ಏಲಿಯನ್‌ಗಳ ಅಸ್ತಿತ್ವದ ಬಗ್ಗೆಯ ಕುತೂಹಲ ನಿರಂತರ. ಅಮೆರಿಕ ಮಾಹಿತಿ ಮುಚ್ಚಿಡುತ್ತಿದೆ ಎಂಬ ಆರೋಪಗಳ ನಡುವೆ, ಇಸ್ರೋ ಮಾಜಿ ಮುಖ್ಯಸ್ಥರು ಅನ್ಯಗ್ರಹ ಜೀವಿಗಳ ಸಾಧ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಭೂಮಿಗಿಂತ ತಾಂತ್ರಿಕವಾಗಿ ಮುಂದುವರಿದ ನಾಗರಿಕತೆಗಳಿರಬಹುದು ಎಂಬುದು ಅವರ ಅಭಿಪ್ರಾಯ. ಇತ್ತೀಚೆಗೆ ಏಲಿಯನ್‌ನಂತಹ ಜೀವಿಯ ವಿಡಿಯೋ ವೈರಲ್ ಆಗಿದ್ದು, ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

ಏಲಿಯನ್‌ಗಳು ಎನ್ನುವ ಕಲ್ಪನೆಯೇ ಕುತೂಹಲವಾದದ್ದು. ಮನುಷ್ಯದ ಊಹೆಗೂ ನಿಲುಕದ ಅದೆಷ್ಟೋ ಪ್ರಕೃತಿ ವಿಸ್ಮಯಗಳು ನಡೆದೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಕೆಲವು ವಿಷಯಗಳು ಎಲ್ಲವನ್ನೂ ಮೀರಿದ್ದೇ ಆಗಿವೆ. ಅಂಥದ್ದರಲ್ಲಿ ಒಂದು ಈ ಏಲಿಯನ್‌. ಏಲಿಯನ್‌ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆ ಇಂದು ನಿನ್ನೆಯದ್ದಲ್ಲ. ಎಷ್ಟೋ ದಶಕಗಳಿಂದ ಈ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ, ಪರ-ವಿರೋಧಗಳ ಚರ್ಚೆಗಳೂ ಆಗುತ್ತಿವೆ. ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಈಗಾಗಲೇ ಏಲಿಯನ್ಸ್ ಬಗ್ಗೆ ಮಾಹಿತಿ ಇದೆ ಎಂಬ ಸುದ್ದಿ ಇತ್ತು. ಆದರೆ ಏಲಿಯನ್​ಗಳ ಮಾಹಿತಿಗಳನ್ನು ಅಮರಿಕ ಮರೆಮಾಚುತ್ತಿದೆ ಎಂಬ ಗಂಭೀರ ಆರೋಪಗಳೂ ಇವೆ. ನೂರಾರು ವರ್ಷಗಳ ಭವಿಷ್ಯ ನುಡಿದಿದ್ದ ಬಾಬಾ ವಾಂಗಾ ಮುಂದೊಂದು ದಿನ ಈ ಭೂಮಿಯ ಮೇಲೆ ಏಲಿಯನ್​ ಆಳುತ್ತದೆ ಎಂದಿದ್ದರು. ಅದೇ ರೀತಿ, 2025ರಲ್ಲಿಯೇ ಏಲಿಯನ್​ಗಳು ಪ್ರತ್ಯಕ್ಷವಾಗಲಿವೆ ಎಂದೂ ಭವಿಷ್ಯ ನುಡಿಯಲಾಗಿತ್ತು. 

ಅದರ ಬೆನ್ನಲ್ಲೇ ಈಚೆಗಷ್ಟೇ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎಸ್‌.ಸೋಮನಾಥ್ ಅವರು, ರಣವೀರ್ ಅಲ್ಲಾಬಾಡಿಯಾ ಅವರೊಂದಿಗಿನ ಸಂದರ್ಶನದಲ್ಲಿ ಏಲಿಯನ್​ ಇರುವಿಕೆಯ ಬಗ್ಗೆ ತಿಳಿಸಿದ್ದರು. ಈ ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ನಂಬಲಸಾಧ್ಯವಾಗಿರುವ ಮಾಹಿತಿಗಳನ್ನೂ ಅವರು ನೀಡಿದ್ದರು. ಭೂಮಿಯ ಹೊರತಾಗಿಯೂ ನಮಗಿಂತ ಸಾವಿರ ವರ್ಷಗಳಷ್ಟು ಮುಂದಿರುವ ಯಾವುದಾದರೂ ನಾಗರಿಕತೆಯ ಗ್ರಹದ ಜೀವಿಗಳು, ನಮಗಿಂತಲೂ ಅಭಿವೃದ್ಧಿ ಹಾಗೂ ತಂತ್ರಜ್ಞಾನದಲ್ಲಿ ಮುಂದಿದ್ದು, ನಮ್ಮನ್ನು ವಿಶ್ವದ ಯಾವುದಾದರೂ ಒಂದು ಮೂಲೆಯಿಂದ ನಮ್ಮ ಎಲ್ಲ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ನೋಡುತ್ತಿರುವ ಎಲ್ಲಾ ಸಾಧ್ಯತೆಗಳು ಇವೆ ಎನ್ನುವುದು ಡಾ.ಸೋಮನಾಥ್‌ ಅವರ ಮಾತು.

ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!

ಇದಾಗಲೇ ಏಲಿಯನ್​ ರೀತಿಯ ನಿಗೂಢ ವಸ್ತುಗಳು ಕೆಲವರ ಕೈಸೇರಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಆದರೆ ಇದೇ ಮೊದಲ ಬಾರಿಗೆ ಏಲಿಯನ್​ ರೀತಿಯ ಜೀವಂತ ಜೀವಿಯೊಂದು ಹೊಲದಲ್ಲಿ ಪತ್ತೆಯಾಗಿದೆ. ಇದರ ವಿಡಿಯೋ ವೈರಲ್​ ಆಗಿದೆ. ಇದು ಎಲ್ಲಿಯ ವಿಡಿಯೋ ಎನ್ನುವುದು ತಿಳಿದಿದಲ್ಲ. ಆದರೆ, ಹಾರುವ ತಟ್ಟೆಯ ರೂಪದಲ್ಲಿ ಬಿದ್ದಿರುವ ಜೀವಂತ ಏಲಿಯನ್​ ಸಿಕ್ಕಿದೆ. ಅದರ ಶಬ್ದ ಕೂಡ ಕೇಳಬಹುದಾಗಿದೆ. ಅದನ್ನು ಹಿಡಿದು ವ್ಯಕ್ತಿಯೊಬ್ಬರು ತೋರಿಸುತ್ತಿದ್ದಾರೆ. ಹೊಲದಲ್ಲಿ ಸಿಕ್ಕ ಏಲಿಯನ್​ ಎಂದು ಬರೆಯಲಾಗಿದೆ. ಅವರ ಹಿಂದುಗಡೆ ವಿಚಿತ್ರ ವಸ್ತುವನ್ನು ನೋಡಬಹುದಾಗಿದೆ. ಇದರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. 

ಅಷ್ಟಕ್ಕೂ, ಸೋಮನಾಥ್​ ಅವರು ಹೇಳಿದ್ದೇನೆಂದರೆ, ಬ್ರಹ್ಮಾಂಡವು ಶತಕೋಟಿ ಆಕಾಶಕಾಯಗಳು, ನಕ್ಷತ್ರಗಳು ಮತ್ತು ಗ್ರಹಗಳಿಂದ ಹೋಗಿರುವಂಥದ್ದು. ಆದರೆ ಈ ವಿಶಾಲ ಜಗತ್ತಿನಲ್ಲಿ ಜೀವಿಗಳಿಗೆ ಆಶ್ರಯ ನೀಡುವ ಅಥವಾ ನಿಡಬಲ್ಲ ಏಕೈಕ ಗ್ರಹವೆಂದರೆ ಭೂಮಿ. ಮುಂದಿನ 1000 ವರ್ಷಗಳಲ್ಲಿ ತಂತ್ರಜ್ಞಾನವು ಜಾಗತಿಕವಾಗಿ ಹೆಚ್ಚಾಗುತ್ತದೆ ಎನ್ನುವುದು ನಿಜವಾದರೂ, ಭೂಮಿಯ ಹೊರತಾಗಿಯೂ ಬೇರೆ ಯಾವುದೋ ಗ್ರಹವು ಇದಾಗಲೇ ಸಾವಿರಾರು ವರ್ಷಗಳಷ್ಟು ಮುಂದುವರಿದಿರಬಹುದು ಇಲ್ಲವೇ 200 ವರ್ಷಗಳಷ್ಟು ಹಿಂದಕ್ಕೆ ಇದ್ದಿರಲೂಬಹುದು. ಆದ್ದರಿಂದ ಯಾವುದೇ ಅನ್ಯಜೀವಿಯ ಅಸ್ತಿತ್ವದಲ್ಲಿ ಇಲ್ಲ ಎನ್ನಲು ಸಾಧ್ಯವಿಲ್ಲ ಎಂದು ಅವರು ವಿಶ್ಲೇಷಿಸಿದ್ದರು. 

View post on Instagram