Asianet Suvarna News Asianet Suvarna News

22 ಕೋಟಿ ರು. ಕಟ್ಟಿ ಮರುಮತ ಎಣಿಕೆಗೆ ಡೊನಾಲ್ಡ್ ಟ್ರಂಪ್ ಅರ್ಜಿ

ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮತ್ತೆ ಮರು ಎಣಿಕೆ ಮಾಡಲು ಆಗ್ರಹಿಸಿ 22 ಕೋಟಿ ಹಣ ಕಟ್ಟಲಾಗಿದೆ. ಯಾವ ಚುನಾವಣೆ..?

Donald Trump Wants Recounting in 2 County snr
Author
Bengaluru, First Published Nov 20, 2020, 8:41 AM IST

ಮ್ಯಾಡಿಸನ್‌ (ನ.20): ಅಧ್ಯಕ್ಷೀಯ ಚುನಾವಣೆಯಲ್ಲಿ ಉಂಟಾದ ಸೋಲನ್ನು ಇನ್ನೂ ಒಪ್ಪಿಕೊಳ್ಳದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ, ವಿಸ್ಕಾನ್ಸಿನ್‌ನ ಎರಡು ಕೌಂಟಿಗಳ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಮರು ಎಣಿಕೆಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. 

ಮಿಲ್ವಾಯ್ಕೆ ಹಾಗೂ ಡೇನ್‌ ಕೌಂಟಿಗಳಲ್ಲಿ ಮರು ಎಣಿಕೆಗೆ ಕೋರಿಕೆ ಸಲ್ಲಿಸಿದ್ದು, ಇದಕ್ಕಾಗಿ 22.5 ಕೋಟಿ ಠೇವಣಿ ಹಣವನ್ನೂ ಕೂಡ ಪಾವತಿ ಮಾಡಿದ್ದಾರೆ.

ಸೋಲೊಪ್ಪಿಕೊಳ್ಳಲು ಮನಸ್ಸು ಮಾಡುತ್ತಿರುವ ಟ್ರಂಪ್, ಬೈಡೆನ್‌ಗೆ ಚೀನಾ ಶುಭಾಶಯ ...

 ಆದರೆ ಚುನಾವಣೆ ಆಕ್ರಮಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಟ್ರಂಪ್‌ ಸಲ್ಲಿಸಿಲ್ಲ. ಶುಕ್ರವಾರದಿಂದ ಮರು ಎಣಿಕೆ ಕಾರ್ಯ ಆರಂಭವಾಗಲಿದ್ದು, ಡಿ.1ರ ಒಳಗೆ ಮುಕ್ತಾಯಗೊಳ್ಳಲಿದೆ. ಈ ಎರಡೂ ಕೌಂಟಿಗಳಲ್ಲಿ ಜೋ ಬೈಡೆನ್‌ 577,455 ಹಾಗೂ ಟ್ರಂಪ್‌ 213,157 ಮತ ಪಡೆದಿದ್ದರು.

Follow Us:
Download App:
  • android
  • ios