಇದೆ, ಆಗ ಯಾರಿಗೆ ಫೋನ್ ಮಾಡಲಿ? ಅಣ್ಣನ ಮೃತದೇಹ ನೋಡಿ ತಂಗಿ ಕಣ್ಣೀರು

ಇದನ್ನೂ ಓದಿ: ದೇಶದಲ್ಲಿ ಅತೀ ಹೆಚ್ಚು ಸಕ್ಕರೆ ತಯಾರಿಸುವ ರಾಜ್ಯ ಯಾವುದು? ಕರ್ನಾಟಕಕ್ಕೆ ಎಷ್ಟನೇ ಸ್ಥಾನ?