ಜೈಪುರ[ಮಾ.17]: ಎಚ್‌ಐವಿ ನಿರೋಧಕ ಎರಡು ಔಷಧಗಳ ಸಂಯೋಜನೆಯು ಕೊರೋನಾ ವೈರಸ್‌ ಪೀಡಿತರನ್ನು ಗುಣಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ರಾಜಸ್ಥಾನ ಆರೋಗ್ಯ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಮೊದಲ ಬಾರಿ ಕೊರೋನಾಗೆ ಎಚ್‌ಐವಿ ಔಷಧ ಪ್ರಯೋಗ!

ರಾಜಸ್ಥಾನದಲ್ಲಿ ನಾಲ್ವರು ಈವರೆಗೆ ಕೊರೋನಾ ಪೀಡಿತರಾಗಿದ್ದು, ಇವರಲ್ಲಿ ಮೂವರು ಪೀಡೆಯಿಂದ ಗುಣಮುಖರಾಗಿದ್ದಾರೆ. ಈ ಬಗ್ಗೆ ವಿವರ ನೀಡಿದ ಸಿಂಗ್‌, ‘ಕೊರೋನಾ ಪೀಡಿತರ ಆರೋಗ್ಯ ಸುಧಾರಣೆಯಲ್ಲಿ ಎಚ್‌ಐವಿಯ 2 ಔಷಧಿಗಳ ಸಂಯೋಜನೆಯು ಮಹತ್ವದ ಪಾತ್ರ ವಹಿಸಿತು’ ಎಂದಿದ್ದಾರೆ.

‘ಫä್ಲ ರೀತಿಯ ಲಕ್ಷಣಗಳು ಮೊದಲು ರೋಗಿಗಳಲ್ಲಿ ಕಂಡುಬಂದಿತ್ತು. ಮೊದಲು ಅವರಿಗೆ ಮಲೇರಿಯಾ ಹಾಗೂ ಸ್ವೈನ್‌ ಫä್ಲ ನಿರೋಧಕ ಔಷಧ ನೀಡಲಾಯಿತು. ಎಚ್‌ಐವಿ ಲಕ್ಷಣಗಳೂ ಕೊರೋನಾ ರೀತಿಯೇ ಇದ್ದ ಕಾರಣ, ಬಳಿಕ ಅವರಿಗೆ ಎಚ್‌ಐವಿ ನಿರೋಧಕ 2 ಔಷಧಗಳನ್ನು ಸಂಯೋಜಿಸಿ ನೀಡಲಾಯಿತು. ಈಗ ನಾಲ್ವರಲ್ಲಿ ಮೂವರು ಚೇತರಿಸಿಕೊಂಡಿದ್ದಾರೆ. ಹೀಗಾಗಿ ಈ ಔಷಧ ಸಂಯೋಜನೆ ಕೆಲಸ ಮಾಡುತ್ತಿದೆ ಎಂದು ತಿಳಿದುಬರುತ್ತದೆ’ ಎಂದಿದ್ದಾರೆ.

ಕೊರೋನಾ ವೈರಸ್ ತಾಂಡವ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಲ್ಲದೆ ಈ ಔಷಧಿ ಸಂಯೋಜನೆ ಬಗ್ಗೆ ವಿವಿಧ ದೇಶಗಳಿಂದ ಮಾಹಿತಿ ಕೋರಲಾಗುತ್ತಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.