Asianet Suvarna News Asianet Suvarna News

ಫ್ರಾನ್ಸ್‌ನಲ್ಲಿ 4 ದಿನದ ಬಂಧನದ ನಂತರ ಕೊನೆಗೂ ಮುಂಬೈಗೆ ಬಂದಿಳಿದ ವಿಮಾನ

ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಶಂಕೆಯ ಮೇರೆಗೆ ಫ್ರಾನ್ಸ್‌ನಲ್ಲಿ 4 ದಿನಗಳ ಕಾಲ ತಡೆಹಿಡಿಯಲ್ಪಟ್ಟಿದ್ದ 276 ಪ್ರಯಾಣಿಕರಿದ್ದ , ಬಹುತೇಕ ಭಾರತೀಯರೇ ಇದ್ದ ವಿಮಾನ  A340 ಕಡೆಗೂ ಮುಂಬೈಗೆ ಬಂದು ಲ್ಯಾಂಡ್ ಆಗಿದ್ದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

Donkey Flight The flight finally landed in Mumbai after 4 days of detention in France akb
Author
First Published Dec 26, 2023, 2:14 PM IST

ನವದೆಹಲಿ: ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಶಂಕೆಯ ಮೇರೆಗೆ ಫ್ರಾನ್ಸ್‌ನಲ್ಲಿ 4 ದಿನಗಳ ಕಾಲ ತಡೆಹಿಡಿಯಲ್ಪಟ್ಟಿದ್ದ 276 ಪ್ರಯಾಣಿಕರಿದ್ದ , ಬಹುತೇಕ ಭಾರತೀಯರೇ ಇದ್ದ ವಿಮಾನ  A340 ಕಡೆಗೂ ಮುಂಬೈಗೆ ಬಂದು ಲ್ಯಾಂಡ್ ಆಗಿದ್ದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮುಂಜಾನೆ 4 ಗಂಟೆಗೆ ಮುಂಬೈನಲ್ಲಿ ಲ್ಯಾಂಡ್ ಆದ ಈ ವಿಮಾನವೂ ಅಲ್ಲಿನ ಸ್ಥಳಿಯ ಕಾಲಮಾನ ಮಧ್ಯಾಹ್ನ 2.30ರ ಸುಮಾರಿಗೆ ಪ್ಯಾರಿಸ್‌ನ ವ್ಯಾಟ್ರಿ ಏರ್‌ಪೋರ್ಟ್‌ನಿಂದ ಟೇಕಾಫ್ ಆಗಿತ್ತು.  ಫ್ರಾನ್ಸ್ ಆಡಳಿತ ಈ ವಿಚಾರವನ್ನು ಖಚಿತಪಡಿಸಿದೆ ಆದರೆ ಐದು ಅಪ್ರಾಪ್ತ ವಯಸ್ಸಿನವರು ಹಾಗೂ 27 ಜನ ಆಶ್ರಯ ಕೋರಿ ಫ್ರಾನ್ಸ್‌ನಲ್ಲೇ ಉಳಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಮಾನ ಕಳೆದ ಶುಕ್ರವಾರ ವ್ಯಾಟ್ರಿಯಲ್ಲಿ ಲ್ಯಾಂಡ್ ಆಗಿತ್ತು. ಮಾನವ ಕಳ್ಳಸಾಗಣೆ ಶಂಕೆ ಹಿನ್ನೆಲೆಯಲ್ಲಿ ತಪಾಸಣೆ ಮಾಡಿದಾಗ ಈ ವಿಮಾನದಲ್ಲಿದ್ದ 303 ಪ್ರಯಾಣಿಕರಲ್ಲಿ 11 ಜನ ಅಪ್ರಾಪ್ತರಿರುವುದು ಕಂಡು ಬಂದಿತ್ತು.  ಹೀಗಾಗಿ 4 ದಿನಗಳ ಕಾಲ ವಿಮಾನವನ್ನು ಫ್ರಾನ್ಸ್‌ನಲ್ಲೇ ತಡೆಯಲಾಯ್ತು. ಹಾಗೂ ಅದರಲ್ಲಿದ್ದ ಪ್ರಯಾಣಿಕರಿಗೆ ವಾಟ್ರಿ ಏರ್‌ಪೋರ್ಟ್‌ನ ಹಾಲ್‌ನಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಯ್ತು. ಬಿಸಿನೀರು ಶೌಚಾಲಯ, ಮಲಗಲು ಹಾಸಿಗೆ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. 

ದುಬೈನಿಂದ ಬಂದ ಈ ಚಾರ್ಟರ್ ಸೇವೆಯ ವಿಮಾನವು ಇಂಧನ ತುಂಬಿಸುವುದಕ್ಕಾಗಿ ಪ್ಯಾರಿಸ್‌ನಿಂದ ಸುಮಾರು 160 ಕಿಮೀ ದೂರದಲ್ಲಿರುವ ವ್ಯಾಟ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಈ ವೇಳೆ ಪ್ರಯಾಣಿಕರು ಮಾನವ ಕಳ್ಳಸಾಗಣೆಯ ಸುಳಿವು ನೀಡಿದ್ದರಿಂದ ವಿಮಾನದಲ್ಲಿದ್ದ ಪ್ರಯಾಣಿಕರನ್ನೆಲ್ಲಾ ಕೆಳಗಿಳಿಸಲಾಯ್ತು. ಅಮೆರಿಕಾದ ನಿಕರಾಗುವಾಗೆ ಈ ವಿಮಾನ ಸಂಪರ್ಕ ಹೊಂದಿದೆ ಎಂಬ ವಿಚಾರವೂ ಅಧಿಕಾರಿಗಳ ಹುಬ್ಬೇರುವಂತೆ ಮಾಡಿತ್ತು. 

 ಏಕೆಂದರೆ ಮಧ್ಯ ಅಮೇರಿಕನ್ ರಾಷ್ಟ್ರವಾಗಿರುವ ನಿಕರಾಗುವಾದಲ್ಲಿ ವಲಸಿಗರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗಿದೆ. ಅಮೆರಿಕಾದ ಕಸ್ಟಮ್ಸ್‌ ಮತ್ತು ಬಾರ್ಡರ್ ಪಟ್ರೋಲ್ ನೀಡಿದ ಮಾಹಿತಿ ಪ್ರಕಾರ, ಭಾರತೀಯರು ಈ ಮೂಲಕ ಅಕ್ರಮವಾಗಿ ಅಮೆರಿಕಾವನ್ನು ಪ್ರವೇಶಿಸಲು ಯತ್ನಿಸುವ ಘಟನೆಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಬರೀ ಈ ವರ್ಷವೊಂದರಲ್ಲೇ 96,917 ಇಂತಹ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವರ್ಷಕ್ಕಿಂತ 51.61 ಶೇಕಡಾ ಹೆಚ್ಚೆನಿಸಿದೆ. 

ಇಲ್ಲಿ ಕೆಲವು ವಲಸಿಗರು ಬಳಸುವ ಈ ಪ್ರಯಾಣ ವಿಧಾನವನ್ನು 'ಕತ್ತೆ ವಿಮಾನಗಳು' ಎಂದು ಕರೆಯಲಾಗುತ್ತದೆ, ಅಲ್ಲಿ ವ್ಯಕ್ತಿಗಳು ತಮ್ಮ ಅಂತಿಮ ಗುರಿಗಳನ್ನು ತಲುಪಲು ಕಠಿಣವಾದ ಪ್ರಯಾಣ ದಾಖಲೆಯ ಅಗತ್ಯಗಳಿರುವುದಿಲ್ಲ, ಅವರು ತಮ್ಮ ಗುರಿ ತಲುಪಲು ಮೂರನೇ ದೇಶದ ಮೂಲಕ ಸಾಗುತ್ತಾರೆ. 

ಸುದ್ದಿ ಸಂಸ್ಥೆಯೊಂದು ನೀಡಿದ ಮಾಹಿತಿ ಪ್ರಕಾರ, ಈ ವಿಮಾನವು ಯುನೈಟೆಡ್ ಸ್ಟೇಟ್ಸ್‌ಗೆ ವ್ಯಕ್ತಿಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿರುವ ಅಪರಾಧಿ ತಂಡದೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಹೇಳಿದ್ದು, ಈಗ ಈ ಬಗ್ಗೆ ಫ್ರಾನ್ಸ್‌ನ ಸಂಘಟಿತ ಅಪರಾಧ ವಿರೋಧಿ ಘಟಕ, ಜುನಾಲ್ಕೊದ ಅಧಿಕಾರ ವ್ಯಾಪ್ತಿಯಡಿ ನಡೆಯುತ್ತಿದೆ.  ಒಂದು ವೇಳೆ ಆರೋಪ ಸಾಬೀತಾದರೆ ಫ್ರಾನ್ಸ್‌ನಲ್ಲಿ ಮಾನವ ಕಳ್ಳಸಾಗಣೆಗೆ 20 ವರ್ಷಗಳವರೆಗೆ ಶಿಕ್ಷೆ ನೀಡಲಾಗುತ್ತದೆ.

Follow Us:
Download App:
  • android
  • ios