ಹಮಾಸ್ ಉಗ್ರರ ಮೇಲೆ ಸೇಡು ತೀರಿಸಿದ ಎಲಾನ್ ಮಸ್ಕ್, ಭಯೋತ್ವಾದಕರ X ಖಾತೆ ಡಿಲೀಟ್!
ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಯನ್ನು ಹಲವು ದೇಶಗಳು ಖಂಡಿಸಿದೆ. ಭೀಕರತೆಯ ದೃಶ್ಯಗಳು ಬೆಚ್ಚಿ ಬೀಳಿಸುವಂತಿದೆ. ಹಮಾಸ್ ಮೇಲೆ ಇಸ್ರೇಲ್ ಪ್ರತಿ ದಾಳಿ ತೀವ್ರಗೊಳಿಸಿದೆ. ಇದೀಗ ಎಲಾನ್ ಮಸ್ಕ್ ಹಮಾಸ್ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿದ್ದಾರೆ. ಹಮಾಸ್ ಉಗ್ರರ 100ಕ್ಕೂ ಹೆಚ್ಚು ಎಕ್ಸ್ ಖಾತೆ ಡಿಲೀಟ್ ಮಾಡಲಾಗಿದೆ.
ನ್ಯೂಯಾರ್ಕ್(ಅ.12) ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿ ಹಾಗೂ ನರಮೇಧದ ದೃಶ್ಯಗಳು ಕರುಳು ಹಿಂಡುತ್ತಿದೆ. ಚಿಕ್ಕ ಮಕ್ಕಳನ್ನು ಬಿಡದಂತೆ ರುಂಡ ಕಡಿದು ಪೈಶಾಚಿಕತೆ ಮೆರೆದಿದ್ದಾರೆ. ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಯುದ್ಧ ನಡೆಸುತ್ತಿದೆ. ದಿನದಿಂದ ದಿನಕ್ಕೆ ಯುದ್ಧ ತೀವ್ರಗೊಳ್ಳುತ್ತಿದೆ. ಇದರ ನಡುವೆ ಹಮಾಸ್ ಉಗ್ರರ ಸಂಬಂಧಿತ ಕೆಲ ಪ್ರಮಖ ಎಕ್ಸ್(ಟ್ವಿಟರ್) ಖಾತೆಗಳನ್ನು ಡಿಲೀಟ್ ಮಾಡಲಾಗಿದೆ. ಎಕ್ಸ್ ಸಿಇಒ ಲಿಂಡಾ ಯಕಾರಿಯೋ ಈ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಬಳಿಕ ಎಕ್ಸ್ ಖಾತೆಗಳಲ್ಲಿ ಭಯೋತ್ಪಾದನೆ, ಉಗ್ರವಾದವನ್ನು ಪ್ರಚುರ ಪಡಿಸುವ ವಿಡಿಯೋ, ಫೋಟೋ, ಸಂದೇಶಗಳನ್ನು ಹಾಕುತ್ತಿದ್ದಾರೆ. ಭಯೋತ್ಪಾದನೆ ಪ್ರಚೋದಿಸುವ ವಿಷಗಳನ್ನು ಟ್ವಿಟರ್‌ನಿಂದ ತೆಗೆದು ಹಾಕಲಾಗುತ್ತಿದೆ. ಇದೇ ವೇಳೆ ಹಮಾಸ್ ಉಗ್ರರ ಸಂಬಂಧಿತ ಕೆಲ ಪ್ರಮುಖ ಎಕ್ಸ್ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಲಿಂಡಾ ಯಕಾರಿಯೋ ಸ್ಪಷ್ಟಪಡಿಸಿದ್ದಾರೆ.
ಹಮಾಸ್ ಬಳಿಕ ಉತ್ತರ ಇಸ್ರೇಲ್ ಗಡಿ ಸ್ಫೋಟಿಸಿ ಒಳನುಗ್ಗಿದ ಲೆಬೆನಾನ್ ಹೆಝ್‌ಬೊಲ್ಹಾ ಉಗ್ರರು!
ಸೂಕ್ಷ್ಮಿ ವಿಡಿಯೋಗಳು, ಫೋಟೋಗಳು, ಸಂದೇಶಗಳು ಎಕ್ಸ್‌ನಲ್ಲಿ ಹರಿದಾಡುತ್ತಿದೆ. ಉಗ್ರವಾದಕ್ಕೆ ಬೆಂಬಲ ನೀಡುವ, ಭಯೋತ್ಪಾದನೆಯನ್ನು ವಿಜ್ರಂಭಿಸುವ ಹಮಾಸ್ ಸಂಬಂಧಿತ ಕೆಲ ಎಕ್ಸ್ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ. 100ಕ್ಕೂ ಹೆಚ್ಚು ಖಾತೆಗಳು ಡಿಲೀಟ್ ಮಾಡಲಾಗಿದೆ ಎಂದು ಲಿಂಡಾ ಹೇಳಿದ್ದಾರೆ. ಇಸ್ರೇಲ್, ಗಾಜಾ ಸೇರಿದಂತೆ ಯುದ್ಧಪೀಡಿತ ಪ್ರದೇಶದಲ್ಲಿ ಎಕ್ಸ್ ಚಟವಟಿಕೆಗಳು ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಸರಾಸರಿ ಚಟುವಟಿಕೆಗಿಂತ ಗಣನೀಯ ಏರಿಕೆ ಕಂಡಿದೆ. ಎಕ್ಸ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇಸ್ರೇಲ್ ಹಾಗೂ ಗಾಜಾ ಪ್ರದೇಶದಲ್ಲಿ ದಿನಕ್ಕೆ 50 ಮಿಲಿಯನ್‌ಗೂ ಅಧಿಕ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ.
ಎಕ್ಸ್ ತನ್ನ ನಿಮಯದ ಪ್ರಕಾರ ಕೆಲಸ ಮಾಡುತ್ತಿದೆ. ಭಯೋತ್ಪಾದನೆ ಪ್ರಚೋದಿಸಲು ಸಾಧ್ಯವಿಲ್ಲ. ನರಮೇಧ, ಭೀಕರತೆಗೆ ಎಕ್ಸ್ ಬೆಂಬಲ ನೀಡುವುದಿಲ್ಲ ಎಂದಿದೆ. ಇದೀಗ ಎಕ್ಸ್ ಇಸ್ರೇಲ್ ಹಾಗೂ ಗಾಜಾ ಕುರಿತು ವಿಡಿಯೋ ಹಾಗೂ ಇತರ ಕೆಂಟೆಂಟ್ ಮೇಲೆ ತೀವ್ರ ನಿಗಾ ಇಟ್ಟಿದೆ. ಇದೇ ವೇಳೆ ಸುಳ್ಳು ಸುದ್ದಿಗಳನ್ನು, ವಿಡಿಯೋಗಳನ್ನು ಹರಡುವ ಮೇಲೂ ಕಣ್ಣಿಟ್ಟಿದೆ.
ಇಸ್ರೇಲಿ ಕುಟುಂಬವನ್ನೇ ಒತ್ತೆಯಾಳಾಗಿಟ್ಟು ಫೇಸ್‌ಬುಕ್ ಲೈವ್ ಬಂದ ಹಮಾಸ್ ಉಗ್ರರು!
ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್, ಸಂಪೂರ್ಣ ಗಾಜಾ ಧ್ವಂಸಗೊಳಿಸಲು ಹೊರಟಿದೆ. ಈಗಾಗಲೇ 1500ಕ್ಕೂ ಹೆಚ್ಚು ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ. ಹಮಾಸ್ ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಹಮಾಸ್ ಉಗ್ರರು ಮಸೀದಿ, ವಿಶ್ವವಿದ್ಯಾಲಗಳನ್ನೇ ಅಡಗುತಾಣವನ್ನಾಗಿ ಮಾಡಿದ್ದರು. ಈ ಮಸೀದಿ, ವಿಶ್ವವಿದ್ಯಾಲದ ಮೇಲೂ ದಾಳಿ ನಡೆಸಲಾಗಿದೆ.