ವಿಮಾನ ಟೇಕಾಫ್ ಆಗಿ ಸ್ವಲ್ಪ ಹೊತ್ತಿನಲ್ಲೇ 100 ಕೇಜಿ ತೂಕವಿದ್ದ, ವಿಮಾನದ ಲ್ಯಾಂಡಿಂಗ್ ಗೇರ್ ಟೈರ್ ಕಳಚಿ ಕೆಳಗೆ ಬಿದ್ದ ಆಘಾತಕಾರಿ ಘಟನೆ ನಡೆದಿದೆ.
ಇಟಲಿ: ವಿಮಾನ ಟೇಕಾಫ್ ಆಗಿ ಸ್ವಲ್ಪ ಹೊತ್ತಿನಲ್ಲೇ 100 ಕೇಜಿ ತೂಕವಿದ್ದ, ವಿಮಾನದ ಲ್ಯಾಂಡಿಂಗ್ ಗೇರ್ ಟೈರ್ ಕಳಚಿ ಕೆಳಗೆ ಬಿದ್ದ ಆಘಾತಕಾರಿ ಘಟನೆ ನಡೆದಿದೆ. ಅಟ್ಲಾಸ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 747 ಡ್ರೀಮ್‌ಲಿಫ್ಟರ್ ವಿಮಾನವೂ ಇಟಲಿಯ ಟರಂಟೋದಿಂದ ಟೇಕಾಫ್ ಆದ ಕೆಲ ನಿಮಿಷಗಳಲ್ಲಿ ಈ ಅನಾಹುತ ಸಂಭವಿಸಿದೆ. ಟೈರ್ ವಿಮಾನದಿಂದ ಕಳಚಿ ಬೀಳುತ್ತಿರುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.
ಬೋಯಿಂಗ್ 787 ಡ್ರೀಮ್‌ಲೈನರ್ ಘಟಕಗಳನ್ನು ಸಾಗಿಸಲು ಮುಖ್ಯವಾಗಿ ಬಳಸಲಾಗುವ ಈ ದೈತ್ಯ ವಿಮಾನವು ಇಟಲಿಯ (Italy) ಟ್ಯಾರಂಟೋದಿಂದ (Taranto) ಹೊರಟು ಯುನೈಟೆಡ್ ಸ್ಟೇಟ್ಸ್‌ನ ಚಾರ್ಲ್ಸ್‌ಟನ್‌ನಲ್ಲಿ ಲ್ಯಾಂಡ್ ಆಗಬೇಕಿತ್ತು. ಕ್ಯಾಮರಾದಲ್ಲಿ ಸೆರೆ ಆಗಿರುವ ದೃಶ್ಯದಲ್ಲಿ ವಿಮಾನವೂ ರನ್‌ವೇಯಲ್ಲಿ ಸಾಗಿ ಟೇಕಾಫ್ (take-off) ಆಗಿ ಕೆಲ ಕ್ಷಣದಲ್ಲಿ ಟೈರ್ (landing gear tyre) ಕಳಚಿ ಕೆಳಗೆ ಬಿದ್ದಿದೆ. ಅಲ್ಲದೇ ಟೈರ್ ಕಳಚಿಕೊಂಡ ಸ್ಥಳದಿಂದ ಹೊಗೆ ಬರುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.
ಡ್ರಗ್ ಹೀರಿ ಫ್ಲೈಟ್ ಏರಿದ: ಗಗನಸಖಿಯೊಂದಿಗೆ ಗಬ್ಬು ಗಬ್ಬಾಗಿ ವರ್ತಿಸಿದ
ವರದಿಗಳ ಪ್ರಕಾರ ಈ ಟೈರ್ ಕಳಚಿದ ನಂತರವೂ ಈ ವಿಮಾನವೂ ಅಮೆರಿಕಾದಲ್ಲಿ(US) ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಹೀಗೆ ವಿಮಾನದಿಂದ ಕಳಚಿ ಬಿದ್ದ ಟೈರ್ ವಿಮಾನ ನಿಲ್ದಾಣದ ರನ್‌ವೇಯ ಕೊನೆಯಲ್ಲಿ ಸಿಕ್ಕಿದೆ ಎಂದು ತಿಳಿದು ಬಂದಿದೆ. 100 ಕೆಜಿ ತೂಕದ ಲ್ಯಾಂಡಿಂಗ್ ಗೇರ್ ಟೈರ್ ಇದಾಗಿದೆ. ಅವಘಡದಲ್ಲಿ ಯಾರಿಗೂ ಹಾನಿ ಸಂಭವಿಸಿಲ್ಲ.
ಬೋಯಿಂಗ್ 747 ಡ್ರೀಮ್‌ಲಿಫ್ಟರ್ (Dreamlifter) ವಿಮಾನವೂ ಮೂಲತಃ ಸಾರಿಗೆ ವಿಮಾನವಾಗಿದ್ದು, ಇದು ಬೋಯಿಂಗ್ 747-400 ವಿಮಾನದ ಮಾರ್ಪಡಿಸಿದ ಆವೃತ್ತಿಯಾಗಿದೆ ಇದನ್ನು ಅನೇಕ ವಿಮಾನಯಾನ ಸಂಸ್ಥೆಗಳು ಬಳಸುತ್ತವೆ. ಈ ಡ್ರೀಮ್‌ಲಿಫ್ಟರ್, ಬೋಯಿಂಗ್ 787 ಡ್ರೀಮ್‌ಲೈನರ್‌ನ ಘಟಕಗಳನ್ನು ಸಾಗಿಸುತ್ತದೆ. ಬೋಯಿಂಗ್ ಪ್ರಕಾರ, ಅಗತ್ಯ ಸಿಬ್ಬಂದಿಯನ್ನು ಮೀರಿ ಪ್ರಯಾಣಿಕರನ್ನು ಸಾಗಿಸಲು ಡ್ರೀಮ್‌ಲಿಫ್ಟರ್‌ಗೆ (passengers) ಅನುಮತಿ ಇಲ್ಲ. ಇದು ತನ್ನ ಮೊದಲ ಹಾರಾಟವನ್ನು ಸೆಪ್ಟೆಂಬರ್ 2006 ರಲ್ಲಿ ಆರಂಭಿಸಿತ್ತು.
Iran ವಿಮಾನಕ್ಕೆ ಬಾಂಬ್ ಬೆದರಿಕೆ: Chinaದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನ
ವಿಮಾನ ಪ್ರಯಾಣ ಸಾವಿನ ಮೇಲೆ ಕುಳಿತು ಸಂಚರಿಸಿದಂತೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ಒಂದೇ ಕ್ಷಣದಲ್ಲಿ ಇಡೀ ವಿಮಾನ ನಮ್ಮನ್ನು ಪರಲೋಕಕ್ಕೆ ಕರೆದೊಯ್ಯಬಲ್ಲದು. ಆದರೆ ಅದೃಷ್ಟವಶಾತ್ ಇಲ್ಲಿ ವಿಮಾನದ ಚಕ್ರವೇ ಕಳಚಿ ಬಿದ್ದರೂ ಏನು ಅನಾಹುತ ಸಂಭವಿಸಿಲ್ಲ.