Asianet Suvarna News Asianet Suvarna News

ಮತ್ತೊಂದು ಮಗುವಿನ ತಂದೆಯಾದ ಎಲನ್‌ಮಸ್ಕ್‌: ಇಟ್ರು ಇಷ್ಟುದ್ದ ಹೆಸರು

  • 7ನೇ ಹಾಗೂ ಚೊಚ್ಚಲ ಹೆಣ್ಣು ಮಗುವಿನ ತಂದೆಯಾದ ಎಲನ್‌ಮಸ್ಕ್‌ 
  • ಪತ್ನಿ ಗ್ರಿಮ್ಸ್‌ಗೆ ಇದು ಎರಡನೇ ಮಗು
  • ಬಾಡಿಗೆ ತಾಯಿ ಮೂಲಕ ಮಗು ಪಡೆದ ಜೋಡಿ
Elon Musk and Grimes Secretly Welcome Their Second Baby Via Surrogate akb
Author
Bangalore, First Published Mar 11, 2022, 6:11 PM IST

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲನ್ ಮಸ್ಕ್ ಮತ್ತೊಂದು ಮಗುವಿನ ತಂದೆಯಾಗಿದ್ದಾರೆ. ಗಾಯಕಿ ಹಾಗೂ ಗೀತರಚನೆಕಾರ್ತಿ ಆಗಿರುವ ಪತ್ನಿ ಗ್ರಿಮ್ಸ್  ಹಾಗೂ ಮಾಸ್ಕ್‌ ತಮ್ಮ ಚೊಚ್ಚಲ ಹೆಣ್ಣು ಮಗುವನ್ನು ಸ್ವಾಗತಿಸಿದರು. ಇವರು ಬಾಡಿಗೆ ತಾಯಿ ಮೂಲಕ ಈ ಮಗುವನ್ನು ಪಡೆದಿದ್ದಾರೆ. ಗ್ರಿಮ್ಸ್ ಅವರಿಗೆ ಇದು ಎರಡನೇ ಮಗುವಾಗಿದ್ದರೆ ಎಲನ್‌ ಮಸ್ಕ್‌ ಅವರಿಗೆ ಇದು 7ನೇ ಮಗುವಾಗಿದೆ. ಎಲನ್‌ ಮಸ್ಕ್‌ ಈಗಾಗಲೇ ತಮ್ಮ ಹಲವು ಪತ್ನಿಯರಿಂದ ಮಕ್ಕಳನ್ನು ಪಡೆದಿದ್ದಾರೆ. ಗಾಯಕಿ ಹಾಗೂ ಗೀತರಚನೆಕಾರ್ತಿ ಆಗಿರುವ   ವ್ಯಾನಿಟಿ ಫೇರ್ ಕವರ್ ಸ್ಟೋರಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಗ್ರಿಮ್ಸ್ ಅವರು ಡಿಸೆಂಬರ್ 2021ರಲ್ಲಿಯೇ ಎಲೋನ್ ಮಸ್ಕ್ ಜೊತೆಗೆ ಹೆಣ್ಣು ಮಗುವನ್ನು ಬಾಡಿಗೆ ತಾಯಿಯ ಮೂಲಕ ರಹಸ್ಯವಾಗಿ ಸ್ವಾಗತಿಸಿದೆವು ಎಂದು ಹೇಳಿದರು. 50 ವರ್ಷದ ಟೆಸ್ಲಾ ಸಂಸ್ಥಾಪಕ ಎಲನ್ ಮಸ್ಕ್ ಹಾಗೂ 33 ವರ್ಷದ ಗ್ರಿಮ್ಸ್‌ಗೆ ಈಗಾಗಲೇ 22 ತಿಂಗಳ ಓರ್ವ ಮಗನಿದ್ದಾನೆ. ಇವರಿಬ್ಬರಿಗೂ 17 ವರ್ಷಗಳ ವಯಸ್ಸಿನ ಅಂತರವಿದೆ. ಬಾಡಿಗೆ ತಾಯಿ ಮೂಲಕ ಪಡೆದ ಈ ಮಗುವಿಗೆ ಎಕ್ಸಾ ಡಾರ್ಕ್ ಸೈಡೆರೆಲ್ (Exa Dark Sideræl) ಎಂದು ಹೆಸರಿಟ್ಟಿದ್ದು, ಚಿಕ್ಕದಾಗಿ ವೈ(Y) ಎಂಬ ಅಡ್ಡ ಹೆಸರನ್ನು ಇಡಲಾಗಿದೆ. 

Elon Musk Job ಉದ್ಯೋಗ ತೊರೆಯಲು ನಿರ್ಧರಿಸಿದ ವಿಶ್ವದ ಶ್ರೀಮಂತ, ಮುಂದಿನ ವೃತ್ತಿ ಮತ್ತಷ್ಟು ಕುತೂಹಲ!
 

ಇನ್ನು ತಮ್ಮ ಮಗುವಿನ ಇಷ್ಟುದ್ದದ ಹೆಸರಿ ವಿಶೇಷತೆಯನ್ನು ವಿವರಿಸಿದ ಗ್ರಿಮ್ಸ್‌, ಎಕ್ಸಾ ಎಂಬ ಪದವು ಸೂಪರ್‌ಕಂಪ್ಯೂಟಿಂಗ್ ಪದವಾದ ಎಕ್ಸಾಫ್ಲೋಪ್ಸ್ ಅನ್ನು ಸೂಚಿಸುತ್ತದೆ, ಹಾಗೆಯೇ  ಡಾರ್ಕ್ ಪದವೂ ಅಜ್ಞಾತ ಎಂಬುದನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಜನರು ಈ ಪದವನ್ನು ಕೇಳಿ ಭಯಪಡುತ್ತಾರೆ ಆದರೆ ನಿಜವಾಗಿಯೂ ಇದು ಫೋಟಾನ್‌ಗಳ ಅನುಪಸ್ಥಿತಿಯಾಗಿದೆ. ಡಾರ್ಕ್ ಮ್ಯಾಟರ್ ನಮ್ಮ ಬ್ರಹ್ಮಾಂಡದ ಸುಂದರ ರಹಸ್ಯವಾಗಿದೆ ಎಂದು ಹೇಳಿದರು. ಮಗು ವೈ ನ ಪೂರ್ಣ ಹೆಸರಿನ ಮೂರನೇ ಭಾಗವಾದ Sideræl ಅನ್ನು "sigh-deer-ee-el" ಎಂದು ಉಚ್ಚರಿಸಲಾಗುತ್ತದೆ. ಇದನ್ನು ಅವರು  ವಿಶ್ವದ ನಿಜವಾದ ಸಮಯ, ನಕ್ಷತ್ರದ ಸಮಯ, ಆಳವಾದ ಬಾಹ್ಯಾಕಾಶ ಸಮಯವಾಗಿದ್ದು, ನಮ್ಮ ಸಂಬಂಧಿತ ಭೂಮಿಯ ಸಮಯವಲ್ಲ ಎಂದು ಹೇಳಿದರು. ಮದುವೆಯಾದ ಮೂರು ವರ್ಷಗಳ ನಂತರ  ಗ್ರಿಮ್ಸ್ ಮತ್ತು ಮಸ್ಕ್ ಸೆಪ್ಟೆಂಬರ್ 2021ರಲ್ಲಿ ಬೇರ್ಪಟ್ಟರೂ ಮತ್ತೆ ಒಂದಾಗಿದ್ದಾರೆ.

ಇತ್ತ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ 66 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈಗಾಗಲೇ ಮಸ್ಕ್ ಸಂದೇಶಗಳು ಭಾರಿ ಪ್ರಭಾವ ಬೀರುತ್ತಿದೆ. ಕ್ರಿಪ್ಟೋಕರೆನ್ಸಿ(cryptocurrency), ಕಂಪನಿ ಕುರಿತು ನೀಡುವ ಹೇಳಿಕೆ ಹಾಗೂ ಸಂದೇಶ ಭಾರಿ ತಲ್ಲಣ ಸೃಷ್ಟಿಸಿದೆ. ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ಕುರಿತು ಮಸ್ಕ್ ನೀಡುವ ಸಂದೇಶ ಹಾಗೂ ವಿಶ್ಲೇಷಣೆ ಭಾರಿ ಪರಿಣಾಮ ಬೀರುತ್ತಿದೆ. ಇನ್ನು ಕಂಪನಿಗಳು, ಮಾರುಕಟ್ಟೆ ಸೇರಿದಂತೆ ಇತರ ವಿಚಾರಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಸಂದೇಶ, ಕಿವಿಮಾತುಗಳು ತಜ್ಞರಿಗಿಂತಲೂ ನಿಖರವಾಗಿದೆ. ಹೀಗಾಗಿ ಇದೀಗ ಮಸ್ಕ್, ತಮ್ಮ ಉದ್ಯೋಗ ಬಿಟ್ಟು, ಪೂರ್ಣ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣ(Social Media) ಮೂಲಕ ಸಂದೇಶಗಳನ್ನು ನೀಡುವ ನಾಯಕನಾಗುವ ಕುರಿತು ಆಲೋಚನೆ ಮಾಡಿದ್ದಾರೆ.

Satellites Launchedಆಕಾಶದಲ್ಲಿ ಕೃತಕ ಉಪಗ್ರಹಗಳ ಮೆರವಣಿಗೆ, 12 ಸಾವಿರ ಉಪಗ್ರಹ ಯೋಜನೆಗೆ ಎಲನ್ ಮಸ್ಕ್ ಚಾಲನೆ!
 

ಕಳೆದ ವರ್ಷ ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿರುವ ಅಮೆರಿಕ ಮೂಲದ ಉದ್ಯಮಿ ಎಲಾನ್‌ ಮಸ್ಕ್‌ (Elon Musk), ಸುಮ್ಮನಿರಲಾಗದೇ ಮಾಡಿದ ಎಡವಟ್ಟಿನಿಂದ ಕೇವಲ 2 ದಿನದಲ್ಲಿ ಅಂದಾಜು 4 ಲಕ್ಷ ಕೋಟಿ ರು. ಸಂಪತ್ತು ಕಳೆದುಕೊಂಡಿದ್ದರು. ನಾನು ಟೆಸ್ಲಾ ಕಂಪನಿಯಲ್ಲಿ ಹೊಂದಿರುವ ಷೇರಿನ ಪೈಕಿ ಶೇ.10ರಷ್ಟನ್ನು ಮಾರಬೇಕೇ ಎಂದು ತಮ್ಮ ಹಿಂಬಾಲಕರನು ಸಲಹೆ ಕೇಳಿದ್ದರು. ಅದರ ಬೆನ್ನಲ್ಲೇ, ತಮ್ಮ ಸಾಲ ತೀರಿಸಲು ಷೇರುಗಳನ್ನು ಮಾರಾಟ ಮಾಡಲು ಮಸ್ಕ್‌ (Elon Musk) ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ಇಂಥದ್ದೊಂದು ತಂತ್ರ ಮಾಡಿದ್ದಾರೆ ಎಂದೆಲ್ಲಾ ವರದಿಯಾಗಿತ್ತು. ಈ ಸುದ್ದಿಗಳ ಬೆನ್ನಲ್ಲೇ ಟೆಸ್ಲಾ ಕಂಪನಿಯ (Tesla Company) ಷೇರುಗಳ ಮೌಲ್ಯ ಸತತ 2 ದಿನಗಳಿಂದ ಭಾರೀ ಇಳಿಕೆ ಕಂಡಿದೆ. ಹೀಗಾಗಿ ಮಸ್ಕ್‌ ಆಸ್ತಿಯಲ್ಲಿ 36 ಶತಕೋಟಿ ಡಾಲರ್‌ (3.75 ಲಕ್ಷ ಕೋಟಿ ರು.) ಯಷ್ಟುಇಳಿಕೆಯಾಗಿತ್ತು
 

Follow Us:
Download App:
  • android
  • ios