Asianet Suvarna News Asianet Suvarna News

ಇದೀಗ ಯುರೋ​ಪ್‌​ನ​ಲ್ಲೂ ಡೆಲ್ಟಾ ವೈರಸ್‌ ಭೀತಿ!

* ಅಮೆ​ರಿಕ ಹಾಗೂ ಸಿಂಗಾ​ಪು​ರ​ದಲ್ಲಿ ಈಗಾಗಲೇ ತಲ್ಲಣ ಹುಟ್ಟಿಸಿರುವ ಡೆಲ್ಟಾ ವೈರಸ್

* ಇದೀಗ ಯುರೋ​ಪ್‌​ನ​ಲ್ಲೂ ಡೆಲ್ಟಾವೈರಸ್‌ ಭೀತಿ

* ಭಾರತದ ರೂಪಾಂತರಿ ವೈರಸ್‌ ಬಗ್ಗೆ ಡಬ್ಲ್ಯುಎಚ್‌ಒ ಎಚ್ಚರಿಕೆ

Delta variant is taking hold of Europe WHO pod
Author
Bangalore, First Published Jun 12, 2021, 10:55 AM IST

 

ನವ​ದೆ​ಹ​ಲಿ(ಜೂ.12): ಅಮೆ​ರಿಕ ಹಾಗೂ ಸಿಂಗಾ​ಪು​ರ​ದಲ್ಲಿ ಈಗಾಗಲೇ ತಲ್ಲಣ ಹುಟ್ಟಿಸಿರುವ ಭಾರತದ ಡೆಲ್ಟಾರೂಪಾಂತರಿ ತಳಿಯ ಕೊರೋನಾ ವೈರಸ್‌ ಇದೀಗ ಯುರೋಪ್‌ ದೇಶಗಳಲ್ಲೂ ವ್ಯಾಪಕವಾಗುವ ಭೀತಿ ಎದುರಾಗಿದೆ.

ಬ್ರಿಟನ್‌ ಸೇರಿ​ದಂತೆ ಹಲವು ದೇಶ​ಗ​ಳಲ್ಲಿ ಕೊರೋನಾ ಪ್ರಕ​ರ​ಣ​ಗಳ ಸಂಖ್ಯೆ ಇಳಿ​ಮುಖ ಆಗಿ​ರುವ ಹಿನ್ನೆ​ಲೆ​ಯಲ್ಲಿ ಲಾಕ್‌​ಡೌನ್‌ ನಿರ್ಬಂಧ​ಗ​ಳನ್ನು ತೆರ​ವು​ಗೊ​ಳಿ​ಸ​ಲಾ​ಗು​ತ್ತಿದೆ. ಇದ​ರಿಂದಾಗಿ ಡೆಲ್ಟಾವೈರಸ್‌ ಹಬ್ಬುವ ಆತಂಕ ಎದು​ರಾ​ಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚ​ರಿಕೆ ನೀಡಿ​ದೆ.

ಸುದ್ದಿ​ಗೋ​ಷ್ಠಿಯ ವೇಳೆ ಮಾತ​ನಾ​ಡಿದ ಡಬ್ಲ್ಯು ಎಚ್‌ಒದ ಯುರೋಪ್‌ ಪ್ರತಿ​ನಿಧಿ ಹನ್ಸ್‌ ಕ್ಲುಗೆ, ಕೆಲವು ಕೋವಿಡ್‌ ಲಸಿ​ಕೆ​ಯ ಪ್ರಭಾ​ವವನ್ನು ಕುಗ್ಗಿಸಿ ಡೆಲ್ಟಾವೈರಸ್‌ ಒಬ್ಬ​ರಿಂದ ಒಬ್ಬ​ರಿ​ಗೆ ಹರುಡು​ತ್ತಿ​ರುವ ಸೂಚ​ನೆ​ಗ​ಳು ಲಭಿ​ಸಿವೆ. 60 ವರ್ಷ ಮೇಲ್ಪ​ಟ್ಟ​ವರು ಹಾಗೂ ದುರ್ಬ​ಲ​ರ ಮೇಲೆ ಡೆಲ್ಟಾವೈರಸ್‌ ದಾಳಿ ನಡೆ​ಸುವ ಸಾಧ್ಯತೆ ಇದೆ ಎಂದು ಎಚ್ಚ​ರಿಕೆ ನೀಡಿ​ದ್ದಾ​ರೆ. ಇದೇ ವೇಳೆ ಇನ್ನಷ್ಟುದೇಶ​ಗ​ಳಲ್ಲಿ ಲಸಿಕೆ ಉತ್ಪಾ​ದನೆಗೆ ಆದ್ಯತೆ ನೀಡುವ ನಿಟ್ಟಿ​ನಿಂದ ಲಸಿ​ಕೆಯನ್ನು ಪೇಟೆಂಟ್‌​ನಿಂದ ಹೊರಗೆ ಇಡುವಂತೆ ಯುರೋಪ್‌ ಸಂಸತ್ತು ಯುರೋ​ಪಿನ ರಾಷ್ಟ್ರ​ಗ​ಳನ್ನು ಆಗ್ರ​ಹಿ​ಸಿ​ದೆ.

Follow Us:
Download App:
  • android
  • ios