Asianet Suvarna News Asianet Suvarna News

ಆಮಿಷ, ಒತ್ತಡ ಹೇರಿ ಸ್ಪೆಸ್‌ಎಕ್ಸ್ ಮಹಿಳಾ ಉದ್ಯೋಗಿ ಜೊತೆ ಸೆಕ್ಸ್, ಸಂಕಷ್ಟದಲ್ಲಿ ಸಿಲುಕಿದ ಎಲಾನ್ ಮಸ್ಕ್!

ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಕಂಪನಿಯ ಒಬ್ಬೊಬ್ಬ ಮಹಿಳಾ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿರುವ ಮಸ್ಕ್, ಆಮಿಷ, ಒತ್ತಡ ಹೇರಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ತನ್ನ ಮಗುವಿಗೆ ತಾಯಿಯಾಗು ಎಂದು ಹಲವರನ್ನು ಬಳಸಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ.

Elon Musk forced to have physical relationship with Tesla SpaceX employee says Report ckm
Author
First Published Jun 12, 2024, 3:53 PM IST

ಕ್ಯಾಲಿಫೋರ್ನಿಯಾ(ಜೂ.12) ಟೆಸ್ಲಾ, ಸ್ಪೆಸ್ ಎಕ್ಸ್, ಟ್ವಿಟರ್ ಸೇರಿದಂತೆ ವಿಶ್ವದ ಅತೀ ದೊಡ್ಡ ಕಂಪನಿಗಳ ಮಾಲೀಕ, ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮೇಲೆ ಮಹಿಳಾ ಉದ್ಯೋಗಿಗಳನ್ನು ಲೈಂಗಿಕವಾಗಿ ಬಳಸಿಕೊಂಡ ಗಂಭೀರ ಆರೋಪ ಕೇಳಿಬಂದಿದೆ. ಸ್ಪೆಸ್ ಎಕ್ಸ್ ಹಾಗೂ ಟೆಸ್ಲಾ ಮಹಿಳಾ ಉದ್ಯೋಗಿಗಳನ್ನೇ ಮಸ್ಕ್ ಟಾರ್ಗೆಟ್ ಮಾಡುತ್ತಿದ್ದಾರೆ. ಓರ್ವ ಮಹಿಳಾ ಉದ್ಯೋಗಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಬಳಿಕ ತನ್ನ ಮಗುವಿಗೆ ತಾಯಿಯಾಗುವಂತೆ ಆಮಿಷ ಹಾಗೂ ಒತ್ತಡ ಹೇರಿದ್ದಾರೆ ಎಂಬ ಆರೋಪ ಇದೀಗ ಕೋಹಾಲ ಸೃಷ್ಟಿಸಿದೆ.

ಎಲಾನ್ ಮಸ್ಕ್ ಕಚೇರಿಯಲ್ಲಿ ಸೃಷ್ಟಿಸುವ ಅಸಭ್ಯ ಸಂಸ್ಕೃತಿಯಿಂದ ಮಹಿಳಾ ಉದ್ಯೋಗಿಗಳು ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕೊಕೇನ್ ಸೇರಿದಂತೆ ಇತರ ಕೆಲ ಡ್ರಗ್ಸ್ ಸೇವಿಸುವ ಎಲಾನ್ ಮಸ್ಕ್, ಮಹಿಳಾ ಉದ್ಯೋಗಿಗಳನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಮಾಧ್ಯಮ ವರದಿ ಮಾಡಿದೆ.

ನಾನು ಏಲಿಯನ್‌, ಆದ್ರೆ ಇದನ್ನ ಜನರೇ ನಂಬುತ್ತಿಲ್ಲ ಎಂದ ಎಲಾನ್‌ ಮಸ್ಕ್‌!

ಸ್ಪೇಸ್ ಎಕ್ಸ್ ಫ್ಲೈಟ್ ಅಟೆಂಡೆಂಟ್ ಈ ಕುರಿತು ಗಂಭೀರ ಆರೋಪ ಮಾಡಿರುವುದಾಗಿ  ವಾಲ್ ಸ್ಟ್ರೀಟ್ ವರದಿ ಮಾಡಿದೆ. ಈ ಮಹಿಳಾ ಉದ್ಯೋಗಿಯ ಸಾಕುತ್ತಿದ್ದ ಕುದುರೆಯನ್ನು ದುಪ್ಪಟ್ಟ ಹಣ ನೀಡಿ ಎಲಾನ್ ಮಸ್ಕ್ ಖರೀದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತನ್ನ ಜೊತೆ ಸೆಕ್ಸ್ ನಡೆಸುವಂತೆ ಒತ್ತಾಯಿಸಿದ್ದಾನೆ. ಈ ಘಟನೆ ಬೆನ್ನಲ್ಲೇ ಮಹಿಳಾ ಉದ್ಯೋಗಿ ರಾಜೀನಾಮೆ ನೀಡಿ ಕಂಪನಿಯಿಂದ ಹೊರಬಂದಿದ್ದಾರೆ.

2013ರಲ್ಲಿ ಸ್ಪೆಸ್ ಎಕ್ಸ್ ಮಹಿಳಾ ಉದ್ಯೋಗಿಯನ್ನು ಕರೆಯಿಸಿ ಕೆಲ ಆಮಿಷ ಒಡ್ಡಿದ ಎಲಾನ್ ಮಸ್ಕ್, ತನ್ನ ಮಕ್ಕಳಿಗೆ ತಾಯಿಯಾಗುವಂತೆ ಒತ್ತಾಯಿಸಿದ್ದಾನೆ ಎಂದು ಮಹಿಳಾ ಉದ್ಯೋಗಿ ಆರೋಪಿಸಿದ್ದಾರೆ. ಎಲಾನ್ ಮಸ್ಕ್ ಜೊತೆ ಸುದೀರ್ಘ ದಿನಗಳಿಂದ  ಮಹಿಳಾ ಉದ್ಯೋಗಿ ದೈಹಿಕ ಸಂಬಂಧ ಹೊಂದಿದ್ದಳು. ಆದರೆ ದಿಢೀರ್ ಇವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ ಮಹಿಳಾ ಉದ್ಯೋಗಿ ಕಂಪನಿಯಿಂದ ಹೊರಬಿದ್ದರು ಎಂದು ವರದಿಯಾಗಿದೆ.

'ಎಕ್ಸ್' ಬಳಕೆದಾರರಿಗೆ ಶಾಕ್; ಪೋಸ್ಟ್ ,ರಿಪ್ಲೈ, ಲೈಕ್ಸ್ ಗೂ ಹಣ ಪಾವತಿಸಬೇಕು; ಹೊಸ ನಿಯಮ ಜಾರಿ ದೃಢಪಡಿಸಿದ ಮಸ್ಕ್

ಎಲಾನ್ ಮಸ್ಕ್ ಹಾಗೂ ಮಹಿಳಾ ಉದ್ಯೋಗಿ ನಡೆಸಿರುವ ಚಾಟ್ ಬಹಿರಂಗವಾಗಿದೆ. ಈ ಪೈಕಿ ಮಹಿಳಾ ಉದ್ಯೋಗಿ ರಾತ್ರಿ ವೇಳೆ ತನ್ನ ಮನೆಗೆ ಆಗಮಿಸಲು ಆಹ್ವಾನ ನೀಡಿರುವ ಮೇಸೆಜ್ ಹಾಗೂ ಹಲವು ಸಂದೇಶಗಳು ಬಹಿರಂಗವಾಗಿದೆ. ನೀನು ಬರುತ್ತಿಯಾ? ಒಬ್ಬನೇ ಮಲಗಲು ಸಾಧ್ಯವಾಗುತ್ತಿಲ್ಲ ಎಂದು ಎಲಾನ್ ಮಸ್ಕ್ ಸಂದೇಶಗಳು ಇದೀಗ ಆರೋಪಕ್ಕೆ ಮತ್ತಷ್ಚು ಪುಷ್ಠಿ ನೀಡಿದೆ.
 

Latest Videos
Follow Us:
Download App:
  • android
  • ios