Asianet Suvarna News Asianet Suvarna News

ಕೀ ಸಮೇತ Rolls Royce ಕಾರ್ ಬಿಟ್ಟೋದ ಯುವಕ: ಆಮೇಲೇನಾಯ್ತು ನೋಡಿ

ಬೈನಲ್ಲಿ ಕೀ ಸಮೇತ ಐಷಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಕೀ ಸಮೇತ ಬಿಟ್ಟು ಹೋದರೆ ಏನಾಗಬಹುದು ಎಂಬುದನ್ನು ತಪಾಸಣೆ ಮಾಡಲು ಯುವಕನೋರ್ವ ಪ್ರಯತ್ನಿಸಿದ್ದು, ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

Dubai Man Leaves Rolls Royce With Key Outside Gym to Prove How Safe the City is, Video Goes Viral akb
Author
First Published Jun 6, 2023, 1:03 PM IST

ದುಬೈ ಅದೊಂದು ತರ ಮಾಯ ನಗರಿ ಐಷಾರಾಮಿ ಬದುಕನ್ನು ಇಷ್ಟ ಪಡುವ ಜನರ ನೆಚ್ಚಿನ ಸ್ಪಾಟ್ ದುಬೈ ಎಂದರೆ ತಪ್ಪಾಗಲಾರದು ಅಂತಹ ದುಬೈನಲ್ಲಿ ಕೀ ಸಮೇತ ಐಷಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಕೀ ಸಮೇತ ಬಿಟ್ಟು ಹೋದರೆ ಏನಾಗಬಹುದು ಎಂಬುದನ್ನು ತಪಾಸಣೆ ಮಾಡಲು ಯುವಕನೋರ್ವ ಪ್ರಯತ್ನಿಸಿದ್ದು, ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ದುಬೈನಲ್ಲಿ ದುಬಾರಿ ವಾಹನ ಎಷ್ಟು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಇನ್ಸ್ಟಾಗ್ರಾಮರ್  ಅಯ್ಮನ್ ಅಲ್ ಯಮನ್ (Ayman Al Yaman) ಎಂಬಾತ ಈ ಪ್ರಯೋಗ ಮಾಡಿದ್ದಾನೆ. ಇದಕ್ಕಾಗಿ ಆತ ಬಿಳಿ ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ದುಬೈನ ಜನದಟ್ಟಣೆಯ ಹೈವೇಯಲ್ಲಿ ಕೀ ಸಮೇತ ಬಿಟ್ಟು ಹೋಗಿದ್ದಾನೆ. ಹಾಗೆಯೇ ಕಾರಿನ ಬಗ್ಗೆ ಚಿಂತೆ ಮಾಡದೇ ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆದು ಆತ ವಾಪಸ್ ಬಂದಿದ್ದು, ಈ ವೇಳೆ ಕಾರು ಹಾಗೂ ಕೀ ಎರಡು ಇದ್ದಲ್ಲೇ ಇದ್ದು, ಯಾರೂ ಕೂಡ ಆ ಕಾರಿನತ್ತ ತಿರುಗಿ ನೋಡದೇ ಮುಂದೆ ಸಾಗಿದ್ದು ಅಚ್ಚರಿ ಮೂಡಿಸಿದೆ. ಆತ ಎಲ್ಲಿ ಕೀ ಇರಿಸಿದ್ದನೋ ಅಲ್ಲೇ ಕಾರಿನ ಕೀ ಇದ್ದು, ಯಾರೊಬ್ಬರೂ ಕನಿಷ್ಟ ಟಚ್ ಕೂಡ ಮಾಡಿಲ್ಲ. 

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ಅನೇಕರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ನಮ್ಮ ದೇಶದಲ್ಲಿ ಈ ಪ್ರಯೋಗ ಮಾಡುವಂತೆ ಕೇಳಿದ್ದಾರೆ. ಮತ್ತೊಬ್ಬರು ನೈಜಿರಿಯಾದಲ್ಲಿ ಈ ಪ್ರಯೋಗ ಮಾಡದಂತೆ ಹೇಳಿದ್ದಾರೆ. ಮತ್ತೊಬ್ಬರು ನೈಜಿರಿಯಾದಲ್ಲೇ ಈ ಪ್ರಯೋಗ ಮಾಡುವಂತೆ ಹೇಳಿದ್ದಾರೆ.  ಮತ್ತೆ ಕೆಲವರು ದುಬೈನಲ್ಲಿ ಯಾರೋಬ್ಬರೂ ವಾಹನವನ್ನು ಕದಿಯುವುದಿಲ್ಲ ಬದಲಾಗಿ ಅವರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ದುಬೈ (Dubai) ಭದ್ರತೆ ಅಷ್ಟೊಂದು ಚೆನ್ನಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ದುಬೈನಲ್ಲಿ ನಡೀತು ಜೋಧಾ ಅಕ್ಬರ್ ಸ್ಟೈಲ್ ಮದ್ವೆ: ಚಿನ್ನದಿಂದ ವಧುವಿನ ತುಲಾಭಾರ..!

ಮತ್ತೆ ಕೆಲವರು ರೂಲ್ಸ್ ರಾಯ್ಸ್ (Rolls Royce) ಮುಂಭಾಗದಲ್ಲಿ ಕ್ಯಾಮರಾ ಹೊಂದಿದ್ದು, ಯಾರು ಕದಿಯುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ರೂಲ್ಸ್‌ ರಾಯ್ಸ್ ಕಾರು ಎಲ್ಲರಿಗೂ ಸರಿ ಹೊಂದುವುದಿಲ್ಲ, ನೀವು ಎಲ್ಲರೂ ಬಳಸುವಂತಹ ಸಾಮಾನ್ಯವೆನಿಸಿದ ಕಾರನ್ನು ಹೀಗೆ ಬಿಟ್ಟು ಹೋಗಿ ಪ್ರಯೋಗ ಮಾಡಿ ಎಂದು ಅಲ್ ಅಮನ್‌ನನ್ನು ಕೇಳಿದ್ದಾರೆ. ಮತ್ತೊಬ್ಬರು ನಾನು ಅಲ್ಲಿ ಇಲ್ಲದೇ ಇರುವುದಕ್ಕೆ ಖುಷಿ ಪಡಿ ಎಂದು ಕಾಮೆಂಟ್ ಮಾಡಿದ್ದಾರೆ. 

ದುಬೈನಲ್ಲಿ ಕಾನೂನು ಬಹಳ ಕಠಿಣವಾಗಿದ್ದು, ಸಣ್ಣ ಎಡವಟ್ಟಿಗೂ ದೊಡ್ಡ ಶಿಕ್ಷೆ ಇದೆ. ಇದೇ ಕಾರಣಕ್ಕೆ ಅಲ್ಲಿನ ಜನ ತಪ್ಪು ಮಾಡುವುದಕ್ಕೆ ಹೆದರುತ್ತಾರೆ. ಸಣ್ಣ ತಪ್ಪಿಗೂ ಜೀವಮನಾ ಪರ್ಯಂತ ಜೈಲೂಟ ಅಲ್ಲಿ ಗ್ಯಾರಂಟಿ. ದುಬೈ ಮಧ್ಯಪ್ರಾಚ್ಯದ ಜಾಗತಿಕ ಮಟ್ಟದ ನಗರವಾಗಿದ್ದು, ಅಲ್ಲಿನ ವ್ಯಾಪಾರ ಕೇಂದ್ರವಾಗಿದೆ. ಇದು ಪ್ರವಾಸಿಗರು ಮತ್ತು ಸರಕು ಸಾಗಣೆಗೆ ಪ್ರಮುಖ ಜಾಗತಿಕ ಸಾರಿಗೆ ಕೇಂದ್ರವಾಗಿದೆ. ಅಗಾಧವಾದ ನಿರ್ಮಾಣ ಯೋಜನೆಗಳು ಮತ್ತು ಕ್ರೀಡಾಕೂಟ, ಐಷಾರಾಮಿ ಜೀವನಶೈಲಿಯ ಮೂಲಕ ದುಬೈ ಪ್ರಪಂಚದ ಗಮನ ಸೆಳೆದಿದೆ. 

ವಿಶ್ವದ ಅತಿ ಎತ್ತರದ ಕಟ್ಟಡ, ಬುರ್ಜ್ ಖಲೀಫಾ ದುಬೈನಲ್ಲಿದ್ದು, ಇದರ ಜೊತೆಗೆ ದುಬೈನಲ್ಲಿ ಭೇಟಿ ನೀಡಲು ಹಲವು ಅದ್ಭುತ ಸ್ಥಳಗಳಿವೆ.   ದುಬೈನ ಹೋಟೆಲ್ ಕೊಠಡಿಗಳನ್ನು ವಿಶ್ವದ ಎರಡನೇ ದುಬಾರಿ ಹೊಟೇಲ್‌ಗಳು ಎಂದು ರೇಟ್ ಮಾಡಲಾಗಿದೆ.  ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಳಗೆ ಅತಿ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣ ದುಬೈ ಆಗಿದೆ. ಪರ್ಷಿಯನ್ ಕೊಲ್ಲಿಯ ಆಗ್ನೇಯ ಕರಾವಳಿಯಲ್ಲಿರುವ ದುಬೈ ಯುಎಇನ ರಾಜಧಾನಿಯಾಗಿದೆ.

ಏನ್ ಶೋಕಿನಮ್ಮಾ..ಶಾಪಿಂಗ್‌ ಮಾಡಲು ಒಂದೇ ದಿನ 70 ಲಕ್ಷ ರೂ. ಖರ್ಚು ಮಾಡ್ತಾಳೆ ಈ ಮಹಿಳೆ!

ಇದರ ಜೊತೆಗೆ ದುಬೈ ವಿಶ್ವದ ನಾಲ್ಕನೇ ಅತಿ ಹೆಚ್ಚು ಜನರು ಭೇಟಿ ನೀಡುವ ನಗರವಾಗಿದೆ. ಜೊತೆಗೆ ಚಿನ್ನದ ನಗರ ಎಂದು ಹೆಸರನ್ನು ಹೊಂದಿರುವ ದುಬೈನಲ್ಲಿ ಚಿನ್ನದ ಮಾರುಕಟ್ಟೆ ಇದ್ದು, ಇಲ್ಲಿ ಸುಮಾರು 250 ಚಿನ್ನದ ಚಿಲ್ಲರೆ ಮಾರಾಟ ಮಳಿಗೆಗಳಿವೆ. ಇದರ ಜೊತೆ ದುಬೈ ವಿವಿಧ ವಾಸ್ತುಶಿಲ್ಪದ ವಿನ್ಯಾಸಗಳ ಕಟ್ಟಡಗಳು ಮತ್ತು ಶ್ರೀಮಂತ ರಚನೆಗಳನ್ನು ಹೊಂದಿದೆ. ಅದ್ದೂರಿ ಜೀವನಶೈಲಿಯನ್ನು ಬಯಸುವ ಜನರಿಗೆ ದುಬೈ ಸ್ವರ್ಗವಾಗಿದೆ.

 

Follow Us:
Download App:
  • android
  • ios