ಪಾಕಿಸ್ತಾನದ ಶ್ರೀಮಂತ ಹಿಂದೂ ಫ್ಯಾಷನ್ ಡಿಸೈನರ್ ದೀಪಕ್ ಪೆರ್ವಾನಿ ಭಾರತ-ಪಾಕ್ ಉದ್ವಿಗ್ನತೆಯ ನಡುವೆ ಸುದ್ದಿಯಲ್ಲಿದ್ದಾರೆ. ೭೧ ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವ ಪೆರ್ವಾನಿ, ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿ, ಜಾಗತಿಕ ಮನ್ನಣೆ ಗಳಿಸಿದ್ದಾರೆ. ಭಾರತದಲ್ಲಿ ಜೀವನ ಉತ್ತಮ ಎಂಬ ಹೇಳಿಕೆ ವಿವಾದ ಸೃಷ್ಟಿಸಿತ್ತು.
ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇದಾಗಲೇ ಪಾಕಿಸ್ತಾನದ ವಿರುದ್ಧ ಭಾರತ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪಾಕಿಸ್ತಾನದ ಪ್ರಜೆಗಳನ್ನು ಗಡಿಪಾರು ಮಾಡುವ ಆದೇಶವೂ ಹೊರಟಾಗಿದ್ದು, ಡೆಡ್ಲೈನ್ ಕೂಡ ಮುಗಿದಿದೆ. ಈಗ ಇದರ ನಡುವೆಯೇ, ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂಗಳಲ್ಲಿ ಒಬ್ಬರು ಎನ್ನಿಸಿರುವ ಫ್ಯಾಷನ್ ಡಿಸೈನರ್ ಮತ್ತು ನಟ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ, ಪಾಕಿಸ್ತಾನದಲ್ಲಿ ಹಿಂದೂಗಳು ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದು, ಜನಸಂಖ್ಯೆಯ ಶೇ. 2.17 ರಷ್ಟಿದ್ದಾರೆ, 2023 ರ ಹೊತ್ತಿಗೆ 52 ಲಕ್ಷ ಹಿಂದೂಗಳು ಇದ್ದಾರೆ. ಅವರಲ್ಲಿ ಹೆಚ್ಚಿನವರು ಸಿಂಧ್‌ನಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಸುಮಾರು 49 ಲಕ್ಷ ಹಿಂದೂಗಳಿದ್ದಾರೆ.
ಇಂಥವರ ಪೈಕಿ ಹಿಂದೂ ಶ್ರೀಮಂತರ ಪಟ್ಟಿಯಲ್ಲಿ ಸೇರಿದ್ದಾರೆ ದೀಪಕ್ ಪೆರ್ವಾನಿ. ಇವರು, ಪಾಕಿಸ್ತಾನದಲ್ಲಿ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮತ್ತು ನಟ. 1974 ರಲ್ಲಿ ಮಿರ್ಪುರ್ ಖಾಸ್‌ನಲ್ಲಿ ಜನಿಸಿದ ದೀಪಕ್ ಪೆರ್ವಾನಿ 1996 ರಲ್ಲಿ ತಮ್ಮ ಫ್ಯಾಷನ್ ಲೇಬಲ್ ಡಿಪಿಯನ್ನು ಪ್ರಾರಂಭಿಸಿದರು, ವಧುವಿನ ಮತ್ತು ಔಪಚಾರಿಕ ಉಡುಗೆಗಳಲ್ಲಿ ಇವರು ಪರಿಣತಿ ಹೊಂದಿದ್ದಾರೆ. ಇವರ ಡಿಸೈನ್ಗಳಿಗೆ ವಿಶ್ವವ್ಯಾಪಿ ಮಾನ್ಯತೆ ಇದೆ. ಇದೇ ಕಾರಣಕ್ಕೆ, ಅವರಿಗೆ ಹಲವಾರು ವಿಶ್ವ ಮಾನ್ಯ ಪ್ರಶಸ್ತಿಗಳು ಅರಸಿ ಬಂದಿವೆ. 2014 ರ ಬಲ್ಗೇರಿಯನ್ ಫ್ಯಾಷನ್ ಪ್ರಶಸ್ತಿಗಳು, ಏಳು ಲಕ್ಸ್ ಸ್ಟೈಲ್ ಪ್ರಶಸ್ತಿಗಳು ಮತ್ತು ಅತಿದೊಡ್ಡ ಕುರ್ತಾವನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ಸೇರಿದಂತೆ ಜಾಗತಿಕ ಮನ್ನಣೆಯನ್ನು ಗಳಿಸಿದೆ. ಇವರು, ತಮ್ಮ ವೃತ್ತಿಜೀವನದುದ್ದಕ್ಕೂ, ಅವರು ಮರ್ಸಿಡಿಸ್-ಬೆನ್ಜ್, ಬೆನ್ಸನ್ & ಹೆಡ್ಜಸ್, ಮತ್ತು ಹ್ಯೂಗೋ ಬಾಸ್ ನಂತಹ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳೊಂದಿಗೆ ಸಹಕರಿಸಿದ್ದಾರೆ. ಮಾತ್ರವಲ್ಲದೇ, ಮೇರೆ ಪಾಸ್ ಪಾಸ್ (ಹಮ್ ಟಿವಿ) ಮತ್ತು ಕದೂರತ್ (2013 ರಲ್ಲಿ ಹಮ್ ಟಿವಿಯಲ್ಲಿ) ನಂತಹ ಹಲವಾರು ಪಾಕಿಸ್ತಾನಿ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ.
ಪಾಕ್ ವಿರುದ್ಧ ಪ್ರತಿಭಟನೆ ವೇಳೆ ಹೀಗೆ ದೇಶಪ್ರೇಮ ಮೆರೆದ್ರಾ ಕರ್ನಾಟಕದ ಮಹಿಳೆಯರು? ವಿಡಿಯೋ ನೋಡಿ!
ಪೆರ್ವಾನಿ ಜಾವೇದ್ ಅಖ್ತರ್ ಮತ್ತು ಶಬಾನಾ ಅಜ್ಮಿಯಂತಹ ಭಾರತೀಯ ಸೆಲೆಬ್ರಿಟಿಗಳನ್ನು ಸಹ ಅಲಂಕರಿಸಿದ್ದಾರೆ ಮತ್ತು ಚೀನಾ ಮತ್ತು ಮಲೇಷ್ಯಾಕ್ಕೆ ಪಾಕಿಸ್ತಾನದ ಸಾಂಸ್ಕೃತಿಕ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಇವರ ನಿವ್ವಳ ಲಾಭದ ಕುರಿತು ಹೇಳುವುದಾದರೆ, ಯಾವುದೇ ಅಧಿಕೃತ ಡೇಟಾ ಇಲ್ಲದಿದ್ದರೂ, 2022 ರ ಮಾಧ್ಯಮ ವರದಿಯ ಪ್ರಕಾರ ದೀಪಕ್ ಪೆರ್ವಾನಿ ಅವರ ನಿವ್ವಳ ಮೌಲ್ಯ ರೂ. 71 ಕೋಟಿ ಎಂದು ಅಂದಾಜಿಸಲಾಗಿದೆ, ಇದು ಅವರನ್ನು ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಅವರ ಸೋದರಸಂಬಂಧಿ, ವೃತ್ತಿಪರ ಸ್ನೂಕರ್ ಆಟಗಾರ ನವೀನ್ ಪೆರ್ವಾನಿ ಕೂಡ ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂಗಳಲ್ಲಿ ಒಬ್ಬರಾಗಿದ್ದು, ಸುಮಾರು 60 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಕೆಲ ತಿಂಗಳ ಹಿಂದೆ ದೀಪಕ್ ಪೆರ್ವಾನಿ ಅವರು ಭಾರತದ ಬಗ್ಗೆ ನೀಡಿರುವ ಹೇಳಿಕೆಯಿಂದ ಸುದ್ದಿಯಲ್ಲಿದ್ದರು. ಅವರ ಹೇಳಿಕೆ ಪಾಕಿಸ್ತಾನದ ಜೀವನದ ಗುಣಮಟ್ಟದ ಬಗ್ಗೆ ಆನ್‌ಲೈನ್ ಚರ್ಚೆಗೆ ಕಾರಣವಾಗಿತ್ತು. ಸಂದರ್ಶನವೊಂದರಲ್ಲಿ, ಪೆರ್ವಾನಿ ಅವರು ಪಾಕಿಸ್ತಾನಕ್ಕಿಂತ ಭಾರತದಲ್ಲಿ ಜೀವನ ಉತ್ತಮವಾಗಿದೆ ಎಂದು ಹೇಳಿದ್ದರು. ಮಹಿಳೆಯರು ಮುಕ್ತವಾಗಿ ನಡೆಯಬಹುದು, ಸೈಕಲ್ ಸವಾರಿ ಮಾಡಬಹುದು ಮತ್ತು ಮೋಟಾರ್ ಸೈಕಲ್‌ಗಳನ್ನು ಬಳಸಬಹುದು. ರಿಕ್ಷಾ ಎಳೆಯುವವರು ಅಲ್ಲಿದ್ದಾರೆ, ಅವರು ಉಬರ್ ಬಳಸುತ್ತಾರೆ ಮತ್ತು ಪಾನಿಪುರಿ ಮಾರಾಟಗಾರರು ಸಹ ಟ್ಯಾಬ್ಲೆಟ್‌ಗಳನ್ನು ಬಳಸುತ್ತಾರೆ. ಇದು ಹೆಚ್ಚು ಕ್ರಿಯಾತ್ಮಕವಾಗಿದೆ ಎಂದೆಲ್ಲಾ ಬಣ್ಣಿಸುವ ಮೂಲಕ, ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಇರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಪರೋಕ್ಷವಾಗಿ ಹೇಳಿದ್ದರು. ಈ ಮೂಲಕ ಪಾಕ್ನ ಕೆಂಗಣ್ಣಿಗೂ ಗುರಿಯಾಗಿದ್ದರು.
ಪಾಕಿಸ್ತಾನದ ಟಿವಿಯಲ್ಲೂ ಸಿದ್ದರಾಮಯ್ಯ ಫೇಮಸ್: ಸುದ್ದಿಯ ವಿಡಿಯೋ ವೈರಲ್- ನಿರೂಪಕಿ ಹೇಳಿದ್ದೇನು ಕೇಳಿ...


