ನಗುವ ಎಮೋಜಿ ಹಾಕಿ, ‘ಉಳಿದೆಲ್ಲವೂ ಕ್ರ್ಯಾಶ್ ಆಗಿದ್ದರೂ, ಎಕ್ಸ್‌ ಇನ್ನೂ ಕಾರ್ಯನಿರ್ವಹಿಸುತ್ತಿದೆ’ ಎಂದಿದ್ದಾರೆ ಹಾಗೂ ಆರಾಮವಾಗಿ ಸಿಗರೇಟು ಸೇದುತ್ತ ಮಲಗಿರುವ ವ್ಯಕ್ತಿಯ ಚಿತ್ರ ಲಗತ್ತಿಸಿದ್ದಾರೆ.

ನವದೆಹಲಿ (ಜು 20): ಮೈಕ್ರೋಸಾಫ್ಟ್‌ ವ್ಯವಸ್ಥೆಯು ವಿಶ್ವಾದ್ಯಂತ ಡೌನ್‌ ಆದ ಬೆನ್ನಲ್ಲೇ ಟ್ವೀಟರ್ (ಎಕ್ಸ್) ಮಾಲೀಕ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರು ವ್ಯಂಗ್ಯದ ಟ್ವೀಟ್‌ಗಳನ್ನು ಮಾಡಿದ್ದಾರೆ.ಒಂದು ಟ್ವೀಟ್‌ನಲ್ಲಿ ಅವರು ಮೈಕ್ರೋಸಾಫ್ಟ್‌ ಅನ್ನು ‘ಮೈಕ್ರೋಹಾರ್ಡ್‌’ ಎಂದು ವ್ಯಂಗ್ಯವಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಅವರು, ನಗುವ ಎಮೋಜಿ ಹಾಕಿ, ‘ಉಳಿದೆಲ್ಲವೂ ಕ್ರ್ಯಾಶ್ ಆಗಿದ್ದರೂ, ಎಕ್ಸ್‌ ಇನ್ನೂ ಕಾರ್ಯನಿರ್ವಹಿಸುತ್ತಿದೆ’ ಎಂದಿದ್ದಾರೆ ಹಾಗೂ ಆರಾಮವಾಗಿ ಸಿಗರೇಟು ಸೇದುತ್ತ ಮಲಗಿರುವ ವ್ಯಕ್ತಿಯ ಚಿತ್ರ ಲಗತ್ತಿಸಿದ್ದಾರೆ.

ಕೇಂದ್ರ ಐಟಿ ಖಾತೆ ಸಚಿವ ಅಶ್ವಿನಿ ವೈಷ್ಣವ್‌

ಜಾಗತಿಕವಾಗಿ ಸೇವೆಗಳಲ್ಲಿ ಆಗಿರುವ ವ್ಯತ್ಯಯದ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೈಕ್ರೋಸಾಫ್ಟ್‌ನೊಂದಿಗೆ ಸಂಪರ್ಕದಲ್ಲಿದೆ. ಸಮಸ್ಯೆಗೆ ಏನು ಕಾರಣ ಎಂಬುದು ಪತ್ತೆಯಾಗಿದೆ. ಸಮಸ್ಯೆ ಪರಿಹಾರಕ್ಕೆ ಅಪ್ಡೇಟ್‌ ಕೂಡಾ ಬಿಡುಗಡೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿವಿಧ ರೀತಿಯ ಸೇವೆ ನೀಡುವ ಎನ್‌ಐಸಿ (ನ್ಯಾಷನಲ್‌ ಇನ್‌ಫಾಮ್ರ್ಯಾಟಿಕ್ಸ್‌ ಸೆಂಟರ್‌) ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಕೇಂದ್ರ ಐಟಿ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಇತ್ಯರ್ಥದ ವಿಶ್ವಾಸವಿದೆ

ಮೈಕ್ರೋಸಾಫ್ಟ್ 365 ಮತ್ತು ಮೈಕ್ರೋಸಾಫ್ಟ್ ಸೂಟ್ ಅನ್ನು ಲಕ್ಷಾಂತರ ಭಾರತೀಯರು ಬಳಸುತ್ತಾರೆ... ಈ ವೇದಿಕೆಯಲ್ಲಿ ಯಾವುದೇ ಸ್ಥಗಿತವು ಅನೇಕ ಕಂಪನಿಗಳ ವ್ಯವಹಾರ ಮತ್ತು ಕಾರ್ಯಾಚರಣೆಯನ್ನು ಅಡ್ಡಿಪಡಿಸುತ್ತದೆ. ಮೈಕ್ರೋಸಾಫ್ಟ್ ಮರುಸ್ಥಾಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಸೇವೆಗಳನ್ನು ತ್ವರಿತವಾಗಿ ಸೇವೆಗಳನ್ನು ಶೀಘ್ರವಾಗಿ ಮರುಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಮೈಕ್ರೋಸಾಫ್ಟ್‌ನೊಂದಿಗೆ ತೊಡಗಿಸಿಕೊಳ್ಳುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಮಾಜಿ ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರಿಗೆ ನೆರವಾಗಲು ಸೂಚನೆ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಸಚಿವಾಲಯವು ಹಸ್ತಚಾಲಿತ (ಮ್ಯಾನುವಲ್‌) ವಿಧಾನವನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಸಕ್ರಿಯವಾಗಿ ನಿರ್ವಹಿಸುತ್ತಿದೆ. ಪ್ರಯಾಣಿಕರಿಗೆ ತಮ್ಮ ವಿಮಾನದ ಸ್ಥಿತಿಯ ಬಗ್ಗೆ ತಿಳಿಸಲು ಮತ್ತು ಅಗತ್ಯ ನೆರವು ನೀಡಲು ನಾವು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ, ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಮಾಹಿತಿ ನೀಡಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…