Asianet Suvarna News Asianet Suvarna News

ಡ್ರಗ್ಸ್ ಸೇವನೆ ಟೆಸ್ಲಾ ಕಂಪನಿ ಮುನ್ನಡೆಸಲು ನೆರವು: ಎಲಾನ್‌ ಮಸ್ಕ್‌

ಮಾನಸಿಕ ಖಿನ್ನತೆ ತಾವು ಪಡೆದುಕೊಳ್ಳುತ್ತಿರುವ ಕೆಟಾಮಿನ್‌ ಎಂಬ ಡ್ರಗ್‌ ತಾವು ಟೆಸ್ಲಾ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಲು ನೆರವು ನೀಡಿದೆ ಎಂದು ವಿಶ್ವದ ಟಾಪ್‌ ಶ್ರೀಮಂತರ ಪೈಕಿ ಒಬ್ಬರಾದ ಎಲಾನ್‌ ಮಸ್ಕ್‌ ಹೇಳಿದ್ದಾರೆ.

Elon Musk Opens Up About Drug Use Claims It Helps Him In Running Tesla gvd
Author
First Published Mar 20, 2024, 8:03 AM IST

ನ್ಯೂಯಾರ್ಕ್‌ (ಮಾ.20): ಮಾನಸಿಕ ಖಿನ್ನತೆ ತಾವು ಪಡೆದುಕೊಳ್ಳುತ್ತಿರುವ ಕೆಟಾಮಿನ್‌ ಎಂಬ ಡ್ರಗ್‌ ತಾವು ಟೆಸ್ಲಾ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಲು ನೆರವು ನೀಡಿದೆ ಎಂದು ವಿಶ್ವದ ಟಾಪ್‌ ಶ್ರೀಮಂತರ ಪೈಕಿ ಒಬ್ಬರಾದ ಎಲಾನ್‌ ಮಸ್ಕ್‌ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಸ್ಕ್‌ ಡ್ರಗ್ಸ್‌ ಸೇವಿಸುತ್ತಾರೆ. ಅವರ ಈ ಅಭ್ಯಾಸ ಟೆಸ್ಲಾ ಸೇರಿದಂತೆ ಅವರ ವಿವಿಧ ಕಂಪನಿಗಳ ಆಡಳಿತ ಮಂಡಳಿ ಸದಸ್ಯರಲ್ಲಿ ಕಳವಳಕ್ಕೆ ಕಾರಣವಾಗಿದೆ ಎಂದು ವರದಿಯಾಗಿತ್ತು.

ಅದರ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ತಮ್ಮ ಡ್ರಗ್ಸ್‌ ಸೇವನೆ ಕುರಿತು ಮುಕ್ತವಾಗಿ ಮಾತನಾಡಿರುವ ಎಲಾನ್‌ ಮಸ್ಕ್‌ ‘ಕೆಲವೊಂದು ವೇಳೆ ನನ್ನ ಮಾನಸಿಕ ಸ್ಥಿತಿ ನಕಾರಾತ್ಮಕವಾಗಿರುತ್ತದೆ, ಅದನ್ನು ಮಾನಸಿಕ ಖಿನ್ನತೆ ಎನ್ನಬಹುದು. ಆದರೆ ಇಂಥ ವೇಳೆ ವೈದ್ಯರ ಮೇರೆಗೆ ನಾನು ವಾರಕ್ಕೆ ಒಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಕೆಟಾಮಿನ್‌ ಸೇವಿಸುತ್ತೇನೆ. ಇದು ನಾನು ನಕಾರಾತ್ಮಕ ಮನಸ್ಥಿತಿಯಿಂದ ಹೊರಬರಲು ನೆರವಾಗುತ್ತದೆ. ದಿನಕ್ಕೆ 16 ಗಂಟೆಗಿಂತ ಹೆಚ್ಚಿನ ಕೆಲಸ ಮಾಡಲು ನೆರವಾಗುತ್ತದೆ. ಆದರೆ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಅದು ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಎಲಾನ್ ಮಸ್ಕ್ ಕೈಜಾರಿದ ವಿಶ್ವದ ನಂ.1 ಶ್ರೀಮಂತನ ಪಟ್ಟ ಜೆಫ್ ಬೆಜೋಸ್ ಪಾಲು: ಎಲಾನ್ ಮಸ್ಕ್ ಈಗ ವಿಶ್ವದ ನಂ.1 ಶ್ರೀಮಂತನಾಗಿ ಉಳಿದಿಲ್ಲ. ಈ ಸ್ಥಾನ ಈಗ ಅಮೆಜಾನ್ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜೆಫ್ ಬೆಜೋಸ್ ಪಾಲಾಗಿದೆ. ಒಂಭತ್ತಕ್ಕೂ ಅಧಿಕ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಎಲಾನ್ ಮಸ್ಕ್ ವಿಶ್ವದ ಶ್ರೀಮಂತನ ಪಟ್ಟ ಕಳೆದುಕೊಂಡಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಸೋಮವಾರ ಟೆಸ್ಲಾ ಇಂಕ್ ಷೇರುಗಳು ಶೇ. 7.2ರಷ್ಟು ಇಳಿಕೆ ಕಂಡ ಬೆನ್ನಲ್ಲೇ ಮಸ್ಕ್ ಸಂಪತ್ತಿನಲ್ಲಿ ಇಳಿಕೆಯಾಗಿದೆ. ಪ್ರಸ್ತುತ ಮಸ್ಕ್ ನಿವ್ವಳ ಸಂಪತ್ತು 197.7 ಬಿಲಿಯನ್ ಡಾಲರ್ ಇದ್ದರೆ, ಬೆಜೋಸ್ ಸಂಪತ್ತು 200.3 ಬಿಲಿಯನ್ ಡಾಲರ್ ಇದೆ. 

ಎಲಾನ್‌ ಮಸ್ಕ್ ಮಾಡೋ ಭಾರತೀಯ ಸಿದ್ಧಿ ಪರಂಪರೆಯ ಶಕ್ತಿ ಮುದ್ರೆ ನೀವೂ ಮಾಡಬಹುದು, ಇದರ ಪ್ರಯೋಜನವೇನು?

2021ರ ಬಳಿಕ ಇದೇ ಮೊದಲ ಬಾರಿಗೆ 60 ವರ್ಷ ವಯಸ್ಸಿನ ಅಮೆಜಾನ್  ಸ್ಥಾಪಕ ಬೆಜೋಸ್ ಬ್ಲೂಮ್ ಬರ್ಗ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಒಂದು ಸಮಯದಲ್ಲಿ ಮಸ್ಕ್ ಹಾಗೂ ಬೆಜೋಸ್ ನಡುವಿನ ಸಂಪತ್ತಿನ ಅಂತರ 142 ಬಿಲಿಯನ್ ಡಾಲರ್ ಇತ್ತು. ಆದರೆ, ಅಮೆಜಾನ್ ಹಾಗೂ ಟೆಸ್ಲಾ ಷೇರುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸಿದ ಬೆನ್ನಲ್ಲೇ ಈ ಅಂತರ ತಗ್ಗಿದೆ. ಅಮೆಜಾನ್ ಹಾಗೂ ಟೆಸ್ಲಾ ಅಮೆರಿಕದ ಇಕ್ವಿಟಿ ಮಾರುಕಟ್ಟೆಯಲ್ಲಿ ಸೆವೆನ್ ಸ್ಟಾಕ್ಸ್ ಸ್ಥಾನ ಪಡೆದಿವೆ. ಅಮೆಜಾನ್ ಷೇರುಗಳ ಮೌಲ್ಯ 2022ರ ಅಂತ್ಯದಿಂದ ಈ ತನಕ ದುಪ್ಪಟ್ಟಾಗಿದೆ. ಇನ್ನೊಂದೆಡೆ ಟೆಸ್ಲಾ ಷೇರುಗಳ ಮೌಲ್ಯ 2021ರಲ್ಲಿ ಅತ್ಯಧಿಕ ಮಟ್ಟದಲ್ಲಿದ್ದರೆ, ಆ ಬಳಿಕ ಶೇ.50ರಷ್ಟು ಇಳಿಕೆ ಕಂಡಿವೆ. 

Follow Us:
Download App:
  • android
  • ios