Asianet Suvarna News Asianet Suvarna News

Satellites Launchedಆಕಾಶದಲ್ಲಿ ಕೃತಕ ಉಪಗ್ರಹಗಳ ಮೆರವಣಿಗೆ, 12 ಸಾವಿರ ಉಪಗ್ರಹ ಯೋಜನೆಗೆ ಎಲನ್ ಮಸ್ಕ್ ಚಾಲನೆ!

  • ಉದ್ಯಮಿ ಎಲಾನ್‌ ಮಸ್ಕ್‌ ಸಂಸ್ಥೆಯ ‘ಸ್ಟಾರ್‌ಲಿಂಕ್‌’ ಉಪಗ್ರಹ
  • 12 ಸಾವಿರ ಕೃತಕ ಉಪಗ್ರಹಗಳನ್ನು ಆಕಾಶಕ್ಕೆ ಹಾರಿ ಬಿಡುವ ಯೋಜನೆ
  • ವಯರ್‌ಲೆಸ್‌ ಇಂಟರ್‌ನೆಟ್‌ ಸೇವೆ ನೀಡುವ ಉಪಗ್ರಹ
Satellite launched into space by the Elon Musk US company SpaceX 40 satellites were seen in the sky ckm
Author
Bengaluru, First Published Dec 21, 2021, 4:10 AM IST

ಉಡುಪಿ(ಡಿ.21):  ಆಕಾಶದಲ್ಲಿ ಸೋಮವಾರ ಸಂಜೆ 7.30ರ ಸುಮಾರಿಗೆ 40-50ರಷ್ಟುನಕ್ಷತ್ರಗಳು ಸಾಲಾಗಿ ಮೆರವಣಿಗೆ ನಡೆಸಿದಂತೆ ಕಾಣುವ ಅಪರೂಪದ ವಿದ್ಯಮಾನ ನಡೆದಿದೆ. ಈ ಬಗ್ಗೆ ಜನರಲ್ಲಿ ಭಾರೀ ಕುತೂಹಲ ಮೂಡಿದ್ದು ಇವು ಏನೆಂಬ ಬಗ್ಗೆ ಹುಡುಕಾಟ ನಡೆದಿದೆ. ವಾಸ್ತವದಲ್ಲಿ ಇವು ಕೃತಕ ಉಪಗ್ರಹಗಳು ಎಂದು ಇಲ್ಲಿನ ಪೂರ್ಣಪ್ರಜ್ಞಾ ಕಾಲೇಜಿನ ಹವ್ಯಾಸಿ ಖಗೋಳ ವಿಕ್ಷಕರ ಕ್ಲಬ್‌ನ ಅತುಲ್‌ ಭಟ್‌ ತಿಳಿಸಿದ್ದಾರೆ.

ಬಾಹ್ಯಾಕಾಶ ಉದ್ಯಮಿ ಎಲಾನ್‌ ಮಸ್ಕ್ (Elon Musk)ಅವರ ‘ಸ್ಟಾರ್‌ ಲಿಂಕ್‌’(Starlink) ಎಂಬ ಸುಮಾರು 12 ಸಾವಿರ ಕೃತಕ ಉಪಗ್ರಹಗಳನ್ನು(satellites) ಆಕಾಶಕ್ಕೆ ಹಾರಿ ಬಿಡುವ ಭಾರಿ ಯೋಜನೆಯೊಂದನ್ನು ಸದ್ಯ ಹಾಕಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ರೀತಿ ಹಾರಿಬಿಡುವ ಉಪಗ್ರಹಗಳ ಸಂಖ್ಯೆ 42 ಸಾವಿರ ದಾಟುವ ಸಾಧ್ಯತೆಯೂ ಇದೆ. ಅದರಂತೆ ಈಗಾಗಲೇ ಕೃತಕ ಉಪಗ್ರಹಗಳ ಒಂದು ಗುಚ್ಛ (60 ಉಪಗ್ರಹಗಳು) ನ್ನು ಹಾರಿಬಿಟ್ಟಿದ್ದಾರೆ. ಅವು ಭೂಮಿಯ ಸುತ್ತ ತಿರುಗುತ್ತಾ ಪ್ರತಿಮನೆಗೂ ವಯರ್‌ಲೆಸ್‌ ಇಂಟರ್‌ನೆಟ್‌(Internet) ಸೇವೆಯನ್ನು ನೀಡಲಿವೆ.

ಜಿಯೋ ಜೊತೆ ಸೇರಿ SpaceXನಿಂದ ರಿಮೋಟ್‌ ಏರಿಯಾಗಳಿಗೂ ಸೇವೆ

"

ಕತ್ತಲೆಯಲ್ಲಿ ಈ ಉಪಗ್ರಹಗಳ ಹೊರಮೈ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಾ ಸಮಾನಾಂತರವಾಗಿ ಸರಳರೇಖೆಯಲ್ಲಿ ಚಲಿಸುವಾಗ ನಕ್ಷತ್ರಗಳ ಮೆರೆವಣಿಗೆ ನಡೆಸಿದಂತೆ, ರಾತ್ರಿ ಹೊತ್ತು ಯುದ್ಧ ವಿಮಾನಗಳು ಸಾಗಿದಂತೆ ಭಾಸವಾಗುತ್ತದೆ. ಈ ವಿದ್ಯಮಾನ ಹೊಸದೇನಲ್ಲ. ಕಳೆದ ಕೆಲ ದಿನಗಳಿಂದ ವಿಶ್ವದ, ದೇಶದ ಕೆಲ ಭಾಗಗಳಲ್ಲಿ ಇದು ಸುದ್ದಿಯಾಗುತ್ತಲೇ ಇದೆ. ಆದರೆ ರಾಜ್ಯದ ಕರಾವಳಿಯಲ್ಲಿ ಮಾತ್ರ ಸೋಮವಾರ ಸ್ಪಷ್ಟವಾಗಿ ಗೋಚರಿಸಿದೆ. ಉಡುಪಿ, ಮಣಿಪಾಲ, ಮಂಗಳೂರು, ಕಳಸದಿಂದಲೂ ತಮಗೆ ಕರೆಗಳು ಬಂದಿವೆ ಎಂದು ಅತುಲ್‌ ಭಟ್‌ ತಿಳಿಸಿದ್ದಾರೆ.

ಆಗ​ಸ​ದಲ್ಲಿ ಬೆಳ​ಕಿನ ಸರ​ಮಾ​ಲೆ!
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಂಜೆ 7ರಿಂದ 8 ಗಂಟೆ ಅವಧಿಯಲ್ಲಿ ಆಗಸದಲ್ಲಿ ಬೆಳಕಿನ ಸರಮಾಲೆ ಕಂಡುಬಂದು ಬೆರಗು ಮೂಡಿಸಿತು. ಎಲಾನ್‌ ಮಸ್ಕ್‌ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ, ಅಮೆರಿಕದ ಸ್ಪೇಸ್‌ ಎಕ್ಸ್‌ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಸರಮಾಲೆ ಇದಾಗಿದೆ.

ಸ್ಟಾರ್‌ ಲಿಂಕ್‌ ಎಂಬ ಯೋಜನೆಯಡಿ ಈಗಾಗಲೆ 1,800ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ. 2018ರ ಫೆ. 22ರಂದು ಆರಂಭವಾದ ಈ ಯೋಜನೆಯಲ್ಲಿ ವಿವಿಧ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಒಂದು ಗುಂಪಿನ ಉಪಗ್ರಹಗಳು ಆಗಸದಲ್ಲಿ ಕಂಡುಬಂತು.

ಇಳೆಗೆ ಮುತ್ತಿಕ್ಕಿದ ಸ್ಪೇಸ್ಎಕ್ಸ್ ಇನ್ಸಿಪಿರೇಷನ್-4 ನಾಗರಿಕ ಗಗನಯಾತ್ರಿಗಳು

ಭೈರುಂಬೆಯ ಖಗೋಳ ಅಧ್ಯಯನ ಸಂಸ್ಥೆ ‘ಆಗಸ್‌ 360’ಯ ಸ್ಥಾಪಕ, ಶಿರಸಿಯ ವಸಂತ ಹೆಗಡೆ, ಈ ಉಪಗ್ರಹಗಳ ಮೇಲೆ ಅಳವಡಿಸಿದ ಸೌರ ಫಲಕಗಳ ಮೇಲೆ ನಿರ್ದಿಷ್ಟಕೋನದಲ್ಲಿ ಸೂರ್ಯನ ಕಿರಣಗಳು ಬಿದ್ದಾಗ ಅವು ಪ್ರತಿಫಲನಗೊಳ್ಳುತ್ತವೆ ಎಂದು ವಿವರಿಸಿದ್ದಾರೆ. ಬೆಳಕಿನ ಸರಮಾಲೆ ಚಲಿಸಿದಂತೆ ಕಂಡುಬಂದಾಗ ಜನರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿವೆ.

2022ರಿಂದ ಸ್ಪೇಸ್‌ ಎಕ್ಸ್‌ನಿಂದ ಭಾರತದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆ
ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಮಾಲೀಕತ್ವದ ಸ್ಪೇಸ್‌ ಎಕ್ಸ್‌ ಅಧೀನ ಸಂಸ್ಥೆ ಸ್ಟಾರ್‌ಲಿಂಕ್‌ ಭಾರತದಲ್ಲಿ 2022ರ ಡಿಸೆಂಬರ್‌ನಿಂದ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2 ಲಕ್ಷ ಸಕ್ರಿಯ ಟರ್ಮಿನಲ್‌ಗಳಿಗೆ ಭಾರತ ಸರ್ಕಾರದಿಂದ ಅನುಮತಿ ಕೋರಿದೆ.

‘ಸ್ಪೇಸ್‌ ಎಕ್ಸ್‌ ಮಾಲೀಕತ್ವದ ಅಧೀನ ಸಂಸ್ಥೆ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಕಮ್ಯುನಿಕೇಷನ್‌ ಪ್ರೈ.ಲಿ (ಎಸ್‌ಎಸ್‌ಸಿಪಿಎಲ್‌) ಭಾರತದಲ್ಲಿ ನ.1ರಿಂದ ತನ್ನ ಕಚೇರಿಯನ್ನು ಆರಂಭಿಸಿದೆ. ನಾವು ಇನ್ಮುಂದೆ ಪರವಾನಗಿ ಪಡೆಯಲು, ಬ್ಯಾಂಕ್‌ ಖಾತೆ ತೆರೆಯಲು ಅರ್ಜಿ ಸಲ್ಲಿಸಬಹುದು’ ಕಂಪನಿಯ ಭಾರತದ ನಿರ್ದೇಶಕ ಸಂಜಯ್‌ ಭಾರ್ಗವ ತಿಳಿಸಿದ್ದಾರೆ.

Follow Us:
Download App:
  • android
  • ios