ವಾಷಿಂಗ್ಟನ್  (ಜೂ. 14)  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆರೋಗ್ಯದಲ್ಲಿ ಏರು ಪೇರಾಗಿದೆಯಾ? ಈ ವಿಡಿಯೋ ನೋಡಿದರೆ ಅಂತಹ ಪ್ರಶ್ನೆ ಉದ್ಭವಿಸುವುದು ಸಹಜ .

ಅಮೆರಿಕಾ ಸೇನಾ ಅಕಾಡೆಮಿಯಲ್ಲಿ ಶನಿವಾರ ಟ್ರಂಪ್ ಭಾಷಣ ಮಾಡುತ್ತಿದ್ದ ಟ್ರಂಪ್ ನೀರು ಕುಡಿಯಲು ಯತ್ನ ಮಾಡಿದ್ದಾರೆ. ಬಲಗೈನಿಂದ ನೀರು ಕುಡಿಯಲು ಯತ್ನಿಸಿದ್ದು ಅದು ಸಾಧ್ಯವಾಗದಿದ್ದಾಗ ಎಡಗೈ ಸಹಾಯ ಪಡೆದುಕೊಂಡಿದ್ದಾರೆ.

ಭಾರತದ ಐಟಿ ಉದ್ಯೋಗಿಗಳ ಮೇಲೆ ಟ್ರಂಪ್ ಪ್ರಹಾರ

ಟ್ರಂಪ್ ಇತ್ತೀಚೆಗೆ ಸೇನಾ ಕಾಲೇಜಿನಲ್ಲಿ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ನಂತರ  ಮೆಟ್ಟಿಲುಗಳ ಮೂಲಕ ಇಳಿದು ಹೋಗಲು ತೊಂದರೆ ಪಟ್ಟಿದ್ದರು. ಕೊರೋನಾ, ವರ್ಣತಾರತಮ್ಯ, ಪಾಕೃತಿಕ ವಿಕೋಪಗಳಿಂದ ಅಮೆರಿಕದ ಜತೆ ಅದರ ಅಧ್ಯಕ್ಷರು ದಣಿದಿದ್ದಾರೆ. 

ನಾನು ಆರೋಗ್ಯವಾಗಿದ್ದೇನೆ, ಯಾವುದೇ ತೊಂದರೆ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ.  ಕೊರೋನಾ ಮುನ್ನೆಚ್ಚರಿಕೆಯ ಕೆಲ ಔಷಧಿಗಳನ್ನು ಅಮೆರಿಕದ ಅಧ್ಯಕ್ಷರಿಗೆ ನೀಡಲಾಗಿದೆ. ಅದರ ಪರಿಣಾಮ ಇದ್ದರೂ ಇರಬಹುದು ಎಂದು ಸೋಶಿಯಲ್ ಮೀಡಿಯಾ ಹೇಳಿದೆ.