ಚೀನಾ ಸಭ್ಯತೆ ಇಲ್ಲದ ಒರಟು ಕೋಂಡಗಿ; ಡ್ರ್ಯಾಗನ್ ರಾಷ್ಟ್ರದ ಮೇಲೆ ಹರಿಹಾಯ್ದ ಜೆಕ್ ಗಣರಾಜ್ಯ!
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಬಹುತೇಕ ರಾಷ್ಟ್ರಗಳು ಚೀನಾ ವಿರುದ್ಧ ತಿರುಗಿ ಬಿದ್ದಿದೆ. ಇದರಿಂದ ಕುಪಿತಗೊಂಡಿರುವ ಚೀನಾ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಭಾರತದ ಜೊತೆ ಗಡಿ ಬಿಕ್ಕಟ್ಟು ಆರಂಭಿಸಿರುವ ಚೀನಾ, ಇದೀಗ ಜೆಕ್ ಗಣರಾಜ್ಯದ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರಾಗ್ವೆ(ಸೆ.01): ಆರ್ಥಿಕವಾಗಿ ಮಿಂಚಿನ ಗತಿಯಲ್ಲಿ ಬೆಳೆಯುತ್ತಿರುವ ರಾಷ್ಟ್ರ, ಅತೀ ಹೆಚ್ಚು ಸೇನೆ ಹಾಗೂ ಶಸ್ತಾಸ್ತ್ರಗಳನ್ನು ಹೊಂದಿರುವ ರಾಷ್ಟ್ರ, ತಂತ್ರಜ್ಞಾನವನ್ನು ಸಮಪರ್ಕಾಗಿ ಬಳಸುತ್ತಿರುವ ದೇಶ..ಹೀಗೆ ಹಲವು ಕಾರಣಗಳಿಂದ ಚೀನಾ ಇತರ ದೇಶಗಳಿಗಿಂತ ಮುಂದಿದೆ. ಇದರ ಅಹಂ ತಲೆಗೆ ಹತ್ತಿಕೊಂಡಿದೆ. ಹೀಗಾಗಿ ಭಾರತ ಸೇರಿದಂತೆ ನೆರ ರಾಷ್ಟ್ರಗಳೊಂದಿಗೆ ಯುದ್ಧಕ್ಕೆ ನಿಂತಿರುವ ಚೀನಾ ಇದೀಗ ಜೆಕ್ ಗಣರಾಜ್ಯವನ್ನು ಕೆಣಕಿ, ಕೈ ಸುಟ್ಟುಕೊಂಡಿದೆ.
ಚೀನಾ ಅಪ್ರಚೋದಿತ ದಾಳಿ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ!
ಪೆರುಗ್ವೆಯಲ್ಲಿ ನಡೆದ ತೈವಾನ್ ರಾಷ್ಟ್ರೀಯ ಶಾಸಕಾಂಗದಲ್ಲಿ ಜೆಕ್ ಗಣರಾಜ್ಯದ ಅಧ್ಯಕ್ಷ ಮಿಲೊಸ್ ವೈಸ್ಟ್ರಿಸಿಲ್ ಭಾಷಣ ಮಾಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚೀನಾ ನಮ್ಮ ವಿಚಾರದಲ್ಲಿ ಮೂಗುತೂರಿಸಬೇಡಿ ಎಂದು ಎಚ್ಚರಿಕೆ ನೀಡಿತ್ತು. ತೈವಾನ್ ರಾಷ್ಟ್ರೀಯ ಶಾಸಕಾಂಗದಲ್ಲಿ ಮಾತನಾಡಿದ ಕಾರಣಕ್ಕೆ ಜೆಕ್ ಗಣರಾಜ್ಯವನ್ನು ಕೆಣಕಿದ ಚೀನಾಗೆ ತಕ್ಕ ತಿರುಗೇಟು ನೀಡಿದೆ. ಮರುಕ್ಷಣದಲ್ಲೇ ಜೆಕ್ ಗಣರಾಜ್ಯದ ಮೇಯರ್ ಪೊವೊಲ್ ನೊವೋಟ್ನಿ ಚೀನಾ ವಿದೇಶಾಂಗ ಸಚಿವರಿಗೆ ಕರೆ ಮಾಡಿ ತಕ್ಕ ಉತ್ತರ ನೀಡಿದ್ದಾರೆ.
ಚೀನಾ ಪಾಲ್ಗೊಳ್ಳುವ ರಷ್ಯಾದ ಸಮರಾಭ್ಯಾಸಕ್ಕೆ ಭಾರತ ಗೈರು!
ಚೀನಾ ವಿಚಾರದಲ್ಲಿ ತಲೆಹಾಕಿದರೆ ತಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಎಚ್ಚರಿಸಿತ್ತು. ಇದಕ್ಕೆ ಜೆಕ್ ಗಣರಾಜ್ಯ, ಚೀನಾ ವಿದೇಶಾಂಗ ಸಚಿವ ವಾಂಗ್ ಯಿಗೆ ಪತ್ರ ಬರೆದಿದ್ದಾರೆ. ಚೀನಾ ಎಲ್ಲೆ ಮೀರುತ್ತಿದೆ. ರಾಜತಾಂತ್ರಿಕ ವಿಚಾರದಲ್ಲಿ ಚೀನಾ ಮೂಗುತೂರಿಸುವ ಅಗತ್ಯವಿಲ್ಲ. ಚೀನಾ ಅಸಭ್ಯ, ಒರಟು ಕೋಡಂಗಿ ರೀತಿ ವರ್ತಿಸುತ್ತಿದೆ ಎಂದಿದ್ದಾರೆ. ಚೀನಾಗೆ ಸಂಬಂಧ ಪಡದ ವಿಚಾರದಲ್ಲಿ ಪ್ರಭುತ್ವ ಸಾಧಿಸಲು ಹೊರಟರೆ ನೀವು ಕೂಡ ಪರಿಣಾಮ ಎದಿರಸಬೇಕು ಎಂದಿದೆ.
ಜೆಕ್ ಗಣರಾಜ್ಯದ ಅಧ್ಯಕ್ಷ ಮಿಲೊಸ್ ತೈವಾನ್‌ಗೆ ಭೇಟಿ ನೀಡಿ ಇತಿಹಾಸ ನಿರ್ಮಿಸಿದ್ದಾರೆ. ಇನ್ನು ರಾಷ್ಟ್ರೀಯ ಶಾಸಂಕಾಂಗ ಸಭೆಯಲ್ಲಿ ಪಾಲ್ಗೊಂಡ ಮಿಲೊಸ್, ಭಾಷಣದ ಆರಂಭದಲ್ಲೇ ತೈವಾನಿಗಳ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಭಾಷಣದ ಅಂತ್ಯದಲ್ಲಿ ನಾನು ತೈವಾನೀಸ್ ಎಂದಿದ್ದಾರೆ.
ಈ ಭಾಷಣದ ಬೆನ್ನಲ್ಲೇ ತೈವಾನ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಚೀನಾ ಜೆಕ್ ಹಣರಾಜ್ಯದ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದೆ. ಈ ಕುರಿತು ಜೆಕ್ ಗಣರಾಜ್ಯ ಅಧ್ಯಕ್ಷ್ಯ ಮಿಲೊಸ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ತೈವಾನ್‌ಗೆ ಭೇಟಿ ನೀಡಿದ್ದೇನೆ. ತೈವಾನ್ ಈ ಕುರಿತು ಹೇಳಿಕೆ ನೀಡಿದರೆ ಗಮನಿಸುತ್ತೇನೆ. ಇತರ ರಾಷ್ಟ್ರ ತೈವಾನ ಕುರಿತು ಹೇಳಿಕೆ, ಆದೇಶವನ್ನ ನಾನು ಪರಿಗಣಿಸುವುದಿಲ್ಲ ಎಂದಿದ್ದಾರೆ.