ವ್ಯಾಟಿಕನ್‌ ಸಿಟಿ[ಜ.09]: ಹೊಸ ವರ್ಷದ ರಾತ್ರಿ ವೇಳೆ ತನ್ನನ್ನು ಎಳೆದ ಮಹಿಳೆಯ ಕೈಗೆ ಪೆಟ್ಟು ಕೊಟ್ಟಘಟನೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಸನ್ಯಾಸಿನಿಯೊಬ್ಬರು ಪವಿತ್ರ ಚುಂಬನ ಕೋರಿದಾಗ ಪೋಪ್‌ ಫ್ರಾನ್ಸಿಸ್‌ ತಕ್ಷಣಕ್ಕೆ ನಿರಾಕರಿಸಿದ ಘಟನೆ ನಡೆದಿದೆ.

ವಾರದ ಪ್ರವಚನಕ್ಕೆಂದು ಪೋಪ್‌ ಫ್ರಾನ್ಸಿಸ್‌ ವ್ಯಾಟಿಕನ್‌ ಅಡಿಟೋರಿಯಂಗೆ ಬಂದಾಗ, ಸನ್ಯಾಸಿನಿಯೊಬ್ಬರು ತನಗೆ ಪವಿತ್ರ ಚುಂಬನ ನೀಡಬೇಕು ಎಂದು ಕೋರಿದ್ದಾರೆ. ಈ ವೇಳೆ ಪೋಪ್‌, ನಾನು ಚುಂಬಿಸುತ್ತೇನೆ. ನೀವು ಸುಮ್ಮನೇ ನಿಲ್ಲಬೇಕು. ಕಚ್ಚಬಾರದು ಎಂದು ಹೇಳಿದ್ದಾರೆ.

ಇದಕ್ಕೆ ಒಪ್ಪಿದ ಬಳಿಕ ಪೋಪ್‌ ಸನ್ಯಾಸಿನಿಯ ಕೆನ್ನೆ ಚುಂಬಿಸಿದ್ದಾರೆ. ಇದು ಅಲ್ಲಿ ನೆರೆದಿರುವವ ಹರ್ಷಕ್ಕೆ ಕಾರಣವಾಗಿದೆ.

ಕೈ ಎಳೆದ ಮಹಿಳೆಗೆ ಪೆಟ್ಟು ಕೊಟ್ಟು ಬಳಿಕ ಕ್ಷಮೆ ಯಾಚಿಸಿದ ಪೋಪ್‌!

ಕ್ರೈಸ್ತರ ಪರಮೋಚ್ಛ ಗುರುವಾಗಿರುವ ಪೋಪ್‌ ಬಲಗೈಯಲ್ಲಿರುವ ಉಂಗುರ ಚುಂಬಿಸುವ ಮೂಲಕ ಭಕ್ತರು ಗೌರವ ಸೂಚಿಸುವುದು ಹಾಗೂ ಕೆನ್ನೆ ಚುಂಬಿಸಿ ಭಕ್ತರಿಗೆ ಪೋಪ್‌ ಗೌರವಾದರ ತೋರುವುದು ಕ್ರೈಸ್ತ ಸಂಪ್ರದಾಯ.