ಬಾಲ್ಯದ ಸಿಹಿ ದಿನಗಳ ನೆನಪಿಸಿದ ಹಳ್ಳಿಯ ಮಕ್ಕಳ ವಿಡಿಯೋ
ಬಾಲ್ಯದ ಕೆಲ ಫೋಟೋಗಳು ಹಳೆಯ ದಿನಗಳನ್ನು ನೆನಪು ಮಾಡುವುದು. ಫೋಟೋ ನಮ್ಮದೇ ಆಗಿರಬೇಕೆಂದೇನಿಲ್ಲ ನೆನಪು ಚಿಗುರಲು. ಹಾಗೆಯೇ ಒಂದೇ ಛತ್ರಿಯ ಕೆಳಗೆ ಸುಮಾರು ಮಕ್ಕಳು ಜೊತೆಯಾಗಿ ಶಾಲೆಗೆ ಹೋಗುತ್ತಿರುವ ದೃಶ್ಯದ ವಿಡಿಯೋವೊಂದು ಈಗ ವೈರಲ್ ಆಗಿದ್ದು ಅನೇಕರಿಗೆ ಈ ವಿಡಿಯೋ ತಮ್ಮ ಬಾಲ್ಯವನ್ನು ನೆನಪು ಮಾಡುತ್ತಿದೆ.
ಬಾಲ್ಯ ಬದುಕಿನ ಅತೀ ಸುಂದರ ಸಮಯಗಳಲ್ಲಿ ಒಂದು. ಬಡವ ಶ್ರೀಮಂತ ಒಳ್ಳೆಯವ ಕೆಟ್ಟವ ಎಂದು ಯೋಚಿಸದೇ ಯಾವುದೇ ಪೂರ್ವಾಗ್ರಹಗಳಿಲ್ಲದೇ ಬಂದಿದ್ದನ್ನು ಬಂದಂತೆ ಸ್ವೀಕರಿಸುವ ಮುಗ್ಧತೆ ಮೈ ಗಂಟಿಕೊಂಡಿರುವ ಕ್ಷಣವದು. ಯಾವುದೇ ಕಷ್ಟಗಳನ್ನು ತಲೆಗೆ ತೆಗೆದುಕೊಳ್ಳದೇ ಖುಷಿಯಾಗಿ ಸಾಗುವ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರೆ ಮತ್ತೆ ಬಾಲ್ಯಕ್ಕೆ ಮರಳುವ ಆಸೆಯಾಗುವುದು. ಬಾಲ್ಯದ ನೆನಪುಗಳು ಮನದಲ್ಲಿ ಹಚ್ಚ ಹಸುರಾಗಿ ನಿಲ್ಲುವುದು. ಹಾಗೆಯೇ ಬಾಲ್ಯದ ಕೆಲ ಫೋಟೋಗಳು ಹಳೆಯ ದಿನಗಳನ್ನು ನೆನಪು ಮಾಡುವುದು. ಫೋಟೋ ನಮ್ಮದೇ ಆಗಿರಬೇಕೆಂದೇನಿಲ್ಲ ನೆನಪು ಚಿಗುರಲು. ಹಾಗೆಯೇ ಒಂದೇ ಛತ್ರಿಯ ಕೆಳಗೆ ಸುಮಾರು ಮಕ್ಕಳು ಜೊತೆಯಾಗಿ ಶಾಲೆಗೆ ಹೋಗುತ್ತಿರುವ ದೃಶ್ಯದ ವಿಡಿಯೋವೊಂದು ಈಗ ವೈರಲ್ ಆಗಿದ್ದು ಅನೇಕರಿಗೆ ಈ ವಿಡಿಯೋ ತಮ್ಮ ಬಾಲ್ಯವನ್ನು ನೆನಪು ಮಾಡುತ್ತಿದೆ.
ಮಲೆನಾಡು ಭಾಗದ ಅಥವಾ ಅತೀಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಚಿತ್ರೀಕರಿಸಿದ ವಿಡಿಯೋ ಇದಾಗಿದೆ. ಹಳ್ಳಿಯ ಥಾರ್ ರಸ್ತೆಯಲ್ಲಿ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಇಟ್ಟುಕೊಂಡು ಶಾಲೆಗೆ ಹೋಗುತ್ತಿದ್ದಾರೆ. ಈ ಖುಷಿ ಯಾವುದು ಪಟ್ಟಣದಲ್ಲೋ ಅಥವಾ ಕಾನ್ವೆಂಟ್‌ನ ಶಾಲೆಯಲ್ಲೂ ಸಿಗಲು ಸಾಧ್ಯವಿಲ್ಲ. ಸುರಿಯುವ ಸೊನೆ ಮಳೆಯ ಮಧ್ಯೆ ಒಂದೇ ಛತ್ರಿಯ ಕೆಳಗೆ ಮಕ್ಕಳು ಸಾಗುತ್ತಿದ್ದು, ಜೋರಾಗಿ ಮಳೆ ಸುರಿದರೆ ಎಲ್ಲರೂ ಜೊತೆಯಾಗಿ ಒದ್ದೆಯಾಗುವುದಂತೂ ಗ್ಯಾರಂಟಿ ಆದರೂ ಆ ಛತ್ರಿಯ ಕೆಳಗೆ ಜೊತೆಯಾಗಿ ಸಾಗುವುದರಲ್ಲಿ ಅದೇನೋ ಖುಷಿ. ಆ ಖುಷಿ ಈ ಮಕ್ಕಳ ಮುಖದಲ್ಲೂ ಕಾಣಿಸುತ್ತಿದೆ.
ಈ ವಿಡಿಯೋ ನೋಡಿದ ಅನೇಕರು ತಮ್ಮ ಬಾಲ್ಯದ ದಿನಗಳಿಗೆ ಜಾರಿದ್ದಾರೆ. ಭಾರತೀಯ ಆಡಳಿತ ಸೇವೆ ಅಧಿಕಾರಿ (IAS officer) ಅವನೀಶ್ ಶರಣ್ (Awanish Sharan) ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸ್ನೇಹ ಎಂಬ ಶೀರ್ಷಿಕೆ ನೀಡಿದ್ದಾರೆ. ಇವರು ಸರ್ಕಾರಿ ಶಾಲೆ ಮಕ್ಕಳಾಗಿದ್ದು, ಶಾಲೆಯ ಸಮವಸ್ತ್ರ ಧರಿಸಿದ್ದಾರೆ. ಈ ವಿಡಿಯೋವನ್ನು ಹತ್ತು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಬರೋಬ್ಬರಿ 1 ಲಕ್ಷ ರೂ. ಬೆಲೆಬಾಳುವ ಛತ್ರಿಯಿದು, ಆದ್ರೆ ಮಳೆಗಾಲದಲ್ಲಿ ಬಳಸೋಕಾಗಲ್ಲ !
ಇದು ನನ್ನ ಬಾಲ್ಯದ ದಿನಗಳನ್ನು ನೆನಪು ಮಾಡುತ್ತಿದೆ. ಪ್ರತಿದಿನ ಎರಡು ಕಿಲೋ ಮೀಟರ್ ನಡೆದು ಶಾಲೆಗೆ ಹೋಗಬೇಕಿತ್ತು ಜೊತೆಗೆ ಪಾದರಕ್ಷೆಯೂ ಇರಲಿಲ್ಲ ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ. ಮುಗ್ಧತೆ ಹಾಗೂ ಸಂತೋಷ ಅವರ ಮುಖದಲ್ಲಿ ಎದ್ದು ಕಾಣಿಸುತ್ತಿದೆ. ಅದಕ್ಕೆ ಬೆಲೆ ಕಟ್ಟಲಾಗದು. ಬಾಲ್ಯ ಎಂದರೆ ಇದು. ಯಾವುದೇ ದೂರುಗಳಿಲ್ಲ ಯಾವುದೇ ದುರಂಕಾರಗಳಿಲ್ಲ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬಾಲ್ಯದಲ್ಲಿ ಭಿಕ್ಷುಕನಾಗಿದ್ದ Uttar Pradeshದ ಹುಡುಗನಿಗೆ ಅಗ್ನಿವೀರನಾಗುವ ಕನಸು
ಒಟ್ಟಿನಲ್ಲಿ ಈ ವಿಡಿಯೋ ಬಹುತೇಕ ಎಂಭತ್ತು ತೊಂಭತ್ತರ ದಶಕದಲ್ಲಿ ಬಾಲ್ಯ ಕಳೆದವರ ನೆನಪನ್ನು ಮರುಕಳಿಸಿದಂತು ನಿಜ. ಆಗ ಈಗಿನಂತೆ ಎಲ್ಲರೂ ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಲಿಸುತ್ತಿರಲಿಲ್ಲ. ಬಹುತೇಕ ಊರಿಗೊಂದು ಸರ್ಕಾರಿ ಶಾಲೆ ಇದ್ದು, ಊರಿನ ಪ್ರತಿಯೊಬ್ಬರು ಅದೇ ಶಾಲೆಯಲ್ಲಿ ಓದುತ್ತಿದ್ದರು. ಮಕ್ಕಳು ಗುಂಪು ಗುಂಪಾಗಿ ಹಳಿಯ ರಸ್ತೆಗಳಲ್ಲಿ ಕಿಲೋ ಮೀಟರ್ ದೂರ ನಡೆಯುತ್ತಾ ಶಾಲೆ ಸೇರುತ್ತಿದ್ದರು.