ಬೀಜಿಂಗ್(ಏ. 15)  ಈ ಆಪರೇಶನ್ ಕತೆ ಕೇಳಲೇಬೇಕು. ಚೀನಾದ ವೈದ್ಯರು ಈ ಆಪರೇಶನ್ ಮಾಡುವಾಗ ಬೆಚ್ಚಿ ಬಿದ್ದಿದ್ದರು.  ಮಹಿಳೆಯ ಶ್ವಾಸಕೋಶದಲ್ಲಿ ಸಿಲುಕೊಂಡಿದ್ದ ಕೋಳಿಯ ಎಲುಬಿನ ತುಂಡನ್ನು ಬರೋಬ್ಬರಿ 14 ವರ್ಷದ ನಂತರ ಹೊರತೆಗೆದಿದ್ದಾರೆ.

22 ವರ್ಷದ ಮಹಿಳೆ ಕೆಮ್ಮು ಮತ್ತು ಶ್ವಾಸಕೋಶದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆ ಎಂಟು ವರ್ಷದವಳಿದ್ದಾಗ ಆಕಸ್ಮಿಕವಾಗಿ ಎಲುಬಿನ ತುಂಡನ್ನು ಸೇವಿಸಿದ್ದಳು .  ಆದರೆ ಈ ವಿಚಾರ ಗೊತ್ತಿರಲಿಲ್ಲ. ಮಹಿಳೆ ಕೆಮ್ಮಿನ ಕಾರಣಕ್ಕೆ ಅನೇಕ ಮೆಡಿಕಲ್  ಪರೀಕ್ಷೆಗೆ ಒಳಗಾಗಿದ್ದರು. ವೈದ್ಯರಿಗೂ ಸಮಸ್ಯೆ ಮೂಲ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.

ಕೊರೋನಾ ಭೀತಿ ನಡುವೆ ಪತ್ತೆಯಾಯ್ತು ವಿಚಿತ್ರ ಜೀವಿ: ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ!...

ವೈದ್ಯರು ಇದಕ್ಕೆ ವಿವಿಧ ವ‍ಧ ನೀಡಿದ್ದರಿಂದ ಮಾತ್ರೆ ಸೇವಿಸಿ ಮಹಿಳೆಯ ಪರಿಸ್ಥಿತಿ ಬಿಗಡಾಯಿಸಿತ್ತು. ನಂತರ ಮಹಿಳೆ ಚೀನಾದ ಗಾನ್ಝವ್ ಆಸ್ಪತ್ರೆಗೆ ದಾಖಲಾಗಿ ಸ್ಕಾನ್ ಮಾಡಿಸಿದಾಗ ಬಲ ಶ್ವಾಸಕೋಶದಲ್ಲಿ ವಸ್ತುವೊಂದು ಪತ್ತೆಯಾಗಿದೆ. ಇದಾದ ಮೇಲೆ ಅರ್ಧಗಂಟೆಗಳ ಸರ್ಜರಿ ಮಾಡಲಾಗಿದೆ. ಇದು ಕೋಳಿ ಅಥವಾ ಬಾತುಕೋಳಿಯ ಎಲುಬಿನ ತುಂಡು ಎಂದು ಹೇಳಲಾಗಿದೆ. 

ಕೆಲ ದಿನಗಳ ಹಿಂದೆ ಇದೇ ಆಸ್ಪತ್ರೆ ವೈದ್ಯರು 26 ವರ್ಷದ ಪುರುಷನ ಹೊಟ್ಟೆಯಿಂದ ಚಾಕುವೊಂದನ್ನು ಹೊರಗೆ ತೆಗೆದಿದ್ದರು. ಆಕಸ್ಮಿಕವಾಗಿ ಗೊತ್ತಿಲ್ಲದೇ ಸೇವನೆ ಮಾಡಿದ್ದ ಎಲುಬಿನ ತುಂಡು ಮಹಿಳೆಯ ದೇಹದಲ್ಲಿ 14 ವರ್ಷಗಳ ಕಾಲ ಇತ್ತು