ಜಿನೆವಾ(ಏ.19): ಅಮೆರಿಕ ಕಡು ವಿರೋಧದ ಹೊರತಾಗಿಯೂ ಮತ್ತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಬೆನ್ನಿಗೆ ನಿಂತಿದೆ. ವುಹಾನ್‌ ನಗರದಲ್ಲಿ ಕೊರೋನಾ ವೈರಸ್‌ನಿಂದ ಸತ್ತವರ ಸಂಖ್ಯೆಯನ್ನು ಪರಿಷ್ಕರಣೆ ಮಾಡಿದ ಚೀನಾ ಸರ್ಕಾರದ ನಿರ್ಧಾರವನ್ನು ಡಬ್ಲ್ಯೂಎಚ್‌ಒ ಸಮರ್ಥಿಸಿದೆ. ಬೇರೆ ದೇಶಗಳಿಗೂ ಇದೇ ಥರ ತನ್ನ ಸಾವು ನೋವುಗಳ ಸಂಖ್ಯೆಯನ್ನು ಪರಿಷ್ಕರಿಸಬೇಕಾದ ಅಗತ್ಯ ಬೀಳಬಹುದು ಎಂದಿದೆ.

ಕೊರೋನಾದಿಂದಾಗಿ ವುಹಾನ್‌ ನಗರದ ಆರೋಗ್ಯ ವ್ಯವಸ್ಥೆಯೇ ಹದಗೆಟ್ಟು ಹೋಗಿತ್ತು. ಹಲವು ಮಂದಿ ಮನೆಯಲ್ಲಿ, ಇನ್ನಿ ಕೆಲವರು ತಾತ್ಕಾಲಿಕ ವ್ಯವಸ್ಥೆಯಲ್ಲಿ, ಕೆಲವು ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ಸತ್ತಿದ್ದಾರೆ. ಹಾಗಾಗಿ ಸತ್ತವರ ಸರಿಯಾದ ಸಂಖ್ಯೆ ಸಿಕ್ಕಿರಲಿಲ್ಲ. ಹಾಗಾಗಿ ವುಹಾನ್‌ ಸಾವಿಜ ಸಂಖ್ಯೆ ಪರಿಷ್ಕರಿಸಿದೆ. ಎಲ್ಲಾ ರಾಷ್ಟ್ರಗಳು ಇದನ್ನು ಎದುರಿಸಲಿದೆ ಎಂದು ಡಬ್ಲ್ಯೂಎಚ್‌ಒನ ತುರ್ತು ಸ್ಥಿತಿ ನಿರ್ದೇಶಕ ಮೈಕಲ್‌ ರಯಾನ್‌ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ವುಹಾನ್‌ ಸಾವಿನ ಸಂಖ್ಯೆಯನ್ನು ಚೀನಾ ಸರ್ಕಾರ ಶೇ.50ರಷ್ಟುಏರಿಕೆ ಮಾಡಿತ್ತು. 1.290 ಮಂದಿ ಸಾವನ್ನಪ್ಪಿದ್ದು, ಒಟ್ಟಾರೆ ಅಲ್ಲಿ 3,869 ಮಂದಿ ಸಾವಿಗೀಡಾಗಿದ್ದಾರೆ ಎಂದು ಪರಿಷ್ಕರಣೆ ಮಾಡಿತ್ತು. ಅಲ್ಲದೇ ಸೋಂಕಿತರ ಸಂಖ್ಯೆಯಲ್ಲಿ 325 ಮಂದಿಯನ್ನು ಸೇರಿಸಿತ್ತು.