Asianet Suvarna News Asianet Suvarna News

Covid Spike: ಅಮೆರಿಕದಲ್ಲಿ ಒಂದೇ ದಿನ ದಾಖಲೆಯ 5 ಲಕ್ಷ ಕೇಸ್

  • ಅಮೆರಿಕದಲ್ಲಿ ಒಂದೇ ದಿನ ಕೋವಿಡ್‌ ಕೇಸ್‌ ದಾಖಲೆಯ 5 ಲಕ್ಷ ಸಮೀಪಕ್ಕೆ!
  • ಬುಧವಾರ 4.88 ಲಕ್ಷ ಪ್ರಕರಣ ದಾಖಲು
  •  15 ರಾಜ್ಯಗಳು, ಪ್ರಾಂತ್ಯಗಳಲ್ಲಿ ಕೋವಿಡ್‌ ಜಿಗಿತ
Covid 19 Spreading Faster Than Ever 5 Lakh Cases In USA In 24 Hours dpl
Author
Bangalore, First Published Dec 31, 2021, 2:00 AM IST
  • Facebook
  • Twitter
  • Whatsapp

ನ್ಯೂಯಾರ್ಕ್(ಡಿ.31): ಕಳೆದೊಂದು ವಾರದಲ್ಲಿ ಸರಾಸರಿ 2.65 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗುತ್ತಿರುವ ಅಮೆರಿಕದಲ್ಲಿ ಬುಧವಾರ ಕೊರೋನಾ ವೈರಸ್‌ನ ಮಹಾ ಸ್ಫೋಟ ಸಂಭವಿಸಿದೆ. ಅತೀ ವೇಗವಾಗಿ ವ್ಯಾಪಿಸುವ ಕೊರೋನಾ ಹೊಸ ರೂಪಾಂತರಿ ಡೆಲ್ಟಾಮತ್ತು ಒಮಿಕ್ರೋನ್‌ ಪರಿಣಾಮ ಬುಧವಾರ ಒಂದೇ ದಿನ ಅಮೆರಿಕದಲ್ಲಿ ಈವರೆಗಿನ ದಾಖಲೆಯ 4.88 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗಿವೆ. ಮಂಗಳವಾರವಷ್ಟೇ 2.67 ಲಕ್ಷ ಕೇಸ್‌ನಿಂದ ಒಂದೇ ದಿನಕ್ಕೆ ದೈನಂದಿನ ಕೋವಿಡ್‌ ಪ್ರಕರಣಗಳು 5 ಲಕ್ಷದ ಸಮೀಪಕ್ಕೆ ಜಿಗಿದಿದೆ. ಕಳೆದೊಂದು ವಾರದಲ್ಲಿ ದೇಶಾದ್ಯಂತ 20 ಲಕ್ಷಕ್ಕಿಂತ ಹೆಚ್ಚು ಕೇಸ್‌ಗಳು ದಾಖಲಾಗುತ್ತಿದ್ದು, ಈ ಪೈಕಿ 15 ರಾಜ್ಯಗಳು ಮತ್ತು ಪ್ರಾಂತ್ಯಗಳು ಈ ಹಿಂದಿನ ವಾರದಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಆದಾಗ್ಯೂ, ಸೋಂಕಿಗೆ ತುತ್ತಾದವರಲ್ಲಿ ವೈರಸ್‌ ತೀವ್ರತೆ ಈ ಹಿಂದಿನಂತಿಲ್ಲ. ಜತೆಗೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವು ಶೇ.11ರಷ್ಟುಮಾತ್ರ ಹೆಚ್ಚಿದೆ. ಅಲ್ಲದೆ ಕಳೆದ 2 ವಾರಗಳಲ್ಲಿ ಕೋವಿಡ್‌ಗೆ ಬಲಿಯಾಗುವವರ ಪ್ರಮಾಣವೂ ಸ್ವಲ್ಪ ಸರಿಹಾದಿಗೆ ಬಂದಿದೆ ಎನ್ನಲಾಗಿದೆ.

ವಿಶ್ವಾದ್ಯಂತ ದಾಖಲೆಯ ಏರಿಕೆ:

ಪಂಚಾದ್ಯಂತ ಕೊರೋನಾ ವೈರಸ್‌ ಮಹಾ ಸ್ಫೋಟ ಉಂಟಾಗಿದೆ. ಸೋಮವಾರ ಒಂದೇ ದಿನ ವಿಶ್ವಾದ್ಯಂತ ದಾಖಲೆಯ 14.4 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. 2019ರಲ್ಲಿ ಮೊದಲ ಬಾರಿ ಕೋವಿಡ್‌ ಕೇಸು ಪತ್ತೆಯಾದ ಬಳಿಕ ಯಾವುದೇ ಒಂದು ದಿನದಲ್ಲಿ ಇಷ್ಟುಕೇಸು ಪತ್ತೆಯಾಗಿದ್ದು ಇದೇ ಮೊದಲು. ಇಷ್ಟೊಂದು ಪ್ರಮಾಣದಲ್ಲಿ ಕೇಸುಗಳು ಏರಲು ಕೋವಿಡ್‌ ಹೊಸ ತಳಿ ಒಮಿಕ್ರೋನ್‌ ಕಾರಣ ಎಂದು ಹೇಳಲಾಗಿದೆ. ತೀವ್ರತೆ ಕಡಿಮೆ ಇದ್ದರೂ ಅತ್ಯಂತ ಸಾಂಕ್ರಾಮಿಕ ಎಂಬ ಕುಖ್ಯಾತಿ ಹೊಂದಿರುವ ಒಮಿಕ್ರೋನ್‌ ರೂಪಾಂತರಿ ಕೋವಿಡ್‌ ವೈರಸ್‌, ಜಾಗತಿಕ ಮಟ್ಟದಲ್ಲಿ ತನ್ನ ಹಾವಳಿಯನ್ನು ಸಾಬೀತುಪಡಿಸಿದೆ.

ಪತ್ತೆಯಾದ ಎಲ್ಲಾ ಪ್ರಕರಣಗಳು ಒಮಿಕ್ರೋನ್‌ ಎಂದು ದೃಢಪಟ್ಟಿಲ್ಲವಾದರೂ, ಸೋಂಕಿನ ಪ್ರಮಾಣ ಏರಿಕೆಗೆ ಒಮಿಕ್ರೋನ್‌ ಕಾರಣ ಎಂಬುದನ್ನು ಅಂಕಿ ಅಂಶಗಳು ಸಾಬೀತುಪಡಿಸಿವೆ. ಕಳೆದ 1 ವಾರದಲ್ಲಿ ನಿತ್ಯ ಸರಾಸರಿ 8.41 ಲಕ್ಷ ಪ್ರಕರಣಗಳು ವರದಿಯಾಗಿವೆ. ನ.24ರಂದು ಆಫ್ರಿಕಾದಲ್ಲಿ ಮೊದಲ ಒಮಿಕ್ರೋನ್‌ ಪತ್ತೆಯಾದ ವಾರಕ್ಕೆ ಹೋಲಿಸಿದರೆ, ಸರಾಸರಿ ವಾರದ ಕೋವಿಡ್‌ ಪ್ರಮಾಣದಲ್ಲಿ ಶೇ.49ರಷ್ಟುಏರಿಕೆಯಾದಂತಾಗಿದೆ.

ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ದೇಶಗಳಲ್ಲಿ ಅಮೆರಿಕ ಅಗ್ರಸ್ಥಾನಿಯಾಗಿದ್ದು ನಿತ್ಯ ಸರಾಸರಿ 1.76 ಲಕ್ಷ ಪ್ರಕರಣ ದಾಖಲಾಗತೊಡಗಿವೆ. ಸೋಮವಾರ 2.28 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದು ಈ ವರ್ಷದ ಜ.8ರ ನಂತರದ ಗರಿಷ್ಠವಾಗಿದೆ. ನಂತರದ ಸ್ಥಾನದಲ್ಲಿರುವ ಬ್ರಿಟನ್‌ನಲ್ಲಿ ನಿತ್ಯ ಸುಮಾರು 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಫ್ರಾನ್ಸ್‌ನಲ್ಲೂ 2 ದಿನದ ಹಿಂದೆ 1 ಲಕ್ಷ ಪ್ರಕರಣ ದಾಖಲಾಗಿದ್ದವು. ಆಸ್ಪ್ರೇಲಿಯಾ, ಥಾಯ್ಲೆಂಡ್‌ನಲ್ಲೂ ಒಮಿಕ್ರೋನ್‌ ಕಾರಣದಿಂದ ಕೋವಿಡ್‌ ಹೆಚ್ಚುತ್ತಿದೆ. ಒಮಿಕ್ರೋನ್‌ ಹೆಚ್ಚಳ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ 11500ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದೆ.

ಆದರೆ ಸಮಾಧಾನದ ವಿಷಯವೆಂದರೆ ಡೆಲ್ಟಾಗಿಂತ ಒಮಿಕ್ರೋನ್‌ 3 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ಹೆಚ್ಚು ಪ್ರಾಣಾಂತಿಕವಲ್ಲ ಹಾಗೂ ತೀವ್ರತರದ ಸೋಂಕು ಉಂಟು ಮಾಡಲ್ಲ ಎಂಬುದು ಈವರೆಗಿನ ಅಧ್ಯಯನದಲ್ಲಿ ತಿಳಿದುಬಂದಿದೆ.

ರಾಜ್ಯದಲ್ಲಿ ಹೆಚ್ಚಿದ ಕೊರೋನಾ:

ಕರ್ನಾಟಕದಲ್ಲಿ ಕೊರೋನಾ ವೈರಸ್(Coroanvirus) ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

ಇಷ್ಟು ದಿನ ಪ್ರತಿದಿನ 300 ಅಸುಪಾಸಿನಲ್ಲಿ ಕೊರೋನಾ ಕೇಸ್ ಪತ್ತೆಯಾಗುತ್ತಿದ್ದವು, ಆದ್ರೆ, ಇಂದು (ಡಿ.30)  ಬರೋಬ್ಬರಿ 707 ಹೊಸ ಕೋವಿಡ್ ಪ್ರಕರಣಗಳು ದೃಢಟ್ಟಿವೆ.ಇದರಿಂದ ಒಮಿಕ್ರಾನ್ ಮಧ್ಯೆ ಕೊರೋನಾ ಆತಂಕವೂ ಸಹ ಹೆಚ್ಚಾಗಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 3006505ಗೆ ಏರಿಕೆಯಾಗಿದ್ರೆ, ಸಾವನ್ನಪ್ಪಿದವರ ಸಂಖ್ಯೆ 38327ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗುರುವಾರ 252 ಜನರು ಸೇರಿದಂತೆ ಇದುವರೆಗೆ 2959926 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ 8223 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ಪಾಸಿಟಿವಿಟಿ ದರ 0.61% ರಷ್ಟಿದ್ರೆ, ಸಾವಿನ ಪ್ರಮಾಣ ಸರಾಸರಿ ಶೇ 0.42 ಇದೆ.

Follow Us:
Download App:
  • android
  • ios