ಅಮೆರಿಕ ಅಧ್ಯಕ್ಷ ಟ್ರಂಪ್ ರಾಜಧಾನಿ ವಾಷಿಂಗ್ಟನ್ ಡಿಸಿಯ ಪೊಲೀಸ್ ಇಲಾಖೆಯನ್ನು ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಿ, ಆ ಜಾಗಕ್ಕೆ ರಾಷ್ಟ್ರೀಯ ಗಾರ್ಡ್ (ಸೇನೆ) ಅನ್ನು ನಿಯೋಜಿಸುವುದಾಗಿ ಸೋಮವಾರ ಘೋಷಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ ರಾಜಧಾನಿ ವಾಷಿಂಗ್ಟನ್ ಡಿಸಿಯ ಪೊಲೀಸ್ ಇಲಾಖೆಯನ್ನು ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಿ, ಆ ಜಾಗಕ್ಕೆ ರಾಷ್ಟ್ರೀಯ ಗಾರ್ಡ್ (ಸೇನೆ) ಅನ್ನು ನಿಯೋಜಿಸುವುದಾಗಿ ಸೋಮವಾರ ಘೋಷಿಸಿದ್ದಾರೆ.
ರಾಜಧಾನಿಯಲ್ಲಿ ಹೆಚ್ಚುತ್ತಿರುವ ಅಪರಾಧ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಕಾನೂನು, ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಮದ್ಯ, ತಂಬಾಕು, ಬಂದೂಕುಗಳು ಮತ್ತು ಸ್ಫೋಟಕಗಳ ನಿಯಂತ್ರಣ ಘಟಕಗಳು ಸೇರಿ ಸುಮಾರು 100ಕ್ಕೂ ಅಧಿಕ ಅಧಿಕಾರಿಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಲು ಟ್ರಂಪ್ ನಿರ್ಧರಿಸಿದ್ದಾರೆ. ಈ ಹಿಂದೆ ಲಾಸ್ ಏಂಜಲೀಸ್‌ನಲ್ಲಿ ಟ್ರಂಪ್‌ರ ವಲಸೆ ನೀತಿ ವಿರೋಧಿಸಿ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಟ್ರಂಪ್ ಸೇನೆ ನಿಯೋಜಿಸಿದ್ದರು.
ಅಮೆರಿಕದಲ್ಲಿ ಕುಳಿತು ಭಾರತಕ್ಕೆ ಪರಮಾಣು ಬೆದರಿಕೆ ಹಾಕಿದ ಪಾಕ್ ಸೇನಾ ಮುಖ್ಯಸ್ಥ
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅಮೆರಿಕದಲ್ಲಿ ಕುಳಿತುಕೊಂಡು ಭಾರತಕ್ಕೆ ಪರಮಾಣು ಬೆದರಿಕೆ ಹಾಕಿದ್ದಾರೆ. ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ಮಿಲಿಟರಿ ಆಡಳಿತಗಾರ, ಭಾರತದೊಂದಿಗಿನ ಭವಿಷ್ಯದ ಸಂಘರ್ಷದಲ್ಲಿ ತಮ್ಮ ರಾಷ್ಟ್ರವು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸಿದರೆ, ಅದು ಒಬ್ಬಂಟಿಯಾಗಿ ಸೋಲೊಪ್ಪಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಈ ಹೇಳಿಕೆಗಳು ಅಮೆರಿಕದ ನೆಲದಿಂದ ಮೂರನೇ ದೇಶದ ವಿರುದ್ಧ ಪರಮಾಣು ಬೆದರಿಕೆ ಒಡ್ಡಿದ ಮೊದಲ ಉದಾಹರಣೆಯಾಗಿದೆ. ಈ ಕಾರ್ಯಕ್ರಮವನ್ನು ಟ್ಯಾಂಪಾದ ಗೌರವಾನ್ವಿತ ಕಾನ್ಸಲ್ ಅಡ್ನಾನ್ ಅಸದ್ ಆಯೋಜಿಸಿದ್ದರು ಮತ್ತು ಪಾಕಿಸ್ತಾನಿ ಮೂಲದ ಸುಮಾರು 120 ಸದಸ್ಯರು ಭಾಗವಹಿಸಿದ್ದರು.
ಸಿಂಧೂ ನದಿ ಒಪ್ಪಂದ ವಿವಾದ
ಸಿಂಧೂ ನದಿ ವ್ಯವಸ್ಥೆಯಲ್ಲಿ ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಮಿತಿಗೊಳಿಸುವ ಮೂಲಸೌಕರ್ಯಗಳನ್ನು ನಿರ್ಮಿಸದಂತೆ ಜನರಲ್ ಮುನೀರ್ ಭಾರತಕ್ಕೆ ಎಚ್ಚರಿಕೆ ನೀಡಿದರು. ಅಂತಹ ಯಾವುದೇ ಯೋಜನೆಯನ್ನು ನಾಶಪಡಿಸಲಾಗುವುದು ಎಂದು ಅವರು ಪ್ರತಿಜ್ಞೆ ಮಾಡಿದರು.
