ಗೆಳೆಯರೊಂದಿಗೆ ಸೇರಿ ಪತ್ನಿಯ ಮೇಲೆ ಮದ್ಯವ್ಯಸನಿ ಪತಿ ಅತ್ಯಾಚಾರ: ವೀಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್

Latest Crime News: ಗೋರಖ್‌ಪುರದಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಮತ್ತು ಆತನ ಸ್ನೇಹಿತರು ಆರು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

Man rapes wife along with friends to fuel booze addiction makes videos to blackmail her in Gorakhpur mnj

ಉತ್ತರಪ್ರದೇಶ (ಜು. 08):  ಗೋರಖ್‌ಪುರದಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಪತಿಗೆ ಹಣ ನೀಡಿದ್ದ ಸ್ನೇಹಿತರೂ ಆತನ ಪತ್ನಿಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ.  ಸಂತ್ರಸ್ತ ಮಹಿಳೆ ಸುಮಾರು ಆರು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು, ಸಹಾಯಕ್ಕಾಗಿ ಪೊಲೀಸರ (Police) ಮೊರೆ ಹೋಗಿದ್ದಾಳೆ.  ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಅತ್ಯಾಚಾರವೆಸಗಿದ್ದು, ನಿರಂತರವಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಪತಿಯ ಸ್ನೇಹಿತರೂ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದು, ಈ ಕೃತ್ಯ ದುರುಳ ಪತಿ ಚಿತ್ರೀಕರಿಸಿದ್ದಾನೆ. 

ಭಾಸ್ಕರ್ ವರದಿಯ ಪ್ರಕಾರ, 2021 ರ ನವೆಂಬರ್‌ನಲ್ಲಿ ಆರೋಪಿಯನ್ನು ಮದುವೆಯಾಗಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ತಾನು ಆರ್ಥಿಕವಾಗಿ ಹಿಂದುಳಿದ (Economically Backward) ಕುಟುಂಬದಿಂದ ಬಂದವಳು ಮತ್ತು ಅವನಿಗೆ ಯಾವುದೇ ವರದಕ್ಷಿಣೆ (Dowry) ತರಲಿಲ್ಲ ಎಂದು ಪತಿ ಆಗಾಗ್ಗೆ ತನಗೆ ಹೊಡೆಯುತ್ತಿದ್ದ. ಇದಲ್ಲದೆ, ಅವನು ತನ್ನ ಉದ್ಯೋಗದ (Job) ಬಗ್ಗೆ ಸುಳ್ಳು ಹೇಳಿದ್ದು ಮದ್ಯವ್ಯಸನಿಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. 

ಆರೋಪಿ ಪತಿ ಆಗಾಗ ಕುಡಿದು ಮನೆಗೆ ಬರುತ್ತಿದ್ದು, ಮದುವೆಯಾದ ಕೆಲ ತಿಂಗಳ ಬಳಿಕ ತನ್ನ ಸ್ನೇಹಿತರನ್ನು (Friends) ಮನೆಗೆ ಕರೆದುಕೊಂಡು ಬರಲು ಆರಂಭಿಸಿದ್ದ. ನಂತರ ಅವನು ತನ್ನ ಸ್ನೇಹಿತರೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಲು ಒತ್ತಾಯಿಸಿದ್ದ, ಇದಕ್ಕೆ  ಬದಲಾಗಿ ಸ್ನೇಹಿತರಿಂದ ಮದ್ಯ ಮತ್ತು ಹಣವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ. ಆದರೆ ಪತ್ನಿ ನಿರಾಕರಿಸಿದಾಗ ಆಕೆಯನ್ನು ಥಳಿಸಿ ಅತ್ಯಾಚಾರವೆಸಗಿದ್ದಾನೆ.

ಇದನ್ನೂ ಓದಿ: ಪರಿಚಯವಾದ ಕೆಲವೇ ದಿನಗಳಲ್ಲಿ ಅವನು ರೂಮ್‌ಗೆ ಕರೆದಿದ್ದ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

ಕೆಲ ದಿನಗಳ ಬಳಿಕ ಪತಿ ನಿಯಮಿತವಾಗಿ ತನ್ನ ಸ್ನೇಹಿತರನ್ನು ಅವಳ ಮೇಲೆ ಅತ್ಯಾಚಾರವೆಸಗಲು ಕರೆದಿದ್ದು ಈ ಘೋರ ಕೃತ್ಯ ಆರು ತಿಂಗಳ ಕಾಲ ಮುಂದುವರೆದಿದೆ. ಈ ಚಿತ್ರಹಿಂಸೆಯಿಂದಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆದರೆ ಹೇಗಾದರೂ ಧೈರ್ಯ ತಂಡುಕೊಂಡು ಪೊಲೀಸರನ್ನು ಸಂಪರ್ಕಿಸಿದ್ದಾಳೆ ಎಂದು ವರದಿ ಹೇಳಿದೆ. 

ಆರೋಪಿಗಳು ಪರಾರಿಯಾಗಿದ್ದು, ಭಾರತೀಯ ದಂಡ ಸಂಹಿತೆಯ (IPC) ಪ್ರಕಾರ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಆಧಾರದ ಮೇಲೆ ಅವರನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ.

Latest Videos
Follow Us:
Download App:
  • android
  • ios