* ಸೋಂಕು ನಿಯಂತ್ರಣಕ್ಕೆ ಲಸಿಕೆ ಜತೆ ಮಾಸ್ಕ್ ಧರಿಸಲೇಬೇಕು* ಗಾಳಿಯಲ್ಲಿ ಡೆಲ್ಟಾ, ಆಲ್ಫಾ ತಳಿ ವೈರಾಣುವಿನ ತೀವ್ರತೆ ಹೆಚ್ಚು
ವಾಷಿಂಗ್ಟನ್(ಸೆ.21): ಕೊರೋನಾ ವೈರಸ್‌ನ ನೂತನ ತಳಿಗಳು ಗಾಳಿಯಲ್ಲಿ ವೇಗವಾಗಿ ಸಂಚರಿಸುತ್ತವೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕಾಗಿ ಜನ ಸಾಮಾನ್ಯರು ಲಸಿಕೆ ಹಾಕಿಸಿಕೊಳ್ಳುವುದರ ಜತೆಗೆ ಬಿಗಿಯಾದ ಮುಖಗವಸುಗಳನ್ನು ಧರಿಸಬೇಕು ಎಂದು ನೂತನ ಅಧ್ಯಯನವೊಂದು ತಿಳಿಹೇಳಿದೆ.
ಅಮೆರಿಕದ ಮೇರಿಲ್ಯಾಂಡ್ ವಿವಿಯ ಸಂಶೋಧಕರ ಅಧ್ಯಯನ ವರದಿಯು ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸಸ್ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಈ ಪ್ರಕಾರ ಕೊರೋನಾ ವೈರಸ್‌ನ ಆಲ್ಫಾ ಪ್ರಭೇದವು ಗಾಳಿಯಲ್ಲಿ ಮೂಲ ಕೊರೋನಾ ವೈರಸ್‌ಗಿಂತಲೂ 43ರಿಂದ 100 ಪಟುವಿನಷ್ಟುವೇಗವಾಗಿ ಹರಡುತ್ತದೆ. ಅಂದರೆ ಆಲ್ಫಾ ವೈರಸ್‌ಗೆ ತುತ್ತಾದ ವ್ಯಕ್ತಿ ಸೀನಿದರೆ ಅಥವಾ ಕೆಮ್ಮಿದರೆ, ಮೂಲ ವೈರಸ್‌ಗೆ ತುತ್ತಾದ ವ್ಯಕ್ತಿಯಿಂದ ಹಬ್ಬುವ ವೈರಸ್‌ಗಿಂತಲೂ 43ರಿಂದ 100 ಪಟ್ಟು ಹೆಚ್ಚು ಎಂದು ವಿವರಿಸಲಾಗಿದೆ.
ಅಲ್ಲದೆ ಡೆಲ್ಟಾತಳಿಯು ಆಲ್ಫಾ ತಳಿಗಿಂತಲೂ ಹೆಚ್ಚು ತೀವ್ರವಾಗಿ ವ್ಯಾಪಿಸುತ್ತದೆ. ಇದು ಕೊರೋನಾ ವೈರಸ್‌ನ ತಳಿಗಳು ವಾತಾವರಣದ ಗಾಳಿಯ ಮುಖಾಂತರ(ಏರ್‌ಬೋರ್ನ್) ವ್ಯಾಪಿಸುತ್ತಿರುವುದರ ಸಂಕೇತವಾಗಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಎಲ್ಲರಿಗೂ ಉತ್ತಮ ಗಾಳಿ-ಬೆಳಕಿನ ವ್ಯವಸ್ಥೆ ಮಾಡಬೇಕು. ಎಲ್ಲರಿಗೂ ಲಸಿಕೆ ವಿತರಿಸುವ ಜೊತೆಗೆ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚುವಂಥ ಮಾಸ್ಕ್‌ಗಳನ್ನು ಧರಿಸಬೇಕು ಮೇರಿಲ್ಯಾಂಡ್ ವಿವಿಯ ಪ್ರೊ. ಡಾನ್ ಮಿಲ್ಟನ್ ಹೇಳಿದ್ದಾರೆ.
