ಗಂಡಸರು ಗರ್ಭ ಧರಿಸಲು ಸಾಧ್ಯವೇ? ಎಂದು ಅಮೆರಿಕದ ಸಂಸದರಿಬ್ಬರು ಕೇಳಿದ ಪ್ರಶ್ನೆಗೆ ಭಾರತ ಮೂಲದ ಸ್ತ್ರೀರೋಗ ತಜ್ಞೆ ನಿಶಾ ವರ್ಮಾ, ಹೌದು ಅಥವಾ ಇಲ್ಲ ಎಂದು ನೇರ ಉತ್ತರ ನೀಡದೇ ಭಾರೀ ಟೀಕೆಗೆ ಗುರಿಯಾದ ಘಟನೆ ನಡೆದಿದೆ.
ವಾಷಿಂಗ್ಟನ್: ಗಂಡಸರು ಗರ್ಭ ಧರಿಸಲು ಸಾಧ್ಯವೇ? ಎಂದು ಅಮೆರಿಕದ ಸಂಸದರಿಬ್ಬರು ಕೇಳಿದ ಪ್ರಶ್ನೆಗೆ ಭಾರತ ಮೂಲದ ಸ್ತ್ರೀರೋಗ ತಜ್ಞೆ ನಿಶಾ ವರ್ಮಾ, ಹೌದು ಅಥವಾ ಇಲ್ಲ ಎಂದು ನೇರ ಉತ್ತರ ನೀಡದೇ ಭಾರೀ ಟೀಕೆಗೆ ಗುರಿಯಾದ ಘಟನೆ ನಡೆದಿದೆ.
ಸಂಸದೀಯ ಸಮಿತಿಯ ಮುಂದೆ ಡಾ. ನಿಶಾ ಹಾಜರಾಗಿದ್ದರು.
ಗರ್ಭಪಾತ ಮಾತ್ರೆ ಮೈಫೆಪ್ರಿಸ್ಟೋನ್‌ನ ಸುರಕ್ಷತೆ ಮತ್ತು ನಿಯಂತ್ರಣದ ಕುರಿತು ಡೆಮಾಕ್ರೆಟ್ ಪಕ್ಷದ ಸಾಕ್ಷಿಯಾಗಿ ಅಮೆರಿಕ ಸಂಸದೀಯ ಸಮಿತಿಯ ಮುಂದೆ ಡಾ. ನಿಶಾ ಹಾಜರಾಗಿದ್ದರು. ಈ ವೇಳೆ ಸಂಸದರಾದ ಆಶ್ಲೇ ಮೂಡಿ ಮತ್ತು ಜೋಶ್ ಹಾವ್ಲಿ, ಗಂಡಸರು ಗರ್ಭ ಧರಿಸಲು ಸಾಧ್ಯವೇ ಎಂದು ಕನಿಷ್ಠ 10 ಸಲ ಪ್ರಶ್ನಿಸಿದ್ದಾರೆ.
ಹೌದು ಅಥವಾ ಇಲ್ಲ ಎಂಬ ನೇರ ಉತ್ತರ ನೀಡದ ಡಾ.ನಿಶಾ
ಇದಕ್ಕೆ ಹೌದು ಅಥವಾ ಇಲ್ಲ ಎಂಬ ನೇರ ಉತ್ತರ ನೀಡದ ಡಾ.ನಿಶಾ, ‘ಈ ಪ್ರಶ್ನೆ, ಅಭಿಪ್ರಾಯ ಧ್ರುವೀಕರಿಸುವ ಉದ್ದೇಶ ಹೊಂದಿದೆ, ಈ ಪ್ರಶ್ನೆ ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಗೊತ್ತಿಲ್ಲ, ಈ ಪ್ರಶ್ನೆಯ ಉದ್ದೇಶವಾದರೂ ಏನು? ಇದಕ್ಕೆಲ್ಲಾ ವಿಜ್ಞಾನ ಮತ್ತು ಸಾಕ್ಷ್ಯಗಳು ವೈದ್ಯಕೀಯಕ್ಕೆ ಮಾರ್ಗದರ್ಶನ ನೀಡಬೇಕು. ಆದರೆ ಈ ರೀತಿಯ ಹೌದು ಅಥವಾ ಇಲ್ಲ ಎಂಬ ಪ್ರಶ್ನೆಗಳು ರಾಜಕೀಯ ಸಾಧನಗಳಾಗಿವೆ’ ಎಂದು ಚರ್ಚೆಯ ದಿಕ್ಕನ್ನೇ ಬದಲಿಸಲು ವರ್ಮಾ ಯತ್ನಿಸಿದ್ದಾರೆ.


