ಕೋವ್ಯಾಕ್ಸಿನ್, ಕೋವಿಶೀಲ್ಡ್ ಇವೆರಡರ ನಡುವಿನ ವ್ಯತ್ಯಾಸ, ಅಡ್ಡ ಪರಿಣಾಮ, ವಿಶೇಷತೆ!

First Published May 3, 2021, 2:33 PM IST

ದೇಶದಲ್ಲಿ ಹದಿನೆಂಟು ವರ್ಷಕ್ಕೂ ಮೇಲಿನವರಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ. ಹೀಗಿರುವಾಗ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಡೋಸ್ ನೀಡಲಾಗುತ್ತಿದೆ. ಇವೆರಡನ್ನು ಕೈಗಳಿಗೆ ಇಂಜೆಕ್ಟ್ ಮಾಡಲಾಗುತ್ತದೆ. ಇನ್ನು ತಜ್ಞರ ಅನ್ವಯ ಕೋವ್ಯಾಕ್ಸಿನ್ ಎರಡನೇ ಡೋಸ್ 4-6 ವಾರದ ನಂತರ ನೀಡಿದರೆ, ಕೋವಿಶೀಲ್ಡ್ ಎರಡನೇ ಡೋಸ್‌ 6-8 ತಿಂಗಳ ಬಳಿಕ ನೀಡಬೇಕು. ಹೀಗಿರುವಾಗ ಜನ ಸಾಮಾನ್ಯರು ಕೂಡಾ ತಾವು ಯಾವ ಲಸಿಕೆ ಪಡೆಯಬೇಕೆಂಬ ಗೊಂದಲದಲ್ಲಿದ್ದಾರೆ. ಅಲ್ಲದೇ ಇವುಗಳ ಅಡ್ಡ ಪರಿಣಾಮದ ಬಗ್ಗೆಯೂ ಜನರಿಗೆ ಚಿಂತೆ ಕಾಡುತ್ತಿದೆ. ಹೀಗಿರುವಾಗ ಈ ಎರಡೂ ಲಸಿಕೆ ನಡುವಿನ ವ್ಯತ್ಯಾಸ, ಅಡ್ಡ ಪರಿಣಾಮ ಹಾಗೂ ವಿಶೇಷತೆ ಬಗ್ಗೆ ಇಲ್ಲಿದೆ ವಿವರ.