Asianet Suvarna News Asianet Suvarna News

ವೈರಸ್‌ ಮೂಲ ಪತ್ತೆಗೆ ಚೀನಾದ ಅಡ್ಡಿ: ಬೈಡೆನ್‌ ಕಿಡಿ

* ವೈರಸ್‌ ಮೂಲ ಚೀನಾ ಎಂಬ ಬಗ್ಗೆ ಮೂಡದ ಒಮ್ಮ​ತ

* ವೈರಸ್‌ ಮೂಲ ಪತ್ತೆಗೆ ಚೀನಾದ ಅಡ್ಡಿ: ಬೈಡೆನ್‌ ಕಿಡಿ

Covid 19 China still withholding information about origin of virus says Joe Biden pod
Author
Bangalore, First Published Aug 29, 2021, 9:15 AM IST

ವಾಷಿಂಗ್ಟನ್‌(ಆ.29): ಕೋವಿಡ್‌ ಮೂಲ ಪತ್ತೆ ಹಚ್ಚಲು ಅಮೆರಿಕ ನೇಮಿಸಿದ್ದ 4 ತನಿಖಾ ಸಂಸ್ಥೆಗಳು ಚೀನಾದಿಂದಲೇ ಹಬ್ಬಿದೆ ಎಂಬ ಬಗ್ಗೆ ಖಚಿತವಾಗಿ ಹೇಳಲು ವಿಫಲವಾಗಿವೆ. ಶ್ವೇತ​ಭ​ವ​ನಕ್ಕೆ ಸಮಿ​ತಿ​ಗಳು ವರದಿ ಸಲ್ಲಿ​ಸಿದ್ದು, ಈ ವೈರಸ್‌ ಚೀನಾದ ಪ್ರಯೋಗಾಲಯದಿಂದ ಸೋರಿಕೆಯಾಗಿದೆಯೇ ಅಥವಾ ನೈಸರ್ಗಿಕವಾಗಿ ಹುಟ್ಟಿಹರಡಿದೆಯೇ ಎಂಬ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಒಂದೊಂದು ಸಮಿ​ತಿ​ಗಳು ಒಂದೊಂದು ವರದಿ ನೀಡಿ​ವೆ.

ಆ​ದರೆ, ಇದಕ್ಕೆ ಅಮೆ​ರಿಕ ಅಧ್ಯಕ್ಷ ಜೋ ಬೈಡೆನ್‌ ತೀವ್ರ​ವಾಗಿ ಕಿಡಿ​ಕಾ​ರಿ​ದ್ದಾರೆ. ‘ಚೀನಾದ ಅಸಹಕಾರದಿಂದಲೇ ಹೀಗಾಗಿದ್ದು, ಜಗತ್ತಿಗೆ ಉತ್ತರ ಸಿಗುವವರೆಗೆ ತಾವು ವಿರಮಿಸುವುದಿಲ್ಲ’ ಎಂದು ಗುಡು​ಗಿ​ದ್ದಾ​ರೆ.

‘ಜಗತ್ತಿಗೆ ಉತ್ತರ ಬೇಕು. ಅದು ಸಿಗುವವರೆಗೆ ನಾನು ವಿರಮಿಸುವುದಿಲ್ಲ. ಜವಾಬ್ದಾರಿಯುತ ದೇಶಗಳು ಇಂತಹ ಜವಾಬ್ದಾರಿಗಳಿಂದ ನುಣುಚಿಕೊಳ್ಳಬಾರದು. ವೈಜ್ಞಾನಿಕ ಶಿಷ್ಟಾಚಾರ ಮತ್ತು ಗುಣಮಟ್ಟವನ್ನು ಚೀನಾ ಪಾಲಿ​ಸ​ಬೇಕು. ಈ ಮೂಲಕ ಮಾಹಿತಿಯನ್ನು ಸರಿಯಾಗಿ ಹಂಚಿಕೊಳ್ಳುವಂತೆ ಚೀನಾ ಮೇಲೆ ಒತ್ತಡ ಹೇರುವುದನ್ನು ಮುಂದುವರೆಸುತ್ತೇವೆ. ಮಾಹಿತಿ ಬಚ್ಚಿ​ಡು​ವಿಕೆ ಒಪ್ಪ​ಲ್ಲ’ ಎಂದಿ​ದ್ದಾ​ರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ, ‘ಅಮೆರಿಕಕ್ಕೆ ಅದಕ್ಕೆ ಬೇಕಾದ ಉತ್ತರ ಸಿಕ್ಕಿಲ್ಲ. ಎಷ್ಟೇ ಪ್ರಯತ್ನಿಸಿದರೂ ಅದು ಸಿಗುವುದಿಲ್ಲ. ಏಕೆಂದರೆ ರಾಜಕೀಯವಾಗಿ ನಮ್ಮನ್ನು ಸಿಲುಕಿಸಲು ಅಮೆರಿಕ ಯತ್ನಿಸುತ್ತಿದೆಯೇ ಹೊರತು ಆ ದೇಶಕ್ಕೆ ವೈಜ್ಞಾನಿಕ ಉತ್ತರವೇ ಬೇಕಿಲ್ಲ. ಇಷ್ಟಕ್ಕೂ ಅಮೆರಿಕ ಈಗ ನಡೆಸಿರುವ ತನಿಖೆ ಕೂಡ ವೈಜ್ಞಾನಿಕವಾಗಿರಲಿಲ್ಲ. ನಾವು ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎಂಬ ಅಮೆರಿಕದ ಹೇಳಿಕೆ ನಮ್ಮ ಮೇಲೆ ಗೂಬೆ ಕೂರಿಸಲು ನೀಡಿದ ಹೇಳಿಕೆಯಷ್ಟೆ’ ಎಂದು ಹೇಳಿದೆ.

Follow Us:
Download App:
  • android
  • ios