ಹಿಜಾಬ್ ವಿವಾದ ಬಳಿಕ ಶಾಲೆಗಳಲ್ಲಿ ನಿಖಾಬ್ ನಿಷೇಧ, ಸೆ.30 ರಿಂದ ಈ ಮುಸ್ಲಿಂ ದೇಶದಲ್ಲಿ ಜಾರಿ!
ಕರ್ನಾಟಕದಲ್ಲಿ ಹಿಜಾಬ್ ವಿವಾದ ದೇಶ ವಿದೇಶದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹಿಜಾಬ್ ನಿಷೇಧ ಮಾಡಿದೆ. ಇದೀಗ ಮತ್ತೊಂದು ಮುಸ್ಲಿಂ ರಾಷ್ಟ್ರ ಶಾಲೆಗಳಲ್ಲಿ ನಿಖಾಬ್ ನಿಷೇಧಿಸಿದೆ.
ಈಜಿಪ್ಟ್(ಸೆ.13) ಕರ್ನಾಟಕದಲ್ಲಿ ಭಾರಿ ಕೋಲಾಹಲ ಸೃಷ್ಟಿ ದೇಶಾದ್ಯಂತ ಹಬ್ಬಿದ ಹಿಜಾಬ್ ವಿವಾದ ತಣ್ಣಗಾಗಿದ್ದರೂ ಒಳಗಿನ ಆಕ್ರೋಶ ಕಡಿಮೆಯಾಗಿಲ್ಲ. ಆದರೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್, ನಿಖಾಬ್‌ಗೆ ಅವಕಾಶವಿಲ್ಲ. ಈ ಸಾಲಿಗೆ ಮತ್ತೊಂದು ಮುಸ್ಲಿಂ ರಾಷ್ಟ್ರ ಸೇರಿಕೊಂಡಿದೆ. ಇದೀಗ ಈಜಿಪ್ಟ್ ಸರ್ಕಾರ ಶಾಲೆಗಳಲ್ಲಿ ನಿಖಾಬ್ ನಿಷೇಧಿಸಿದೆ. ಮುಖ ಮುಚ್ಚಿಕೊಳ್ಳುವ ಬುರ್ಖಾ ರೀತಿಯ ನಿಖಾಭ್ ಶಾಲೆಗಳಲ್ಲಿ ಧರಿಸುವಂತಿಲ್ಲ ಎಂದು ಶಿಕ್ಷಣ ಸಚಿವ ರೆಡಾ ಹೆಗಾಝಿ ಆದೇಶ ಹೊರಡಿಸಿದ್ದಾರೆ.
ಈಜಿಪ್ಟ್ ಹೊರಡಿಸುವ ಹೊಸ ಆದೇಶದಲ್ಲಿ ಶಾಲೆಗಳಲ್ಲಿ ನಿಖಾಬ್ ಸಂಪೂರ್ಣ ನಿಷೇಧಿಸಲಾಗಿದೆ ಎಂದಿದೆ. ಇನ್ನು ಹಿಬಾಜ್ ಧರಿಸುವುದು ಅವರ ಇಚ್ಚಗೆ ಬಿಟ್ಟದ್ದು. ಯಾರೂ ಒತ್ತಾಯಪೂರ್ವಕವಾಗಿ ಹಿಜಾಬ್ ಧರಿಸುವಂತಿಲ್ಲ ಎಂದಿದೆ. ಮಕ್ಕಳು ಮುಖ ಮುಚ್ಚಿಕೊಂಡು ಶಾಲೆಗೆ ಬರುವಂತಿಲ್ಲ. ಶಾಲೆಯ ಸಮವಸ್ತ್ರದ ನಿಯಮ ಕುರಿತು ಪೋಷಕರು ಅರಿಯಬೇಕು. ಇನ್ನು ಹಿಜಾಬ್ ವಿಚಾರದಲ್ಲಿ ಪೋಷಕರು ಯಾವುದೇ ಒತ್ತಾಯ ಮಾಡುವಂತಿಲ್ಲ. ಶಾಲೆಗೆ ಹಿಜಾಬ್ ಧರಿಸುವುದರಿಂದ ಮಕ್ಕಳು ದೂರ ಉಳಿದರೆ ಒತ್ತಾಯ ಮಾಡುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ತರಗತಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು: ಸಮವಸ್ತ್ರ ಕಡ್ಡಾಯಗೊಳಿಸಿದ ಕಾಲೇಜು ಆಡಳಿತ ಮಂಡಳಿ!
ಶಾಲೆಗಳಲ್ಲಿ ಹುಡುಗ ಹಾಗೂ ಹುಡುಗಿಯರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಶಾಲೆ ಸೂಚಿಸುವ ಸಮವಸ್ತ್ರವನ್ನೇ ಧರಿಸಬೇಕು. ಸೆಪ್ಟೆಂಬರ್ 30 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ ಎಂದು ಶಿಕ್ಷಣ ಸಚಿವ ಹೇಳಿದ್ದಾರೆ.ಸೆಪ್ಟೆಂಬರ್ 30 ರಿಂದ ಈಜಿಪ್ಟ್‌ನಲ್ಲಿ ಅಧಿವೇಶನ ಆರಂಭಗೊಳ್ಳಲಿದೆ. ಈ ದಿನದಿಂದಲೇ ಸಮವಸ್ತ್ರ ನಿಯಮ ಜಾರಿಗೆ ಬರಲಿದೆ ಎಂದಿದೆ.
ಹಿಜಾಬ್ ಧರಿಸುವುದಾದರೆ ಶಿಕ್ಷಣ ಇಲಾಖೆ ಸೂಚಿಸಿದ ಬಣ್ಣದಲ್ಲೇ ಇರಬೇಕು. ಈಜಿಪ್ಟ್ ಶಿಕ್ಷಣ ಇಲಾಖೆ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದ್ದಾರೆ. ಇದರ ನಡುವೆ ಕೆಲ ಮೂಲಭೂತವಾದಿ ಗುಂಪುಗಳು ವಿರೋಧ ವ್ಯಕ್ತಪಡಿಸಿದೆ. ಇದು ಇಸ್ಲಾಂ ವಿರುದ್ಧ ತೆಗೆದುಕೊಂಡ ನಿರ್ಧಾರ ಎಂದು ಆರೋಪಿಸಿದೆ.
ಮುಂಬೈನಲ್ಲೂ ಉಡುಪಿ ರೀತಿ ಹಿಜಾಬ್ ವಿವಾದ, ಕಾಲೇಜಲ್ಲಿ ಬುರ್ಖಾಗೆ ಬ್ರೇಕ್
ಈಜಿಪ್ಟ್ ಸರ್ಕಾರ ಕಚೇರಿ, ಖಾಸಗಿ ಕಚೇರಿಗಳಲ್ಲಿ ಹಿಜಾಬ್, ಬುರ್ಖಾ, ನಿಖಾಬ್ ಧರಿಸುವಂತಿಲ್ಲ. ವಿಶ್ವವಿದ್ಯಾಲಯಗಳಲ್ಲಿನ ಸಿಬ್ಬಂದಿಗಳು ಹಿಜಾಬ್, ನಿಖಾಬ್, ಬುರ್ಖಾ ಧರಿಸುವಂತಿಲ್ಲ. 2015ರಲ್ಲೇ ಈಜಿಪ್ಟ್ ಸರ್ಕಾರ ಈ ನಿರ್ಧಾರ ಘೋಷಿಸಿತ್ತು. ಇದರ ವಿರುದ್ಧ ಹಲವು ಮೂಲಭೂತ ಸಂಘಟನೆಗಳು ಕೋರ್ಟ್ ಮೆಟ್ಟೆಲೇರಿತ್ತು. 2020ರಲ್ಲಿ ಸರ್ಕಾರದ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದಿತ್ತು.