ಆಧುನಿಕ ಜಗತ್ತಿನಲ್ಲಿ ಪೋಟೋ ಶೂಟ್ ಗಳಿಗೇನೂ ಬರವಿಲ್ಲ. ಮದುವೆಗೆ ಮುನ್ನ, ಮದುವೆಯ ನಂತರ, ತಾಯ್ತನದ ಪೋಟೋ ಶೂಟ್ ಹೀಗೆ ಒಂದೊಂದಕ್ಕೂ ಒಂದೊಂದು ಅರ್ಥವಿದೆ. ಆದರೆ ಈ ಪೋಟೋ ಶೂಟ್ ಅದೆಲ್ಲದಕ್ಕಿಂತ ಭಿನ್ನ.. ಮಾದರಿ.

ಕಪಲ್ ಪೋಟೋ ಶೂಟ್ ಗಳಿಗೆ ಸಾಕಷ್ಟು ಲೈಕ್, ಪ್ರಚಾರ ಎಲ್ಲವೂ ಸಿಗುತ್ತದೆ. ಪ್ರೋಫೇಶನಲ್ ಪೋಟೋಗ್ರಾಫರ್ ಗಳು ಅನೇಕರು ಹೆಸರು ಮಾಡಿದ್ದಾರೆ.

ಆಗಲ್ಲ ಅಂದರು ಪರೇಡ್ ಗೆ ಕಳಿಸಿ ನನ್ನ ಕೊಂದರಾ... ಆನೆ ಕಣ್ಣೀರ ಕತೆ

ಈ ಹಿರಿಯ ಜೀವಗಳ ಪೋಟೋ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿಯೇ ವೈರಲ್ ಆಗುತ್ತಿದೆ. ಮದುವೆಯಾಗಿ 72 ವರ್ಷಗಳ  ತುಂಬು ಜೀವನದ ನಂತರದಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 72ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತೆಗೆದ ಪೋಟೋಗಳು ಇದಾಗಿದೆ.

ಬರ್ಲಿಂಗ್ ಟನ್ ನಲ್ಲಿ ನೆಲೆಸಿರುವ ಜೋಡಿ ನಿಜಕ್ಕೂ ಅದೃಷ್ಟವಂತರು. ಲಿಯೋನರ್ಡ್  ಮತ್ತು ಶೆರ್ಲಿ ಮ್ಯಾಟಿಸ್ ಜೋಡಿಯ ಈ ಪೋಟೋಗಳು ವೈರಲ್  ಆಗುತ್ತಿವೆ.

ಈ ಹಿರಿಯ ಜೋಡಿಗಳನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿಯಲ್ಲೊಬ್ಬರಾದ ಅಡ್ರಿಸ್ ಬೆಹರ್ಡ ಸನ್ ಈ ಪೋಟೋವನ್ನು ಹಂಚಿಕೊಂಡಿದ್ದಾರೆ.