ಪ್ರತಿ ದಿನ ಕೆಲಸ ಸುಲಭವಾಗಲು ಸುಲಭದ ಪಾಸ್‌ವರ್ಡ್ ಹಾಕಿದ್ದಾನೆ. ಆದರೆ ಹ್ಯಾಕರ್ಸ್ ಈ ಪಾಸ್‌ವರ್ಡ್ ಗೆಸ್ ಮಾಡಿ ಹ್ಯಾಕ್ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ಅಲ್ಪ ಸ್ವಲ್ಪ ನಷ್ಟವಾಗುತ್ತಿತ್ತು. ಆದರೆ ಖದೀಮರು ಕಂಪನಿಯನ್ನೇ ಹ್ಯಾಕ್ ಮಾಡಿ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಕಂಪನಿಗೆ ಬೀಗ ಬಿದ್ದಿದೆ.
ಲಂಡನ್ (ಜು.22) ಯಾವುದೇ ಪಾಸ್‌ವರ್ಡ್ ಹಾಕುವಾಗ ಸ್ಟ್ರಾಂಗ್ ಇರಬೇಕು. ಫೋನ್ ನಂಬರ್, ಹೆಸರು, ಹುಟ್ಟಿದ ದಿನಾಂಕ ಸೇರಿದಂತೆ ವೀಕ್ ಪಾಸ್‌ವರ್ಡ್ ಹಾಕಲೇ ಬಾರದು. ಪಾಸ್‌ವರ್ಡ್ ಎಂದೇ ಹಾಕುವವರೂ ಇದ್ದಾರೆ. ಇನ್ನು 12345 ಸೇರಿದಂತೆ ಅತ್ಯಂತ ವೀಕ್ ಪಾಸ್‌ವರ್ಡ್ ಸುಲಭವಾಗಿ ಹ್ಯಾಕ್ ಮಾಡುತ್ತಾರೆ. ಈ ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಕ್ರೈಂ ಮೂಲಕ ಮೋಸ ಹೋಗುವವರ ಸಂಖ್ಯೆ ಹೆಚ್ಚಿದೆ. ಇದೀಗ ಉದ್ಯೋಗಿಯೊಬ್ಬ ತನ್ನ ಕೆಲಸಕ್ಕೆ ಸುಲಭವಾಗಲಿ, ಸುಲಭವಾಗಿ ನೆನಪಿನಲ್ಲಿರುವಂತೆ ಪಾಸ್‌ವರ್ಡ್ ನೀಡಿದ್ದಾನೆ. ಆದರೆ ಈ ಪಾಸ್‌ವರ್ಡ್‌ನ್ನು ಹ್ಯಾಕರ್ಸ್ ಊಹಿಸಿ ಹ್ಯಾಕ್ ಮಾಡಿದ್ದಾರೆ. ಇಡೀ ಕಂಪನಿ ಸಿಸ್ಟಮ್ ಹ್ಯಾಕ್ ಮಾಡಲಾಗಿದೆ. ಇದರ ಪರಿಣಾಮ ಕಂಪನಿಗೆ ಬೀಗ ಬಿದ್ದಿದೆ. ಇಷ್ಟೇ ಅಲ್ಲ 700 ಉದ್ಯೋಗಿಗಳು ಬೀದಿಗೆ ಬಿದ್ದ ಘಟನೆ ಯುಕೆಯಲ್ಲಿ ನಡೆದಿದೆ.
150 ವರ್ಷದ ಹಳೇ ಕಂಪನಿಗೆ ಕನ್ನ ಹಾಕಿದ ಖದೀಮರು
ಯುಕೆಯ ಟ್ರಾನ್ಸ್‌ಪೋರ್ಟ್ ಕಂಪನಿ ಕೆಎನ್‌ಪಿ ಲಾಜಿಸ್ಟಿಕ್ ಬರೋಬ್ಬರಿ 150 ವರ್ಷಗಳಿಂದ ಯಾವುದೇ ಅಡೆ ತಡೆ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. 500 ಟ್ರಕ್ , ಮಿನಿ ಲಾರಿ ಸೇರಿದಂತೆ ಹಲವು ವಾಣಿಜ್ಯ ವಾಹನಗಳ ಮೂಲಕ ಸೇವೆ ನೀಡುತ್ತಿತ್ತು. ಕೆಲ ದಶಕಗಳ ಹಿಂದೆ ಈ ಕೆಎನ್‌ಪಿ ಕಂಪನಿ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿತ್ತು. 150 ವರ್ಷ ಹಳೇ ಕಂಪನಿಗೆ ಹ್ಯಾಕರ್ಸ್ ಕನ್ನ ಹಾಕಿ ಉದ್ಯೋಗಿಗಳು ಬೀದಿಗೆ ಬರುವಂತೆ ಮಾಡಿದ್ದಾರೆ.
ಉದ್ಯೋಗಿ ಹಾಕಿದ ವೀಕ್ ಪಾಸ್‌ವರ್ಡ್ ಎಡವಟ್ಟು
ಕೆಎನ್‌ಪಿ ಕಂಪನಿಯ ಉದ್ಯೋಗಿ ತನ್ನ ಕೆಲಸ ಸುಲಭವಾಗಲು ವೀಕ್ ಪಾಸ್‌ವರ್ಡ್ ಹಾಕಿದ್ದಾನೆ. ಹ್ಯಾಕರ್ಸ್ ಈ ಪಾಸ್‌ವರ್ಡ್ ಹ್ಯಾಕ್ ಮಾಡಲು ಹೆಚ್ಚಿನ ಶ್ರಮವಹಿಸಿಲ್ಲ. ಉದ್ಯೋಗಿ ಹಾಗೂ ಕಂಪನಿ ಗೆಸ್ ಮಾಡಿ ಪಾಸ್‌ವರ್ಡ್ ಹಾಕಿ ಯಶಸ್ವಿಯಾಗಿದ್ದಾರೆ. ಕಂಪನಿಯ ಇಡೀ ಸಿಸ್ಟಮ್ ಹ್ಯಾಕರ್ಸ್ ಕೈಗೆ ಸಿಕ್ಕಿದೆ. ಎನ್‌ಸ್ಕ್ರಿಪ್ಶನ್ ಡೇಟಾ ಸೇರಿದಂತೆ ಎಲ್ಲವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಕೆಲವೇ ಕ್ಷಣದಲ್ಲಿ ಕಂಪನಿಯ ಸಿಸ್ಟಮ್ ಕಾರ್ನಿರ್ವಹಿಸುತ್ತಿಲ್ಲ.ನೌಕರರಿಗೆ ಲಾಗಿನ್ ಸಾಧ್ಯವಾಗದೇ ಪರದಾಡಿದ್ದಾರೆ.
ಫರ್ಗೆಟ್ ಪಾಸ್‌ವರ್ಡ್ ಪ್ರಯತ್ನಿಸಿದ್ದ ಉದ್ಯೋಗಿಗಳು
ಆರಂಭದಲ್ಲಿ ತಮಗೆ ಸಮಸ್ಯೆಯಾಗುತ್ತಿದೆ ಎಂದು ಫರ್ಗೆಟ್ ಪಾಸ್‌ವರ್ಡ್ ಸೇರಿದಂತೆ ಹಲವು ಸರ್ಕಸ್ ಮಾಡಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಕೆಲವೇ ಕ್ಷಣದಲ್ಲಿ ಇಡೀ ಕಂಪನಿಯಲ್ಲಿ ಸಮಸ್ಯೆಯಾಗಿದೆ ಅನ್ನೋದು ಅರಿವಾಗಿದೆ. ಕಂಪನಿ ಡೈರೆಕ್ಟರ್ ಪೌಲ್ ಅಬೋಟ್ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಆದರ ಪರಿಸ್ಥಿತಿ ಕೈಮೀರಿತ್ತು. ಯುಕೆಯಲ್ಲಿ ಕುಖ್ಯಾತಿಯಾಗಿರುವ ಅಕಿರಾ ಗ್ಯಾಂಗ್ ಈ ಹ್ಯಾಕಿಂಗ್ ಮಾಡಿದೆ ಅನ್ನೋದು ಬಯಲಾಗಿದೆ. ಕಾರಣ ಈ ಗ್ಯಾಂಗ್ ಬರೋಬ್ಬರಿ 5 ಮಿಲಿಯನ್ ಪೌಂಡ್ ಹಣಕ್ಕೆ ಬೇಡಿಕೆ ಇಟ್ಟಿದೆ. ಇಷ್ಟು ಹಣ ನೀಡಲು ಕೆಎನ್‌ಪಿ ಸಂಸ್ಥೆಗೆ ಸಾಧ್ಯವಾಗಿಲ್ಲ. ಹೀಗಾಗಿ ಹ್ಯಾಕರ್ಸ್ ಸಂಪೂರ್ಣ ಡೇಟಾ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಹ್ಯಾಕರ್ಸ್‌ನಿಂದ ಕಂಪನಿಗೆ ಬೀಗ, ಉದ್ಯೋಗ ಕಳೆದುಕೊಂಡ 700 ಮಂದಿ
ಹ್ಯಾಕರ್ಸ್ ಸಂಪೂರ್ಣ ನಿಯಂತ್ರಣ ತೆಗೆದುಕೊಡಿದ್ದಾರೆ. ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಹ್ಯಾಕರ್ಸ್ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇತ್ತ ಡೆಡ್‌ಲೈನ್ ಕೂಡ ಮುಗಿದಿದೆ. ಕಂಪನಿ ಬಾಗಿಲು ಮುಚ್ಚಬೇಕಾಗಿದೆ. ಇತ್ತ 700 ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
