* ಬ್ರಿಟನ್‌ ಮೇಲೂ ಡೆಲ್ಟಾದಾಳಿ* ಸ್ಥಳೀಯ ರೂಪಾಂತರಿಗಿಂತ ಭಾರತದಲ್ಲಿ ಪತ್ತೆಯಾದ ವೈರಸ್‌ ಅಬ್ಬರವೇ ಹೆಚ್ಚು* ಡೆಲ್ಟಾವೈರಸ್‌ನಿಂದ ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆ ಅಧಿಕ

ಲಂಡನ್‌(ಜೂ.05): ಭಾರತದಲ್ಲಿ ಕೋಟ್ಯಂತರ ಜನರಿಗೆ ಆವರಿಸಿಕೊಂಡು, ಲಕ್ಷಾಂತರ ಜನರನ್ನು ಬಲಿಪಡೆದ ರೂಪಾಂತರಿ ಡೆಲ್ಟಾಕೊರೋನಾ ವೈರಸ್‌, ಇದೀಗ ಬ್ರಿಟನ್‌ನಲ್ಲೂ ತನ್ನ ಹಾವಳಿ ಎಬ್ಬಿಸಿದೆ.

"

ಬ್ರಿಟನ್‌ನಲ್ಲಿ ಕಳೆದ ದಿನಗಳಿಂದ, ಡೆಲ್ಟಾವೈರಸ್‌ನಿಂದ ಸೋಂಕಿಗೆ ತುತ್ತಾದವರ ಪ್ರಮಾಣ ಹೆಚ್ಚುತ್ತಿದೆ. ಜೊತೆಗೆ ಇದುವರೆಗೆ ಆಲ್ಪಾ (ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಿ ವೈರಸ್‌) ವೈರಸ್‌ ಅನ್ನು ವೇರಿಯಂಟ್‌ ಆಫ್‌ ಕನ್ಸರ್ನ್‌ (ಅಪಾಯದ ಪ್ರಮಾಣದ ಆಧರಿಸಿ ವೈರಸ್‌ ಅನ್ನು ವಿಂಗಡಿಸುವ ವಿಧಾನ) ಎಂದು ಪರಿಗಣಿಸಿದ್ದರೆ, ಇದೀಗ ಆ ಸ್ಥಾನವನ್ನು ಡೆಲ್ಟಾಆಕ್ರಮಿಸಿಕೊಂಡಿದೆ.

ಅಲ್ಲದೆ, ‘ಡೆಲ್ಟಾವೈರಸ್‌ನಿಂದ ಸೋಂಕಿಗೆ ತುತ್ತಾದವರು ಆಸ್ಪತ್ರೆಗೆ ದಾಖಲಾಗಬೇಕಾಗಿರುವ ಬರುವ ಸಾಧ್ಯತೆಯೂ ಅಧಿಕ ಎಂದು ಕಂಡುಬರುತ್ತಿದೆ. ಈ ವಿಷಯದಲ್ಲಿ ಇನ್ನಷ್ಟುಅಧ್ಯಯನದ ಅವಶ್ಯಕತೆ ಇದೆಯಾದರೂ, ನಾವು ಸೋಂಕಿನಿಂದ ರಕ್ಷಿಸಿಕೊಳ್ಳಲು ಹೆಚ್ಚಿನ ಮುಂಜಾಗ್ರತೆ ವಹಿಸಬೇಕಾಗಿದೆ’ ಎಂದು ಬ್ರಿಟನ್‌ನ ಆರೋಗ್ಯ ಇಲಾಖೆ ಎಚ್ಚರಿಸಿದೆ.

‘ಡೆಲ್ಟಾಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಒಂದು ವಾರದಲ್ಲಿ 5,472ರಿಂದ 12,431ಕ್ಕೆ ಏರಿಕೆಯಾಗಿದೆ’ ಎಂದು ಬ್ರಿಟನ್‌ ಆರೋಗ್ಯ ಇಲಾಖೆ ಹೇಳಿದೆ. ಇನ್ನು ಡೆಲ್ಟಾದಿಂದ ಗಂಭೀರ ಸೋಂಕಿತರಾದ 201 ಜನರು ಹಿಂದಿನ ವಾರ ಆಸ್ಪತ್ರೆಗೆ ದಾಖಲಾಗಿದ್ದರೆ ಈ ವಾರ ಅಂಥವರ ಪ್ರಮಾಣ 278ಕ್ಕೆ ಏರಿದೆ.

‘ಈ ಪೈಕಿ ಬಹುತೇಕ ಜನರು ಇನ್ನೂ ಲಸಿಕೆ ಪಡೆಯದವರು ಎಂಬುದು ಗಮನಾರ್ಹ ವಿಷಯ. ಎರಡು ಡೋಸ್‌ ಲಸಿಕೆ ಪಡೆದವರು, ಡೆಲ್ಟಾದಿಂದ ಬಚಾವ್‌ ಆಗುವ ಸಾಧ್ಯತೆ ಅಧಿಕ ಎಂದು ಈ ಹಿಂದಿನ ಅಧ್ಯಯನ ವರದಿಗಳು ಹೇಳಿವೆ. ಹೀಗಾಗಿ ಜನರು ಆದಷ್ಟುಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯಲು ಮುಂದೆ ಬರಬೇಕು’ ಎಂದು ಆರೋಗ್ಯ ಇಲಾಖೆ ಕರೆ ಕೊಟ್ಟಿದೆ.