ದೇಶದಲ್ಲೀಗ 17000 ಸೋಂಕಿತರು, 565 ಸಾವು!

17000 ಸೋಂಕಿತರು, 565 ಸಾವು| ನಿನ್ನೆ ಮಹಾರಾಷ್ಟ್ರದಲ್ಲಿ 555, ಗುಜರಾತ್‌ನಲ್ಲಿ 367 ಹೊಸ ಪ್ರಕರಣ| ನಿನ್ನೆ ಒಂದೇ ದಿನ 1712 ಹೊಸ ಕೇಸು, 62 ಜನರ ಸಾವು ದಾಖಲು

In India Coronavirus cases top 17000 over 500 dead

ನವದೆಹಲಿ(ಏ.20): ಕೊರೋನಾ ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊರತಾಗಿಯೂ, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ಉತ್ತರಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಭಾನುವಾರ ಭಾರೀ ಪ್ರಮಾಣದಲ್ಲಿ ಹೊಸ ಪ್ರಕರಣಗಳು ದೃಢಪಟ್ಟಿವೆ. ಭಾನುವಾರ ಒಂದೇ ದಿನ ದೇಶಾದ್ಯಂತ 1712 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 17029ಕ್ಕೆ ತಲುಪಿದೆ. ಈ ನಡುವೆ ಭಾನುವಾರ ಮತ್ತೆ 65 ಜನ ಸಾವನ್ನಪ್ಪಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 565ಕ್ಕೆ ಏರಿದೆ.

ಕೊರೋನಾ ಸೋಂಕಿತರು ಹಾನಗಲ್ಲಗೆ ಭೇಟಿ: ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

ಮಹಾ ಸ್ಫೋಟ: ದೇಶದಲ್ಲೇ ಅತಿಹೆಚ್ಚಿನ ಸೋಂಕು ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿ ಮತ್ತೆ 552 ಬೆಳಕಿಗೆ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4200ಕ್ಕೆ ತಲುಪಿದೆ. ಇನ್ನು ಗುಜರಾತ್‌ನಲ್ಲೂ 367 ಹೊಸ ಪ್ರಕರಣ ಬೆಳಕಿಗೆ ಬಂದಿಟ್ಟು ಒಟ್ಟು ಸೋಂಕಿತರ ಸಂಖ್ಯೆ 2000ದತ್ತ ದಾಪುಗಾಲಿಟ್ಟಿದೆ. ಉಳಿದಂತೆ ತಮಿಳುನಾಡಲ್ಲಿ 105, ಉತ್ತರಪ್ರದೇಶದಲ್ಲಿ 125 ಹೊಸ ಪ್ರಕರಣ ಬೆಳಕಿಗೆ ಬಂದಿದೆ.

ದೇಶದಲ್ಲಿ ಅತಿಹೆಚ್ಚು ಸಾವು ದಾಖಲಾಗಿರುವುದು ಮಹಾರಾಷ್ಟ್ರದಲ್ಲಿ (233). ಉಳಿದಂತೆ, ಮಧ್ಯಪ್ರದೇಶದಲ್ಲಿ 70, ಗುಜರಾತ್‌ನಲ್ಲಿ 58, ದೆಹಲಿಯಲ್ಲಿ 43 ಮಂದಿಯನ್ನು ಸೋಂಕು ಬಲಿಪಡೆದಿದೆ.

Latest Videos
Follow Us:
Download App:
  • android
  • ios