ವಾಷಿಂಗ್ಟನ್(ನ.23)‌: ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೂ ಇನ್ನೂ ಒಪ್ಪಿಕೊಳ್ಳದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅಧಿಕಾರ ಹಸ್ತಾಂತರಿಸಲು ನಿರಾಕರಿಸುತ್ತಾರೆ ಎನ್ನುವ ವಿಶ್ಲೇಷಣೆಗಳ ನಡುವೆಯೇ ಟ್ರಂಪ್‌ ಅವರು 2024ರ ಚುನಾವಣೆಗೆ ತಯಾರಾಗುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಸೋರಿಕೆಯಾದ ಅವರ ಸ್ನೇಹಿತರೊಂದಿಗಿನ ರಹಸ್ಯ ಫೋನ್‌ ಸಂಭಾಷಣೆ ಮೂಲಕ ಈ ಕುತೂಹಲಕರ ಮಾಹಿತಿ ಹೊರಬಿದ್ದಿದೆ.

ಟ್ರಂಪ್‌ಗೆ ನೀಡಲಾದ ಪ್ರತಿಕಾಯ ಔಷಧ ಕೊರೋನಾಗೆ ಬಳಸಲು ಅಸ್ತು!

2024ರ ಚುನಾವಣೆಗೆ ಈ ವರ್ಷದ ಅಂತ್ಯದಿಂದಲೇ ಪ್ರಚಾರ ಆರಂಭಿಸುವುದಾಗಿ ತಮ್ಮ ಆಪ್ತ ಬಳಗದಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಕಾರ್ಪೋರೇಟ್‌ ಕಂಪನಿಗಳಲ್ಲಿ ಭಾಷಣ ಮಾಡಲು, ರಾರ‍ಯಲಿಗಳಲ್ಲಿ ಟಿಕೆಟ್‌ ಮಾರಾಟ ಮಾಡಲು, ಟಿವಿ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ಹೀಗೆ ಎಲ್ಲಾ ಸಿದ್ಧತೆಗಳು ನಡೆಸಿಕೊಳ್ಳುತ್ತಿರುವುದಾಗಿ ಗೊತ್ತಾಗಿದೆ. ಅಲ್ಲದೇ ತನ್ನ ನಾಲ್ಕು ವರ್ಷದ ಅವಧಿಯ ಉದ್ದಕ್ಕೂ ತನ್ನ ವಿರುದ್ದ ಕೆಲಸ ಮಾಡಿದ್ದ ಮಾಧ್ಯಮಗಳ ವಿರುದ್ದ ಕೆಂಡವಾಗಿರುವ ಅವರು, ಸ್ವಂತ ಟಿವಿ ಚಾನೆಲ್‌ ಒಂದನ್ನು ಆರಂಭಿಸಲೂ ಮುಂದಾಗಿದ್ದಾರೆ. ಅಲ್ಲದೇ ಮುಂದಿನ ನಾಲ್ಕು ವರ್ಷದ ಅವಧಿಯಲ್ಲಿ ಭಾರೀ ಪ್ರಮಾಣದ ವೈಯಕ್ತಿಕ ಸಾಲಗಳನ್ನು ಪಾವತಿ ಮಾಡಬೇಕಿದ್ದು, ಹೀಗಾಗಿ ರಾಜಕೀಯವಾಗಿ ಪ್ರವರ್ಥಮಾನದಲ್ಲಿ ಇರಲು ಟ್ರಂಪ್‌ ಬಯಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೊರೋನಾ G20 ಸಮ್ಮಿಟ್‌ಗೆ ಚಕ್ಕರ್ ಹಾಕಿ ಗಾಲ್ಫ್‌ ಆಡಿದ ಟ್ರಂಪ್!

ಜನವರಿಯಲ್ಲಿ ಅವರ ಅವಧಿ ಮುಗಿಯಲಿದ್ದು, ಬಳಿಕ ಫೆä್ಲರಿಡಾದಲ್ಲಿ ಅವರು ತಂಗಲಿದ್ದಾರೆ. ಕೆಲ ವರ್ಷಗಳಿಂದ ಅವರ ಉದ್ಯಮದ ಆದಾಯದಲ್ಲಿ ಕಡಿತವಾಗಿದ್ದು, ಅದರ ಚೇತರಿಕೆ ಬಗ್ಗೆಯೂ ಗಮನ ಹರಿಸಲಿದ್ದಾರೆ. ಅವರ ಪುತ್ರಿ ಇವಾಂಕ, ಅಳಿಯ ಜರೆದ್‌ ಕುಶ್ನೆರ್‌ ಹಾಗೂ ಅವರ ಇತರ ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಗಮನ ಹರಿಸಲಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.