ಬೆಂಗಳೂರು ಮೂಲದ ಫಿನ್‌ಟೆಕ್ ಸ್ಟಾರ್ಟ್‌ಅಪ್ ಅಡ್ವೈಸರ್ ಶ್ರೀರಾಮ್ ಕೃಷ್ಣನ್ ಈಗ ಟ್ರಂಪ್‌ಗೆ AI Advisor!
ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ಶ್ರೀರಾಮ್ ಕೃಷ್ಣನ್, ಡೊನಾಲ್ಡ್ ಟ್ರಂಪ್ ಅವರ ಅಡ್ವೈಸರಿ ಗ್ರೂಪ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಲ್ಲಿ ಸೀನಿಯರ್ ವೈಟ್ ಹೌಸ್ ಪಾಲಿಸಿ ಅಡ್ವೈಸರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಬೆಂಗಳೂರು (ಡಿ.23): ರಾಜಧಾನಿ ಮೂಲದ ಫಿನ್‌ಟೆಕ್ ಕಂಪನಿ ಕ್ರೆಡ್‌ಗೆ ಅಡ್ವೈಸರ್ ಆಗಿದ್ದ ಭಾರತೀಯ ಮೂಲದ ಅಮೆರಿಕನ್ ಉದ್ಯಮಿ, ಹೂಡಿಕೆದಾರ ಹಾಗೂ ಲೇಖಕ ಚೆನ್ನೈನ ಟೆಕ್ಕಿ ಶ್ರೀರಾಮ್ ಕೃಷ್ಣನ್, ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಡ್ವೈಸರಿ ಗ್ರೂಪ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಲ್ಲಿ ಸೀನಿಯರ್ ವೈಟ್ ಹೌಸ್ ಪಾಲಿಸಿ ಅಡ್ವೈಸರ್ ಆಗಿ ಕೆಲಸ ಮಾಡಲಿದ್ದಾರೆ. ಶ್ರೀರಾಮ್ ಕೃಷ್ಣನ್ ಅವರೊಂದಿಗೆ ಇತರ ಕೆಲವರನ್ನು ನೇಮಕ ಮಾಡುವ ಘೋಷಣೆಯ ವೇಳೆ ಟ್ರಂಪ್, 'ಶ್ರೀರಾಮ ಕೃಷ್ಣನ್ ಅವರು ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ' ಎಂದು ತಿಳಿಸಿದ್ದಾರೆ. ಕೃಷ್ಣನ್ ಅವರ ಪಾತ್ರವನ್ನು ವಿವರಿಸಿದ ಟ್ರಂಪ್, “AI ನಲ್ಲಿ ಅಮೆರಿಕದ ನಾಯಕತ್ವವನ್ನು ಕಾಪಾಡಿಕೊಳ್ಳಲು ಶ್ರೀರಾಮ್ ಡೇವಿಡ್ ಸ್ಯಾಕ್ಸ್ ಅವರೊಂದಿಗೆ ನಿಕಟವಾಗಿ ಸಹಕರಿಸುತ್ತಾರೆ' ಎಂದು ಮಾಹಿತಿ ನೀಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾದ ಅಧ್ಯಕ್ಷರ ಕೌನ್ಸಿಲ್ ಆಫ್ ಅಡ್ವೈಸರ್ಸ್ ಜೊತೆಗೆ ಕೆಲಸ ಮಾಡುವ ಸರ್ಕಾರಿ ಏಜೆನ್ಸಿಗಳಾದ್ಯಂತ AI ನೀತಿಯನ್ನು ರೂಪಿಸುವಲ್ಲಿ ಮತ್ತು ಸಂಯೋಜಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುವ ಮೂಲಕ ಶ್ರೀರಾಮ್ ಕೃಷ್ಣನ್ ಅವರ ವೃತ್ತಿಜೀವನ ಆರಂಭವಾಗಿತ್ತು. ಅಲ್ಲಿ ಅವರು ವಿಂಡೋಸ್ ಅಜೂರ್‌ಅನ್ನು ನಿರ್ಮಿಸಲು ದೊಡ್ಡ ಮಟ್ಟದ ಕೊಡುಗೆ ನೀಡಿದ್ದರು.
ಯಾರಿವರು ಶ್ರೀರಾಮ್ ಕೃಷ್ಣನ್: ಶ್ರೀರಾಮ ಕೃಷ್ಣನ್ ಅವರು ಮೈಕ್ರೋಸಾಫ್ಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ತಮಿಳುನಾಡಿನ ಎಸ್‌ಆರ್‌ಎಂ ವಲ್ಲಿಯಮ್ಮೈ ಎಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದಿದ್ದರು. ಅಲ್ಲಿ ಅವರು ವಿಂಡೋಸ್ ಅಜೂರ್‌ಗಾಗಿ API ಗಳು ಮತ್ತು ಸರ್ವೀಸ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ನಂತರ ಓ'ರೈಲಿ ಪ್ರಕಟಿಸಿದ್ದ, ಪ್ರೋಗ್ರಾಮಿಂಗ್ ವಿಂಡೋಸ್ ಅಜುರ್ ಎಂಬ ಪುಸ್ತಕದ ಲೇಖಕರಾಗಿದ್ದರು.
ಎಲನ್ ಮಸ್ಕ್ ಮಾಲೀಕತ್ವದ ಟ್ವಿಟರ್‌ಗೆ ಭಾರತೀಯ ಮೂಲದ ಟೆಕ್ಕಿ ಶ್ರೀರಾಮ ಕೃಷ್ಣನ್ ನೆರವು!
2013ರಲ್ಲಿ ಫೇಸ್‌ಬುಕ್‌ಗೆ ಸೇರದ ಅವರು, ಫೇಸ್‌ಬುಕ್ ಮೊಬೈಲ್ ಅಪ್ಲಿಕೇಶನ್ ಜಾಹೀರಾತು ವೇದಿಕೆಯನ್ನು ನಿರ್ಮಾಣ ಹಾಗೂ ವಿಸ್ತರಣೆ ಮಾಡುವುದರಲ್ಲಿ ಪ್ರಮುಖರಾಗಿದ್ದರು. ಆ ಬಳಿಕ ಅವರು ಸ್ನ್ಯಾಪ್‌ನಲ್ಲಿ ಮತ್ತು ನಂತರ ಟ್ವಿಟರ್‌ನಲ್ಲಿ (ಈಗ ಎಕ್ಸ್) 2019 ರವರೆಗೆ ಕೆಲಸ ಮಾಡಿದರು. ಎಕ್ಸ್‌ಅನ್ನು ಪುನರ್‌ರಚಿಸಲು ಎಲೋನ್ ಮಸ್ಕ್ ಅವರೊಂದಿಗೆ ಆಪ್ತವಾಗಿ ಕೆಲಸ ಮಾಡಿದ್ದರು. 2021 ರ ಹೊತ್ತಿಗೆ, ಕೃಷ್ಣನ್, ಆಂಡ್ರೆಸೆನ್ ಹೊರೊವಿಟ್ಜ್ (a16z) ನಲ್ಲಿ ಸಾಮಾನ್ಯ ಪಾಲುದಾರರಾದರು ಮತ್ತು 2023 ರಲ್ಲಿ ಅವರು ಲಂಡನ್‌ನಲ್ಲಿ ಸಂಸ್ಥೆಯ ಮೊದಲ ಅಂತರರಾಷ್ಟ್ರೀಯ ಕಚೇರಿಯನ್ನು ಮುನ್ನಡೆಸಿದರು. ಕೃಷ್ಣನ್ ಅವರು ಭಾರತೀಯ ಫಿನ್‌ಟೆಕ್ ಕಂಪನಿಯಾದ ಕ್ರೆಡ್‌ಗೆ ಸಲಹೆ ನೀಡುತ್ತಾರೆ ಮತ್ತು ಅವರ ಪತ್ನಿ ಆರತಿ ರಾಮಮೂರ್ತಿ ಅವರೊಂದಿಗೆ ಅವರು ನಡೆಸುತ್ತಿರುವ ಜನಪ್ರಿಯ ಪಾಡ್‌ಕಾಸ್ಟ್ ದಿ ಆರತಿ ಮತ್ತು ಶ್ರೀರಾಮ್ ಶೋ ಅನ್ನು ಸಹ-ಹೋಸ್ಟ್ ಮಾಡುತ್ತಾರೆ.
ಭಾರತ ಮೂಲದ ಅಮೆರಿಕನ್ ಕೋಟ್ಯಾಧಿಪತಿ: ಇವರು ಗೂಗಲ್‌ನಲ್ಲಿ ಹೂಡಿಕೆ ಮಾಡಿದ್ದ ಮೊದಲ ಭಾರತೀಯ