Asianet Suvarna News Asianet Suvarna News

ಬಾಲ್ಕನಿಯಲ್ಲಿ ಹೊಸ ಜೋಡಿಯ ಸೆಕ್ಸ್, ಸುಮ್ನೆ ಬಿಡ್ಲಿಲ್ಲ ಚೀನಾ ಪೊಲೀಸ್!

ಬಾಲ್ಕನಿಯಲ್ಲಿ ಜೋಡಿಯೊಂದು ಸೆಕ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಆಕೆಯೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Couple romance and sex in balcony woman arrested after video went viral in China san
Author
Bengaluru, First Published Jun 11, 2022, 10:35 PM IST

ಬೀಜಿಂಗ್ (ಜೂನ್ 11): ಹಗಲುಹೊತ್ತಿನಲ್ಲಿ ಅಪಾರ್ಟ್ ಮೆಂಟ್ ನ (apartment ) ಬಾಲ್ಕನಿಯಲ್ಲಿ (balcony ) ಸೆಕ್ಸ್ (Sex) ಮಾಡುತ್ತಿದ್ದ ಜೋಡಿಯ ವಿಡಿಯೋ ಹಾಂಕಾಂಗ್ ನಲ್ಲಿ (Hong Kong) ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ (viral video) ಆದ ಬೆನ್ನಲ್ಲಿಯೇ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಆಕೆಯೊಂದಿಗೆ ಸೆಕ್ಸ್ ನಡೆಸಿದ್ದ ವ್ಯಕ್ತಿಯ ಶೋಧ ಕಾರ್ಯ ನಡೆಯುತ್ತಿದೆ.

ಹಾಂಗ್ ಕಾಂಗ್‌ನ ಕೈ ತಕ್  (Kai Tak)ವಿಮಾನ ನಿಲ್ದಾಣದ ಬಳಿಯ ಬಹುಮಹಡಿ ಕಟ್ಟಡದ ಫ್ಲಾಟ್‌ನ ಬಾಲ್ಕನಿಯಲ್ಲಿ ಜೋಡಿಯೊಂದು ಸೆಕ್ಸ್  ಮಾಡುತ್ತಿತ್ತು. ಇದನ್ನು ಒಬ್ಬ ವ್ಯಕ್ತಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಇದು ಹಾಂಕಾಂಗ್ ಹಾಗೂ ಚೀನಾದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಪೊಲೀಸರು ಕ್ರಮ ಕೈಗೊಂಡಿದ್ದು, ಜೂನ್ 7 ರಂದು ಮಹಿಳೆಯ ಬಂಧನ ಮಾಡಿದ್ದಾರೆ. ಕಳೆದ ಬುಧವಾರ ಇಡೀ ಹಾಂಕಾಂಗ್ ಪೂರ್ತಿ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗಿದೆ.

36 ವರ್ಷದ ಮಹಿಳೆಯನ್ನು ಸೌ ಮೌ ಪಿಂಗ್ (Sau Mau Ping in Kwun Tong) ಅಪರಾಧ ತನಿಖಾ ಘಟಕದ ಅಧಿಕಾರಿಗಳು ಮಂಗಳವಾರ ಕೈ ತಕ್ ಎಂಟಿಆರ್ ಸ್ಟೇಷನ್ ಬಳಿಯ ಮುಕ್ ತೈ ಸ್ಟ್ರೀಟ್ ವಸತಿ ಕಟ್ಟಡದ ಹೊರಗೆ ಬಂಧಿಸಿದ್ದಾರೆ. ಸಾಮಾನ್ಯ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸಿದದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದ್ದು, ಈ ಅಪರಾಧಕ್ಕೆ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.

ವಕೀಲ  ಆಲ್ಬರ್ಟ್ ಲುಕ್ ವೈ-ಹಂಗ್ ಅವರು ಈ ಪ್ರಕರಣದಲ್ಲಿ ಸಾರ್ವಜನಿಕವಾಗಿ ಅಶಿಸ್ತಿನ ಅಪರಾಧ ಆರೋಪವು ಹೆಚ್ಚು ನಿಖರವಾಗಿರುತ್ತಿತ್ತು ಎಂದು ಹೇಳಿದರು. ಇದರ ಅಡಿಯಲ್ಲಿ, ಒಬ್ಬರು 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ಸುಮಾರು 10 ಸಾವಿರ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.

ಬಾಲ್ಕನಿಯು ಖಾಸಗಿ ಪ್ರದೇಶವಾಗಿದೆ, ಆದರೆ ಇದು ತೆರೆದ ಸ್ಥಳದಲ್ಲಿ ಪ್ರಣಯವನ್ನು ಮಾಡುವುದು ಕಾನೂನಿನ ಉಲ್ಲಂಘನೆಯಾಗಿದೆ. ಈ ಜೋಡಿಗೆ ಶಿಕ್ಷೆ ನೀಡುವುದರೊಂದಿಗೆ ದಂಪತಿಗಳ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಸುಮಾರು 1 ಕೋಟಿ ದಂಡ ವಿಧಿಸಬೇಕು ಎಂದಿದ್ದಾರೆ.

ಲೈಂಗಿಕ ಕ್ರಿಯೆ ವೇಳೆ ಜಗಳ, ಸಲಿಂಗಕಾಮಿಯ ಹತ್ಯೆ!

"ಮಹಿಳೆಯನ್ನು ಇನ್ನೂ ವಿಚಾರಣೆಗಾಗಿ ಬಂಧಿಸಲಾಗಿದೆ. ಸಕ್ರಿಯ ತನಿಖೆ ಇನ್ನೂ ನಡೆಯುತ್ತಿದೆ. ಹೆಚ್ಚಿನ ಬಂಧನ ಸಾಧ್ಯತೆ ಇದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮುಕ್ ತೈ ಸ್ಟ್ರೀಟ್ ಕಟ್ಟಡದ ಫ್ಲಾಟ್‌ನ ಬಾಲ್ಕನಿಯಲ್ಲಿ ಪುರುಷ ಮತ್ತು ಮಹಿಳೆ ಸೆಕ್ಸ್ ಮಾಡುತ್ತಿರುವ ವೀಡಿಯೊವನ್ನು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು.

ಕಾರಿನಲ್ಲಿ ರೊಮ್ಯಾನ್ಸ್‌ ಮಾಡಿದ ಯುವತಿಗೆ ಸಿಕ್ತು ಬರೋಬ್ಬರಿ 40 ಕೋಟಿ!, ಹೇಗೆ? ಇಲ್ಲಿದೆ ವಿವರ

ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ, ಮಂಗಳವಾರ ಫ್ಲಾಟ್‌ಗಳ ಹೊರಗೆ ಮಹಿಳೆಯನ್ನು ಬಂಧಿಸಲಾಗಿದೆ. 16 ಸೆಕೆಂಡ್‌ಗಳ ಕ್ಲಿಪ್, ಹತ್ತಿರದ ಕಟ್ಟಡದಿಂದ ಚಿತ್ರೀಕರಿಸಲಾಗಿದೆ, ಇದರಲ್ಲಿ ಗಂಡು-ಹೆಣ್ಣು ಇಬ್ಬರೂ ಬೆತ್ತಲೆಯಾಗಿ ಸೆಕ್ಸ್ ಮಾಡುತ್ತಿರುವುದು ಕಂಡು ಬಂದಿದೆ.

ಜಾಲತಾಣಗಳಲ್ಲಿ ಆಕ್ರೋಶ: ಕೆಲವು ನೆಟಿಜನ್‌ಗಳು ಇವರಿಬ್ಬರನ್ನು ಟೀಕೆ ಮಾಡಿದ್ದು, ದೇಶದಲ್ಲಿ ನೈತಿಕತೆ ಎನ್ನುವುದು ಕಡಿಮೆ ಆಗುತ್ತಿದೆ ಎಂದಿದ್ದಾರೆ. ಇನ್ನೂ ಕೆಲವರು ಇವರಬ್ಬರ ಮೇಲೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. "ಮನೆಯ ಬಾಲ್ಕನಿ ಎನ್ನುವುದು ನಮ್ಮ ಖಾಸಗಿ ಸ್ಥಳ, ಅಲ್ಲೂ ಕೂಡ ಸೆಕ್ಸ್ ಮಾಡಬಾರದು ಎಂದರೆ ಹೇಗೆ' ಎಂದು ನೆಟಿಜನ್ ಗಳು ಪ್ರಶ್ನೆ ಮಾಡಿದ್ದಾರೆ.  ಬೆಡ್ ರೂಮ್ ನಲ್ಲಿ ಕರ್ಟನ್ ಇಲ್ಲದೆ, ಸೆಕ್ಸ್ ಮಾಡಿದರೂ ಕೂಡ ಪೊಲೀಸರು ಬಂಧಿಸ್ತಾರಾ ಎಂದೂ ಕೆಲವೊಬ್ಬರು ಪ್ರಶ್ನೆ ಮಾಡಿದ್ದಾರೆ. ಅದಲ್ಲದೆ, ಸೆಕ್ಸ್ ಮಾಡಿದ ಜೋಡಿಗಿಂತ, ಇದನ್ನು ವಿಡಿಯೋ ಮಾಡಿದ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios