ಜಿಟಿ ಜಿಟಿ ಮಳೆ ರೊಮ್ಯಾಂಟಿಕ್ ಮೂಡ್ ಹೆಚ್ಚಿಸುತ್ತೆ ಅನ್ನೋ ಮಾತಿದೆ. ಇದೀಗ ಈ ಆಪ್ತತೆ, ಆತ್ಮೀಯತೆ, ಪ್ರಣಯವನ್ನು ಮತ್ತಷ್ಟು ಹೆಚ್ಚಿಸಲಲು ಇದೀಗ ಮಾರುಕಟ್ಟೆಗೆ ಜೋಡಿ ಛತ್ರಿ ಲಗ್ಗೆ ಇಟ್ಟಿದೆ.  

ಭಾರಿ ಮಳೆ ಆರ್ಭಟ ಕಡಿಮೆಯಾದರೂ ಮಳೆ ಕಡಿಮೆಯಾಗಿಲ್ಲ. ಎಲ್ಲಿ ನೋಡಿದರು ಇದೀಗ ನೀರು ತುಂಬಿಕೊಂಡಿದೆ. ಹಲವು ಭಾಗದಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ಚಟುವಟಿಕೆಗೆ ಮಳೆ ಕಡಿಮೆಯಾಗುತ್ತಿದ್ದಂತೆ ಪುನರ್ ಆರಂಭಗೊಂಡಿದೆ. ಮಳೆಗಾಲದಲ್ಲಿ ಬಗೆ ಬಗೆಯ ಛತ್ರಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಈ ಬಾರಿ ರೊಮ್ಯಾಂಟಿಕ್ ಜೋಡಿ ಛತ್ರಿ ಭಾರಿ ಸದ್ದು ಮಾಡುತ್ತಿದೆ. ಜೋಡಿ ಜೊತೆಯಾಗಿ ಹೆಜ್ಜೆಹಾಕಲು ಈ ಛತ್ರಿ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಚೀನಾ ಹಾಗೂ ತೈವಾನ್‌ನಲ್ಲಿ ಈ ಕಪಲ್ ಅಂಬ್ರೆಲ್ಲಾ ಭಾರಿ ಸದ್ದು ಮಾಡುತ್ತಿದೆ.

ಸಣ್ಣ ಛತ್ರಿಯಲ್ಲಿ ಇಬ್ಬರು ಜೊತೆಯಾಗಿ ಸಾಗುವುದು ಕಷ್ಟ. ಇದಕ್ಕಾಗಿ ಇಬ್ಬರು ಒಂದೇ ಛತ್ರಿಯಲ್ಲಿ ಸುಗಮವಾಗಿ ಸಾಗಲು ಈ ಛತ್ರಿ ಅಭಿವೃದ್ಧಿ ಮಾಡಲಾಗಿದೆ. ವಿಶೇಷ ಅಂದರೆ ಎರಡೆರಡು ಬಣ್ಣಗಳಲ್ಲಿ ಈ ಛತ್ರಿ ಲಭ್ಯವಿದೆ. ಸ್ವಿಚ್ ಒಂದೆ, ಮಡಚಿಕೊಂಡಾಗ ಒಂದೇ ಛತ್ರಿ, ಆದರೆ ಬಿಡಿಸಿದಾಗ ಎರಡು ಛತ್ರಿಯಾಗಿ ತೆರೆದುಕೊಳ್ಳುತ್ತದೆ. 

ಜೊತೆಯಾಗಿ ಹಿತವಾಗಿ... ವೃದ್ಧ ದಂಪತಿ ಜೊತೆ ಸಾಗುವ ವಿಡಿಯೋ ವೈರಲ್

ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಸಾಗಲು ಭಾರತದಲ್ಲಿ ದೊಡ್ಡ ಛತ್ರಿಯನ್ನು ಬಳಸುತ್ತಾರೆ. ಆದರೆ ಮಳೆ ಹಾಗೂ ಜನರನ್ನು ಆಕರ್ಷಿಸಲು ಈ ಛತ್ರಿ ಮಾರುಕಟ್ಟೆಗೆ ತರಲಾಗಿದೆ. ಪ್ರಮುಖವಾಗಿ ಜೋಡಿಗಳನ್ನು ಉದ್ದೇಶವಾಗಿಟ್ಟುಕೊಂಡು ಈ ಛತ್ರಿ ತಯಾರಿಸಲಾಗಿದೆ. ರೊಮ್ಯಾಂಟಿಕ್ ಪಯಣಕ್ಕೆ ಕಪಲ್ ಛತ್ರಿ ಸಾಥ್ ನೀಡಲಿದೆ ಎಂದು ಹೇಳಲಾಗಿದೆ.

View post on Instagram

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ರೀತಿಯ ಛತ್ರಿಗಳಿವೆ. ಸಣ್ಣ ಛತ್ರಿಯಿಂದ ಹಿಡಿದು ದೊಡ್ಡ ಛತ್ರಿವರೆಗೆ ಲಭ್ಯವಿದೆ. ಇದೀಗ ಮತ್ತಷ್ಟು ಹೊಸ ಬಣ್ಣದಲ್ಲಿ ಛತ್ರಿ ಬಿಡುಗಡೆ ಮಾಡಿದರೂ ಜನರನ್ನು ಆಕರ್ಷಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಹೊಸ ವಿಧಾನದ ಛತ್ರಿಯನ್ನು ಮಾರುಕಟ್ಟೆಗೆ ಪರಿಚಯಿಸಲು ನಿರ್ಧಾರ ಮಾಡಲಾಗಿತ್ತು. ಈ ವೇಳೆ ಮಕ್ಕಳು, ವಯಸ್ಕರು, ಮಹಿಳೆಯರು ಸೇರಿದಂತೆ ಹಲವರನ್ನು ಗುರಿಯಾಗಿಸಿಕೊಂಡು ಛತ್ರಿ ಅಭಿವೃದ್ಧಿ ಚರ್ಚೆಗಳನ್ನು ನಡೆಸಲಾಗಿತ್ತು. ಅಂತಿಮವಾಗಿ ಜೋಡಿಗಳಿಗಾಗಿ ಜೋಡಿ ಛತ್ರಿ ಅಭಿವೃದ್ಧಿ ಮಾಡಲಾಗಿದೆ. ಈ ಛತ್ರಿಗೆ ಸದ್ಯಬೇಡಿಕೆ ವ್ಯಕ್ತವಾಗಿದೆ ಎಂದು ಈ ಜೋಡಿ ಛತ್ರಿ ತಯಾರಕರು ಹೇಳಿದ್ದಾರೆ.

ಬಾಲ್ಯದ ಸಿಹಿ ದಿನಗಳ ನೆನಪಿಸಿದ ಹಳ್ಳಿಯ ಮಕ್ಕಳ ವಿಡಿಯೋ

ಈ ಛತ್ರಿಗೆ ಹಲವರು ಕಮೆಂಟ್ ಮಾಡಿದ್ದಾರೆ. ಹೊಸ ಛತ್ರಿ ಆಕರ್ಷಕವಾಗಿದೆ. ಆದರೆ ಕೊಂಡಕೊಳ್ಳಲು ಬಯಸುತ್ತಿಲ್ಲ ಎಂದಿದ್ದಾರೆ. ಇತ್ತ ಭಾರತೀಯರು ಕಮೆಂಟ್ ಮಾಡಿದ್ದಾರೆ. ಜೋಡಿ ಛತ್ರಿ ಬದಲು ಫ್ಯಾಮಿಲಿ ಛತ್ರಿ ನಮ್ಮಲ್ಲಿದೆ. ಇಬ್ಬರಲ್ಲ, ಮತ್ತಿಬ್ಬರು ಗರ್ಲ್‌ಫ್ರೆಂಡ್ಸ್ ಕೂಡ ಜೊತೆಯಾಗಿ ಸಾಗಬಹುದು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.