ರಷ್ಯಾ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಸ್ಟಾರ್‌ ಅಣು ಒಪ್ಪಂದ ಅಂತ್ಯವಾಗಿದೆ. ಪರಸ್ಪರ ಒಪ್ಪಿಯೊಂದಿಗೆ ಅಣ್ವಸ್ತ್ರಕ್ಕೆ ಸಂಬಂಧಿಸಿದಂತೆ ಹೇರಿಕೊಂಡಿದ್ದ ನಿರ್ಬಂಧಗಳಿಂದ ಎರಡೂ ದೇಶಗಳು ಮುಕ್ತವಾಗಿವೆ. ಪರಿಣಾಮ, ಆ ರಾಷ್ಟ್ರಗಳ ನಡುವೆ ಪರಮಾಣು ಪೈಪೋಟಿ ಏರ್ಪಟ್ಟು, ದಾಳಿಗೂ ಬಳೆಕೆಯಾಗುವ ಆತಂಕ

ಮಾಸ್ಕೋ: ಯುದ್ಧಗ್ರಸ್ತ ರಷ್ಯಾ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಸ್ಟಾರ್‌ ಅಣು ಒಪ್ಪಂದ ಗುರುವಾರ ಅಂತ್ಯವಾಗಿದೆ. ಇದರೊಂದಿಗೆ, ಪರಸ್ಪರ ಒಪ್ಪಿಯೊಂದಿಗೆ ಅಣ್ವಸ್ತ್ರಕ್ಕೆ ಸಂಬಂಧಿಸಿದಂತೆ ಹೇರಿಕೊಂಡಿದ್ದ ನಿರ್ಬಂಧಗಳಿಂದ ಎರಡೂ ದೇಶಗಳು ಮುಕ್ತವಾಗಿವೆ. ಪರಿಣಾಮ, ಆ ರಾಷ್ಟ್ರಗಳ ನಡುವೆ ಪರಮಾಣು ಪೈಪೋಟಿ ಏರ್ಪಟ್ಟು, ದಾಳಿಗೂ ಬಳೆಕೆಯಾಗುವ ಆತಂಕ ಮನೆಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅತ್ತ ಇದನ್ನು ಒಂದು ವರ್ಷ ವಿಸ್ತರಿಸುವಲ್ಲಿ ಆಸಕ್ತಿ ತೋರಿಸುತ್ತಿರುವ ರಷ್ಯಾಧ್ಯಕ್ಷ ಪುಟಿನ್‌, ‘ಒಪ್ಪಂದ ಅಂತ್ಯವಾದಲ್ಲಿ ಅದು ಅಣು ಪ್ರಸರಣವನ್ನು ಉತ್ತೇಜಿಸುವ ಮೂಲಕ ಅಸ್ಥಿರತೆಗೆ ನಾಂದಿ ಹಾಡುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಅಮೆರಿಕದೆದುರು ಪ್ರಸ್ತಾಪಿಸಿರುವರಾದರೂ ಅಧ್ಯಕ್ಷ ಟ್ರಂಪ್‌ ಇದರ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕ್ರೆಮ್ಲಿನ್‌ನ ಸಲಹೆಗಾರರು ಹೇಳಿದ್ದಾರೆ.

ಏನೀ ಒಪ್ಪಂದ?:

2010ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಮತ್ತು ರಷ್ಯಾವನ್ನು ಆಳುತ್ತಿದ್ದ ಡಿಮಿಟ್ರಿ ಮಡ್ವೆಡೆವ್‌, ಉಭಯ ದೇಶಗಳು ಹೊಂದುವ ಅಣ್ವಸ್ತ್ರಗಳ ಮೇಲೆ ನಿರ್ಬಂಧ ವಿಧಿಸಿಕೊಳ್ಳುವ ಸ್ಟಾರ್‌ ಒಪ್ಪಂದಕ್ಕೆ ಸಹಿ ಮಾಡಿದ್ದರು. ಇದರನ್ವಯ ಎರಡೂ ರಾಷ್ಟ್ರಗಳು 1,550ಕ್ಕಿಂತ ಹೆಚ್ಚು ಅಣು ಸಿಡಿತಲೆ, 700ಕ್ಕಿಂತ ಅಧಿಕ ಕ್ಷಿಪಣಿ ಮತ್ತು ಬಾಂಬರ್‌ಗಳನ್ನು ಹೊಂದುವಂತಿಲ್ಲ. 2021ಕ್ಕೆ ಅಂತ್ಯವಾಗಿದ್ದ ಒಪ್ಪಂದವನ್ನು 5 ವರ್ಷ ವಿಸ್ತರಿಸಲಾಗಿತ್ತು.

ಕೊರೋನಾದಿಂದಾಗಿ 2020ರಲ್ಲಿ ಇದು ನಿಂತುಹೋಗಿತ್ತು

ಇದರಡಿ ರಷ್ಯಾ ಮತ್ತು ಅಮೆರಿಕ ತಮ್ಮ ಅಣು ಸಂಗ್ರಹಗಾರವನ್ನು ಪರಸ್ಪರರಿಗೆ ತೋರಿಸುವ ಮೂಲಕ ಒಪ್ಪಂದ ಪಾಲನೆಯನ್ನು ಸಾಬೀತುಪಡಿಸಬೇಕು. ಆದರೆ ಕೊರೋನಾದಿಂದಾಗಿ 2020ರಲ್ಲಿ ಇದು ನಿಂತುಹೋಗಿತ್ತು. ಬಳಿಕ ಉಕ್ರೇನ್‌ ಜತೆ ಯುದ್ಧಕ್ಕಿಳಿದ ರಷ್ಯಾ, ತನ್ನ ವಿರೋಧಿಯೊಂದಿಗೆ ಕೈಜೋಡಿಸಿದ ಅಮೆರಿಕಕ್ಕೆ ತನ್ನ ಶಸ್ತ್ರಾಗಾರದ ಬಾಗಿಲನ್ನು ಮುಚ್ಚಿತು. ಆದರೂ ಒಪ್ಪಂದಕ್ಕೆ ಬದ್ಧವಾಗಿತ್ತು.