* ಅರಬ್‌ ಸಂಯುಕ್ತ ಸಂಸ್ಥಾನ ರಾಷ್ಟ್ರದದಲ್ಲೂ ಕೊರೋನಾ ವೈರಸ್‌ ಸ್ಫೋಟ* ದುಬೈ ಎಕ್ಸ್‌ಪೋನ ಕೆಲವು ಘಟಕ ಬಂದ್‌ ಸಾಧ್ಯತೆ* ವಿಶ್ವದ ಬಹುಕೋಟಿ ಡಾಲರ್‌ ವ್ಯವಹಾರದ ದುಬೈ ಎಕ್ಸ್‌ಪೋ

ದುಬೈ(ಡಿ.31): : ಅರಬ್‌ ಸಂಯುಕ್ತ ಸಂಸ್ಥಾನ ರಾಷ್ಟ್ರದದಲ್ಲೂ ಕೊರೋನಾ ವೈರಸ್‌ ಸ್ಫೋಟವಾಗುತ್ತಿರುವ ಪರಿಣಾಮ ವಿಶ್ವದ ಬಹುಕೋಟಿ ಡಾಲರ್‌ ವ್ಯವಹಾರದ ದುಬೈ ಎಕ್ಸ್‌ಪೋ, ತನ್ನ ಕೆಲವು ಘಟಕಗಳನ್ನು ಬಂದ್‌ ಮಾಡುವ ಸಾಧ್ಯತೆ ಇದೆ ಹೇಳಿದೆ.

ಎಕ್ಸ್‌ಪೋ ಸಮಾರಂಭದಲ್ಲಿ ತೊಡಗಿದ ಕೆಲವು ಸಿಬ್ಬಂದಿಯಲ್ಲಿ ಕೊರೋನಾ ವೈರಸ್‌ ಕಂಡುಬಂದಿದ್ದು, ಈ ಕಾರಣಕ್ಕೆ ಸೋಂಕು ಕಾಣಿಸಿಕೊಂಡ ತಾಣಗಳಲ್ಲಿ ನೈರ್ಮಲ್ಯ ಮತ್ತು ಸ್ಯಾನಿಟೈಸ್‌ಗಾಗಿ ತನ್ನ ಕೆಲವು ತಾಣಗಳನ್ನು ಮುಚ್ಚುವ ಅನಿವಾರ್ಯತೆಯಿದೆ ಎಂದು ಅದು ತಿಳಿಸಿದೆ.

ಒಬ್ಬರಿಂದ ಮತ್ತೊಬ್ಬರಿಗೆ ಬಹುವೇಗವಾಗಿ ಹರಡುವ ರೂಪಾಂತರಿ ಒಮಿಕ್ರೋನ್‌ ಪ್ರಭೇದ ಕಾಣಿಸಿಕೊಂಡ ಬಳಿಕ ಯುಎಇನಲ್ಲಿ ಕೊರೋನಾ ಕೇಸ್‌ಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಅಮೆರಿಕದಲ್ಲಿ ಒಂದೇ ದಿನ ಕೋವಿಡ್‌ ಕೇಸ್‌ ದಾಖಲೆಯ 5 ಲಕ್ಷ ಸಮೀಪಕ್ಕೆ!

ಕಳೆದೊಂದು ವಾರದಲ್ಲಿ ಸರಾಸರಿ 2.65 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗುತ್ತಿರುವ ಅಮೆರಿಕದಲ್ಲಿ ಬುಧವಾರ ಕೊರೋನಾ ವೈರಸ್‌ನ ಮಹಾ ಸ್ಫೋಟ ಸಂಭವಿಸಿದೆ. ಅತೀ ವೇಗವಾಗಿ ವ್ಯಾಪಿಸುವ ಕೊರೋನಾ ಹೊಸ ರೂಪಾಂತರಿ ಡೆಲ್ಟಾಮತ್ತು ಒಮಿಕ್ರೋನ್‌ ಪರಿಣಾಮ ಬುಧವಾರ ಒಂದೇ ದಿನ ಅಮೆರಿಕದಲ್ಲಿ ಈವರೆಗಿನ ದಾಖಲೆಯ 4.88 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗಿವೆ.

ಮಂಗಳವಾರವಷ್ಟೇ 2.67 ಲಕ್ಷ ಕೇಸ್‌ನಿಂದ ಒಂದೇ ದಿನಕ್ಕೆ ದೈನಂದಿನ ಕೋವಿಡ್‌ ಪ್ರಕರಣಗಳು 5 ಲಕ್ಷದ ಸಮೀಪಕ್ಕೆ ಜಿಗಿದಿದೆ.

ಕಳೆದೊಂದು ವಾರದಲ್ಲಿ ದೇಶಾದ್ಯಂತ 20 ಲಕ್ಷಕ್ಕಿಂತ ಹೆಚ್ಚು ಕೇಸ್‌ಗಳು ದಾಖಲಾಗುತ್ತಿದ್ದು, ಈ ಪೈಕಿ 15 ರಾಜ್ಯಗಳು ಮತ್ತು ಪ್ರಾಂತ್ಯಗಳು ಈ ಹಿಂದಿನ ವಾರದಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಆದಾಗ್ಯೂ, ಸೋಂಕಿಗೆ ತುತ್ತಾದವರಲ್ಲಿ ವೈರಸ್‌ ತೀವ್ರತೆ ಈ ಹಿಂದಿನಂತಿಲ್ಲ. ಜತೆಗೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವು ಶೇ.11ರಷ್ಟುಮಾತ್ರ ಹೆಚ್ಚಿದೆ. ಅಲ್ಲದೆ ಕಳೆದ 2 ವಾರಗಳಲ್ಲಿ ಕೋವಿಡ್‌ಗೆ ಬಲಿಯಾಗುವವರ ಪ್ರಮಾಣವೂ ಸ್ವಲ್ಪ ಸರಿಹಾದಿಗೆ ಬಂದಿದೆ ಎನ್ನಲಾಗಿದೆ.