ಟಾಯ್ಲೆಟ್‌ನಲ್ಲಿ ಅಡಗಿತ್ತು ಭಾರಿ ಗಾತ್ರದ ಉಡ ಥಾಯ್ಲೆಂಡ್‌ಗೆ ಪ್ರವಾಸ ಬಂದಿದ್ದ ಬ್ರಿಟಿಷ್‌ ಜೋಡಿಗೆ ಶಾಕ್‌

ಥೈಲ್ಯಾಂಡ್‌(ಜ.31): ಹೊರಗೆಲ್ಲಾದರೂ ಹೋಗಿ ಬಂದ ಮೇಲೆ ನಾವು ಮಾಡುವ ಮೊದಲ ಕೆಲಸ ಬಟ್ಟೆ ಬದಲಾಯಿಸುವುದು ಅಥವಾ ಬಾತ್‌ರೂಮ್‌ ಅಥವಾ ಟಾಯ್ಲೆಟ್‌ಗೆ ಹೋಗಿ ರಿಫ್ರೆಶ್ ಆಗುವುದು. ಬಹುತೇಕರಿಗೆ ಸ್ವಂತ ಮನೆಯ ಟಾಯ್ಲೆಟ್ ಬಾತ್‌ರೂಮ್‌ಗಳು ಆರಾಮದಾಯಕವೆನಿಸುವಷ್ಟು ಬೇರೆ ಯಾವುದು ಅನಿಸುವುದಿಲ್ಲ. ಇದಕ್ಕೆ ಕಾರಣ ಹೊರಗೆ ಹೋದಲ್ಲಿ ನೈಸರ್ಗಿಕ ಕರೆಗಳಿಗೆ ಹೋಗಲು ಸರಿ ಎನಿಸದಿರುವುದು ಹಾಗೂ ಬೇರೆಯವರ ಮನೆ ಎಂಬ ಮುಜುಗರವೂ ಇರುತ್ತದೆ. ಹೀಗಾಗಿಯೇ ನಾವು ಮನೆಗೆ ಬಂದ ಕೂಡಲೇ ಮೊದಲು ಬಾತ್‌ರೂಮ್‌ ಅಥವಾ ಟಾಯ್ಲೆಟ್‌ಗೆ ಓಡುವುದು ಸಹಜ. ಆದರೆ ಹೀಗೆ ಓಡಿ ಹೋಗಿ ಕೂರುವ ಮುನ್ನ ಎಚ್ಚರ ವಹಿಸುವ ಅಗತ್ಯವಿದೆ. ಏಕೆ ಗೊತ್ತೇ ಈ ಸ್ಟೋರಿ ನೋಡಿ...

ಹೌದು ಬ್ರಿಟಿಷ್ (British) ಪ್ರಜೆಯೊಬ್ಬ ತನ್ನ ಗೆಳತಿಯೊಂದಿಗೆ ಥೈಲ್ಯಾಂಡ್‌(Thailand)ಗೆ ರಜಾ ದಿನಗಳನ್ನುಕಳೆಯಲು ಪ್ರವಾಸ ಬಂದಿದ್ದರು. ಈ ವೇಳೆ ವಿಶ್ರಾಂತಿ ಗೃಹಕ್ಕೆ ಬಂದು ಇಳಿದ ಅವರಿಗೆ ಶಾಕ್ ಕಾದಿದೆ. ಇದಕ್ಕೆ ಕಾರಣವಾಗಿದ್ದು ಒಂದು ಉಡ. ಹೌದು ಪ್ರವಾಸಿಗನ ಗೆಳತಿ ವಿಶ್ರಾಂತಿ ಗೃಹ ತಲುಪುತ್ತಿದ್ದಂತೆ ನೈಸರ್ಗಿಕ ಕರೆಗಾಗಿ ಟಾಯ್ಲೆಟ್‌ಗೆ ಹೋಗಿದ್ದಾಳೆ. ಇನ್ನೇನು ಟಾಯ್ಲೆಟ್ ಬೇಸಿನ್‌ನಲ್ಲಿ ಕೂರಬೇಕು ಎನ್ನುವಷ್ಟರಲ್ಲಿ ಆಕೆಗೆ ಅಲ್ಲೇನೋ ಕಾಣಿಸಿದೆ. ಕೂಡಲೇ ಜಾಗೃತಳಾದ ಆಕೆ ಅದೇನು ಎಂದು ಗಮನಿಸಲು ಶುರು ಮಾಡಿದ್ದಾಳೆ. ಬಳಿಕ ಬೇಸಿನ್‌ನೊಳಗೆ ಇದ್ದ ಸರೀಸೃಪದ ವಿಡಿಯೋ ಮಾಡಿ ಅಲ್ಲಿಂದಲೇ ತನ್ನ ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದಾರೆ.

ಬಳಿಕ ನೋಡಿದರೆ ಅದರೊಳಗೆ ಇದ್ದಿದ್ದು ಸಾಧಾರಣ ವಿಷ ಹೊಂದಿರುವ ಉಡ ಎನ್ನುವುದು ಗೊತ್ತಾಗಿದೆ. ಈ ಜೋಡಿ ಥೈಲ್ಯಾಂಡ್‌ನ ಪಾಥುಮ್ ಥಾನಿ (Pathum Thani) ಎಂಬಲ್ಲಿಗೆ ಪ್ರವಾಸ ಬಂದಿದ್ದರು. ಪ್ರವಾಸ ಬಂದ ಬ್ರಿಟಿಷ್‌ ಪ್ರಜೆಯನ್ನು ಕೆಂಟ್‌ನ (Kent) ಜೇಸನ್ ಕಿಂಗ್‌ಮ್ಯಾನ್ (Jason Kingman) ಎಂದು ಗುರುತಿಸಲಾಗಿದೆ. ಈತ ತನ್ನ ಗೆಳತಿ ಚಂತಿಮಾ ಚೈರಿಸುಕ್ ( Chantima Chairisuk)ಎಂಬಾಕೆಯೊಂದಿಗೆ ಪ್ರವಾಸಕ್ಕೆ ಬಂದಿದ್ದ. ಈತ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಟಾಯ್ಲೆಟ್‌ಗೆ ಹೋದ ನನ್ನ ಗೆಳತಿ ಕೂಡಲೇ ನನನ್ನು ಕರೆದು ಟಾಯ್ಲೆಟ್ ಬೇಸಿನ್‌ನಲ್ಲಿ ಏನೋ ಚಲಿಸುವಂತೆ ಭಾಸವಾಗುತ್ತಿದೆ ಎಂದಳು. ಆದರೆ ಇಷ್ಟು ದೊಡ್ಡ ಗಾತ್ರದ ಉಡ ಅಲಿರಬಹುದು ಎಂದು ನಾನೂ ಊಹಿಸಿಯೂ ಇರಲಿಲ್ಲ ಎಂದರು.

ತನ್ನನ್ನೇ ತಾನು ನುಂಗಿದ ಕಾಳಿಂಗ.. ವಿಡಿಯೋ ವೈರಲ್

ಈ ಬಗ್ಗೆ ಈತನ ಗೆಳತಿ ಚಂತಿಮಾ ಚೈರಿಸುಕ್ ಪ್ರತಿಕ್ರಿಯಿಸಿದ್ದು, ಟಾಯ್ಲೆಟ್ ಬೇಸಿನ್‌ನಲ್ಲಿ ಏನೋ ಚಲಿಸುತ್ತಿರುವುದು ನನಗೆ ಕಾಣಿಸಿತ್ತು. ನಂತರ ನಾನು ಅದರ ವಿಡಿಯೋ ಮಾಡಿ ನನ್ನ ಸ್ನೇಹಿತನಿಗೆ ಕಳುಹಿಸಿ ಇದು ಏನು ಎಂದು ನೋಡಲು ತಿಳಿಸಿದೆ. ಬಳಿಕ ನಮಗೆ ಅದೊಂದು ಉಡ ಎಂಬುದು ತಿಳಿಯಿತು. ಅದೊಂದು ಏಷಿಯನ್ ನೀರು ಉಡ ಆಗಿದೆ. ಇದು ಸ್ವಲ್ಪ ಮಟ್ಟಿನ ವಿಷವನ್ನು ಹೊಂದಿದೆ. ಗಾರ್ಡನ್‌ಗಳಲ್ಲಿ ಇವುಗಳನ್ನು ನೋಡಿದ್ದೇನೆ. ಆದರೆ ಟಾಯ್ಲೆಟ್‌ನಲ್ಲಿ ನೋಡಿದ್ದು ಇದೇ ಮೊದಲು. ಕೆಲವು ಕಡೆ ಜನ ಮನೆಯ ಸುತ್ತ ಹಾವು ಹಲ್ಲಿ ಬರದಂತೆ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. 

ಅರ್ಜೆಂಟೀನಾ ನಗರವನ್ನು ಭಾದಿಸುತ್ತಿರುವ ಲಕ್ಷಾಂತರ ಜೀರುಂಡೆಗಳು... ವಿಡಿಯೋ ನೋಡಿ

ಬಹುಶ: ಈ ವೇಳೆ ಜೀವ ಉಳಿಸಿಕೊಳ್ಳುವ ಸಲುವಾಗಿ ಇದು ಮನೆ ಒಳಗೆ ಬಂದು ಟಾಯ್ಲೆಟ್‌ನಲ್ಲಿ ಸೇರಿರಬೇಕು ಎಂದು ಅವರು ಹೇಳಿದರು. ಬಳಿಕ ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಹರಿ ಬಿಡಲಾಗಿದ್ದು, ಸಾಕಷ್ಟು ವೈರಲ್ ಆಗಿದೆ. ಒಟ್ಟಿನಲ್ಲಿ ಟಾಯ್ಲೆಟ್‌ಗೆ ಹೋಗಿ ಕೂರುವ ಮುನ್ನ ಒಮ್ಮೆ ಗಮನಿಸಿಕೊಳ್ಳಲೇ ಬೇಕು ಅಲ್ವಾ...!