Asianet Suvarna News Asianet Suvarna News

ಎಲಾನ್‌ ಮಸ್ಕ್ ಮಾಡೋ ಭಾರತೀಯ ಸಿದ್ಧಿ ಪರಂಪರೆಯ ಶಕ್ತಿ ಮುದ್ರೆ ನೀವೂ ಮಾಡಬಹುದು, ಇದರ ಪ್ರಯೋಜನವೇನು?

ಎಲಾನ್ ಮಸ್ಕ್ ಅವರ ಕೆಲವು ಇಂಟರ್‌ವ್ಯೂ ನೋಡಿದರೆ ಅವರ ಕೈ ಶಕ್ತಿ ಮುದ್ರೆಯಲ್ಲಿರುವುದು ಗಮನಿಸಬಹುದು. ಶಕ್ತಿ ಮುದ್ರೆಯ ಶಕ್ತಿ ನಿಮ್ಮ ಊಹೆಯನ್ನೂ ಮೀರಿದ್ದು.

Shakthi mudras to increase inner energy what tesla motors CEO Elon musk does bni
Author
First Published Mar 18, 2024, 12:19 PM IST

ಶಕ್ತಿ ಮುದ್ರೆ ಅನ್ನೋ ಹೆಸರಲ್ಲೇ ಏನೋ ಇದೆ. ಮುದ್ರೆ ಅಂದರೆ ಇದು ಯೋಗ, ಧ್ಯಾನಕ್ಕೆ ಸೇರಿದ್ದು. ಅಂದರೆ ಭಾರತೀಯ ಯೋಗ ಪರಂಪರೆಯ ಸಿದ್ಧಿ. ಆದರೆ ಇಂದು ಇದನ್ನು ಅತೀ ಹೆಚ್ಚು ಬಳಕೆ ಮಾಡುತ್ತಿರುವವರು ಜಗತ್ಪ್ರಸಿದ್ಧ ವ್ಯಕ್ತಿಗಳು. ಎಕ್ಸ್‌ ಅಥವಾ ಟ್ವಿಟರ್ ಸೇರಿದಂತೆ ಜಗತ್ತಿನ ಹಲವು ಉದ್ಯಮಗಳ ಹಿಂದಿನ ಪವರ್ ಫುಲ್ ಹೆಸರು ಎಲಾನ್ ಮಸ್ಕ್. ಅವರೂ ಈ ಶಕ್ತಿ ಮುದ್ರೆಯನ್ನು ಮಾಡುತ್ತಾರೆ. ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಸಂದರ್ಶನದ ವೇಳೆ ಕೈಗಳನ್ನು ಮಂಡಿ ಮೇಲೆ ಇಟ್ಟುಕೊಂಡು ಶಕ್ತಿ ಮುದ್ರೆ ಮಾಡಿದ್ದಾರೆ. ಜನಪ್ರಿಯ ನಟ ರಾಬರ್ಟ್‌ ಡೌನಿ ಜೂ. ಕೂಡ ಇದೇ ರೀತಿಯ ಮುದ್ರೆ ಮಾಡಿರುವುದನ್ನು ಹಲವಾರು ಚಿತ್ರಗಳಲ್ಲಿ ಕಾಣಬಹುದು.

ಇದರ ಉಪಯೋಗ ತಿಳಿದರೆ ನೀವೂ ಈ ಮುದ್ರೆಯನ್ನು ಮಾಡುವಿರಿ. ಮುದ್ರೆಗಳು ನಮ್ಮ ಎನರ್ಜಿಯನ್ನು ಉದ್ದೀಪಿಸುವ ತಂತ್ರ. ಮಾನಸಿಕ, ದೈಹಿಕ ಚೈತನ್ಯ ಶಕ್ತಿ ಉದ್ದೀಪನಕ್ಕೂ ಇವು ಸಹಕಾರಿ. ಅದರಲ್ಲೂ ನಮ್ಮ ಇಂದಿನ ಬದುಕಿಗೆ ಬಹಳ ಪೂರಕವಾಗಿ ಇರುವಂಥಾದ್ದು.

ಇಂದು ನಮ್ಮ ಜೀವನವನ್ನು ಒತ್ತಡ ಹಾಗೂ ಆತಂಕಗಳಿಲ್ಲದೇ ಊಹಿಸಲಾಗದು. ಈ ಒತ್ತಡದಿಂದ ಹಲವಾರು ಸಮಸ್ಯೆಗಳು ಕೂಡ ಬರುತ್ತಿದೆ. ಆದರೆ ಎಷ್ಟೇ ಕೆಲಸದಲ್ಲಿ ವ್ಯಸ್ತರಾಗಿದ್ದರೂ ಕೆಲವರು ಆಂತರಿಕ ಶಕ್ತಿಯ ಬಲದಿಂದ ಸದಾ ಚೈತನ್ಯಮುಖಿಗಳಾಗಿ ಕಾಣುವರು. ಈ ಕುಗ್ಗದ ಉತ್ಸಾಹ ಅವರನ್ನು ಎಲ್ಲಾರಂಗದಲ್ಲೂ ಮತ್ತಷ್ಟು ಬಲಿಷ್ಠಗೊಳಿಸಲು ಸಹಕಾರಿ ಆಗಿದೆ. ಇದಕ್ಕಾಗಿ ಅವರು ಕೆಲವು ಮುದ್ರೆಗಳನ್ನು ಅಭ್ಯಾಸ ಮಾಡುವರು. ಇದು ಯೋಗಾಭ್ಯಾಸದ ಒಂದು ಭಾಗ ಕೂಡ.

ಈ ರಾಶಿಯವರು ಗುಡ್‌ ಲವರ್, ಅವರು ತೋರಿಸುವ ಪ್ರೀತಿ ಹೂವಿನಂತೆ

ಮುದ್ರೆಗಳಿಂದ ದೇಹದಲ್ಲಿ ಶಕ್ತಿಯನ್ನು ವೃದ್ಧಿಸಿ, ಮನಸ್ಸನ್ನು ಏಕಾಗ್ರತೆಗೊಳಿಸಲು ಸಹಕಾರಿ ಆಗುವುದು. ಅದರಲ್ಲೂ ಹೆಚ್ಚಿನವರು ಶಕ್ತಿ ಮುದ್ರೆಯನ್ನು ಅಭ್ಯಾಸ ಮಾಡಿ ಆಂತರಿಕ ಶಕ್ತಿಯನ್ನು ಹೆಚ್ಚಿಸುವರು. ಇಂತಹ ಶಕ್ತಿ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಹಲವು ಲಾಭಗಳಿವೆ.

ಶಕ್ತಿ ಮುದ್ರೆಯು ಮನಸ್ಸು ಹಾಗೂ ದೇಹಕ್ಕೆ ತುಂಬಾ ಒಳ್ಳೆಯದು. ಮೊದಲಿಗೆ ಇದು ದೇಹದಲ್ಲಿ ಶಕ್ತಿಯ ಪ್ರಸಾರವನ್ನು ನಿಯಂತ್ರಿಸುವುದು ಮತ್ತು ಇದರಿಂದ ನೀವು ಹೆಚ್ಚು ಶಕ್ತಿ ಭಾವನೆ ಅಥವಾ ಪಡೆಯುವಿರಿ. ಶಕ್ತಿ ಮುದ್ರೆಯು ಏಕಾಗ್ರತೆ ವೃದ್ಧಿ ಮಾಡುವುದು. ಜೀವನದಲ್ಲಿ ಸ್ಪಷ್ಟತೆ ಬೇಕಿರುವವರಿಗೆ ಈ ಮುದ್ರೆಯ ಸಹಾಯ ಪಡೆಯಬಹುದು. ಶಕ್ತಿ ಮುದ್ರೆ ಅಭ್ಯಾಸ ಮಾಡಿಕೊಂಡರೆ ಆಗ ಖಂಡಿತವಾಗಿಯೂ ಇದು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು.

ಹಾಗಂತ ಈ ಮುದ್ರೆ ಮಾಡಲು ಬಹಳ ಕಷ್ಟಪಡಬೇಕಾಗಿಲ್ಲ. ಶಕ್ತಿ ಮುದ್ರೆಯು ತುಂಬಾ ಸರಳ. ಆದರೆ ಶಕ್ತಿಶಾಲಿಯಾಗಿದೆ. ಇದನ್ನು ನಿತ್ಯವೂ ಅಭ್ಯಾಸ ಮಾಡಿದರೆ, ಆಗ ಇದರ ಫಲಿತಾಂಶವು ಸಿಗುವುದು. ನೆಲದ ಮೇಲೆ ಅಥವಾ ಕುರ್ಚಿಯಲ್ಲಿ ಕುಳಿತುಕೊಂಡು ಬೆನ್ನನ್ನು ನೇರವಾಗಿಟ್ಟುಕೊಳ್ಳಿ ಮತ್ತು ಭುಜಗಳು ಆರಾಮವಾಗಿರಲಿ. ಕೈಗಳನ್ನು ಮಂಡಿಯ ಭಾಗಕ್ಕೆ ತನ್ನಿ ಮತ್ತು ಅಂಗೈಯು ಮೇಲ್ಮುಖವಾಗಿರಲಿ.

ಇವರು ಹಣದ ವಿಷಯದಲ್ಲಿ ಅದೃಷ್ಟವಂತರು, ಗಳಿಕೆಯ ಅವಕಾಶ ಕಳೆದು ಕೊಳ್ಳಲ್ಲ

ಈಗ ಎರಡೂ ಹೆಬ್ಬೆರಳಿನ ತುದಿಗಳು ಪರಸ್ಪರ ಸ್ಪರ್ಶಿಸಲಿ. ಬಳಿಕ ತೋರುಬೆರಳುಗಳ ತುದಿಗಳನ್ನು ಸ್ಪರ್ಶಿಸಿ. ಬೇರೆ ಬೆರಳುಗಳು ಆರಾಮವಾಗಿ ಇರಲಿ. ಇದೇ ಮುದ್ರೆಯಲ್ಲಿ ಕೆಲವು ಸಲ ಉಸಿರಾಡಿ. ತುಂಬಾ ಶಾಂತಿಯಿಂದ ಇದನ್ನು ಮಾಡಿ. ಬೆರಳಿನ ಮೂಲಕ ಶಕ್ತಿಯು ಹರಿದು ದೇಹ ಸೇರುವುದು. ದೇಹದಲ್ಲಿ ಕೇವಲ ಶಕ್ತಿ ಮಾತ್ರವಲ್ಲದೆ, ಶಾಂತಿಯು ನೆಲೆಸುವುದು.

ಪ್ರತಿಯೊಬ್ಬರ ದೇಹದಲ್ಲಿ ಕೂಡ ಈ ಆಂತರಿಕ ಶಕ್ತಿ ಎನ್ನುವುದು ಇರುವುದು. ಆದರೆ ಇದನ್ನು ಯಾವ ರೀತಿ ಬಳಸಿಕೊಳ್ಳುವುದು ಎನ್ನುವುದು ತಿಳಿಯದು. ಶಕ್ತಿ ಮುದ್ರೆಯನ್ನು ಅಭ್ಯಾಸ ಮಾಡಿದ ವೇಳೆ ಅದು ದೇಹದಲ್ಲಿ ಆಂತರಿಕ ಶಕ್ತಿ ಹೊರಸೂಸುವುದು. ಶಕ್ತಿ ಮುದ್ರೆಯನ್ನು ಅಭ್ಯಾಸ ಮಾಡಿದರೆ ಆಗ ಈ ಶಕ್ತಿಯು ಯಾವುದೇ ಸವಾಲುಗಳನ್ನು ಎದುರಿಸಲು ಸಹಕಾರಿ ಆಗುವುದು. ನಿಯಮಿತವಾಗಿ ಇದನ್ನು ಅಭ್ಯಾಸ ಮಾಡಿದರೆ ಆಗ ಇದು ನಮ್ಮೊಳಗೆ ಅಡಗಿರುವ ಸಾಮರ್ಥ್ಯಗಳನ್ನು ಹೊರಗೆ ತರಲು ಸಹಕಾರಿ.

ಶಕ್ತಿ ಮುದ್ರೆಯನ್ನು ಕೇವಲ ಯೋಗಿಗಳು ಅಥವಾ ಸನ್ಯಾಸಿಗಳು ಮಾತ್ರ ಅಭ್ಯಾಸ ಮಾಡುತ್ತಿಲ್ಲ. ಇದನ್ನು ವಿಶ್ವದೆಲ್ಲೆಡೆಯ ಜನಪ್ರಿಯ ವ್ಯಕ್ತಿಗಳು ಕೂಡ ಅಭ್ಯಾಸ ಮಾಡುವರು. ಇದು ಅವರ ಚೈತನ್ಯ ಹೆಚ್ಚಿಸುತ್ತದೆ.

Follow Us:
Download App:
  • android
  • ios