ಮಹಿಳೆಯೊಬ್ಬರ ಅಂಡಾಶಯದಲ್ಲಿ ಬೆಳೆದಿದ್ದ 54 ಕೇಜಿ ತೂಕದ ಗಡ್ಡೆ| ಮಹಿಳೆಯ ದೇಹದಿಂದ 54 ಕೇಜಿ ತೂಕದ ಗಡ್ಡೆ ಹೊರಕ್ಕೆ: ವಿಶ್ವದಲ್ಲೇ ಮೊದಲು| 

ನವದೆಹಲಿ(ಆ.24): ಮಹಿಳೆಯೊಬ್ಬರ ಅಂಡಾಶಯದಲ್ಲಿ ಬೆಳೆದಿದ್ದ 54 ಕೇಜಿ ತೂಕದ ಗಡ್ಡೆಯನ್ನು ಸ್ಥಳೀಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ. ಇಷ್ಟು ದೊಡ್ಡ ಗಾತ್ರದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದ ಪ್ರಕರಣ ವಿಶ್ವದಲ್ಲೇ ಮೊದಲು ಎನ್ನಲಾಗಿದೆ.

1 ಗ್ರಾಂ ಮೀನು, 40 ನಿಮಿಷ ಆಪರೇಶನ್, 8 ಸಾವಿರ ಖರ್ಚು: ಜಗತ್ತಿನ ಅತೀ ಚಿಕ್ಕ ರೋಗಿ!

ದೆಹಲಿ ಮೂಲದ 52 ವರ್ಷದ ಮಹಿಳೆಯೊಬ್ಬರ ತೂಕ ಕೆಲ ತಿಂಗಳಿನಿಂದ ವಿಪರೀತ ಹೆಚ್ಚಿ 106 ಕೇಜಿಗೆ ತಲುಪಿತ್ತು. ಇದರಿಂದ ಅವರಿಗೆ ಉಸಿರಾಟದ ತೊಂದರೆ, ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ಕಾಣಿಸಿಕೊಂಡಿತ್ತು. ಪರಿಶೀಲನೆ ವೇಳೆ ಅಂಡಾಶಯದಲ್ಲಿ ದಿನನಿತ್ಯ ಬೆಳೆಯುವ ಭಾರೀ ಗಾತ್ರ ಗಡ್ಡೆ ಇರುವುದು ತಿಳಿದು ಬಂದಿತ್ತು.

ಆ.18 ರಂದು ವೈದ್ಯರ ತಂಡ ಬರೋಬ್ಬರಿ ಮೂರುವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ದೇಹ ತೂಕದ ಅರ್ಧದಷ್ಟುತೂಗುತ್ತಿದ್ದ ಯಶಸ್ವಿಯಾಗಿ ಗಡ್ಡೆಯನ್ನು ಹೊರತೆಗೆದಿದ್ದಾರೆ.