Lockdown In China: ಚೀನಾದ ಮತ್ತೊಂದು ಸಿಟಿ ಲಾಕ್ಡೌನ್‌,  3 ನಗರಗಳ 2 ಕೋಟಿ ಜನರಿಗೆ ನಿರ್ಬಂಧ!

* ಚೀನಾದ ಮತ್ತೊಂದು ಸಿಟಿ ಲಾಕ್ಡೌನ್‌
* 3 ನಗರಗಳ 2 ಕೋಟಿ ಜನರಿಗೆ ನಿರ್ಬಂಧ
*ಅಮೆರಿಕದಲ್ಲಿ ದಾಖಲೆಯ 1.42 ಲಕ್ಷ ಜನ ಆಸ್ಪತ್ರೆಗೆ!
*ಕಳೆದ ವರ್ಷದ ಜನವರಿಗಿಂತ ಈ ವರ್ಷ ಹೆಚ್ಚು

Coronavirus Millions More Locked Down In China, Beijing On High Alert mah

ಬೀಜಿಂಗ್‌ (ಜ. 12) ಮುಂದಿನ ತಿಂಗಳಿಂದ ಆರಂಭವಾಗಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಚೀನಾದ (China) ರಾಜಧಾನಿ ಬೀಜಿಂಗ್‌ಗೆ ಇದೀಗ ನೆರೆಹೊರೆಯ ಪ್ರದೇಶಗಳಲ್ಲಿ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ  ಕಾರಣವಾಗಿದೆ. ಸಮೀಪದ ಅನ್ಯಾಂಗ್‌ ನಗರದಲ್ಲಿ 84 ಜನರಿಗೆ ಸೋಂಕು (Coronavirus) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಡೀ ನಗರವನ್ನು ಲಾಕ್ಡೌನ್‌
(Lockdown)ಮಾಡಲಾಗಿದೆ. ಇತ್ತೀಚೆಗೆ ಕ್ಸಿಯಾನ್‌ ಮತ್ತು ಟಿಯಾಂಜಿನ್‌ ನಗರದಲ್ಲೂ ಲಾಕ್ಡೌನ್‌  ಘೋಷಿಸಲಾಗಿತ್ತು. ಹೀಗಾಗಿ ಮೂರು ನಗರಗಳ ಒಟ್ಟು 2 ಕೋಟಿ ಜನರಿಗೆ ನಿರ್ಬಂಧ ಹೇರಿದಂತಾಗಿದೆ.

ವಾಷಿಂಗ್ಟನ್‌ ವರದಿ: ಕೊರೋನಾದ ಒಮಿಕ್ರೋನ್‌ ರೂಪಾಂತರಿ ತಳಿ ಅಪಾಯಕಾರಿಯಲ್ಲ, ಅದರ ಸೋಂಕು ತಗಲಿದರೆ ಆಸ್ಪತ್ರೆಗೆ ಹೋಗಬೇಕಿಲ್ಲ ಅಥವಾ ಸಾವು ಸಂಭವಿಸುವುದಿಲ್ಲ ಎಂಬ ನಂಬಿಕೆಯನ್ನು ಹುಸಿಗೊಳಿಸುವಂತೆ ಅಮೆರಿಕದಲ್ಲಿ ದಾಖಲೆಯ 14388 2 ಲಕ್ಷ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಅಮೆರಿಕದಲ್ಲಿ ಕೊರೋನಾದಿಂದಾಗಿ ಆಸ್ಪತ್ರೆಗೆ ದಾಖಲಾದವರಿಗಿಂತ(142314) ಹೆಚ್ಚು.

Coronavirus In Karnataka: ವೈಕುಂಠ ಏಕಾದಶಿಗೂ ಕೊರೋನಾ ಕರಿನೆರಳು, ನಿಯಮ ಕಟ್ಟುನಿಟ್ಟು

ಅಮೆರಿಕದಲ್ಲಿ ಒಮಿಕ್ರೋನ್‌ ವ್ಯಾಪಕವಾಗಿದ್ದು, ಕಳೆದ ಮೂರು ವಾರಗಳಲ್ಲಿ ಡೆಲ್ಟಾವನ್ನು ಮೀರಿಸಿ ಎಲ್ಲೆಡೆ ಹರಡಿದೆ. ಡೆಲ್ವೇರ್‌, ಇಲಿನಾಯ್‌್ಸ, ಮೇರಿಲ್ಯಾಂಡ್‌, ಮಿಸೌರಿ, ಓಹಿಯೋ, ಪೆನ್ಸಿಲ್ವೇನಿಯಾ, ಪ್ಯೂರ್ಟೊರಿಕೋ, ವರ್ಜಿನ್‌ ಐಲ್ಯಾಂಡ್ಸ್‌, ವರ್ಮೌಂಟ್‌, ವರ್ಜೀನಿಯಾ, ವಾಷಿಂಗ್ಟನ್‌ ಡಿ.ಸಿ. ಹಾಗೂ ವಿಸ್ಕಾನ್ಸಿನ್‌ನಲ್ಲಿ ದಾಖಲೆ ಸಂಖ್ಯೆಯ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಆರು ದಿನಗಳಿಂದ ದೇಶದಲ್ಲಿ ನಿತ್ಯ 5 ಲಕ್ಷಕ್ಕೂ ಹೊಸ ಕೇಸುಗಳು ಪತ್ತೆಯಾಗುತ್ತಿವೆ. ಸಾವಿನ ಸಂಖ್ಯೆ ಸರಾಸರಿ 1400 ಇದ್ದುದು ಈಗ 1700ಕ್ಕೆ ಏರಿಕೆಯಾಗಿದೆ. ಈ ಎಲ್ಲ ಬೆಳವಣಿಗೆಗಳು ಒಮಿಕ್ರೋನ್‌ ಕುರಿತ ಆತಂಕವನ್ನು ಹೆಚ್ಚಿಸಿವೆ.

ಒಮಿಕ್ರೋನ್‌ ನಿರುಪದ್ರವಿ ಎಂಬ ಭಾವನೆ ಬೇಡ ಎಂದು ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು. ಅದರ ಬೆನ್ನಲ್ಲೇ ಅಮೆರಿಕದಲ್ಲಿ ಒಮಿಕ್ರೋನ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದು ಹೆಚ್ಚುತ್ತಿದೆ. ದೇಶದಲ್ಲಿ ಕೆಲ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಎದುರಾಗಿದೆ.

ಕೋವಿಡ್‌ ಚಿಕಿತ್ಸಾ ಪಟ್ಟಿಗೆ  ಮೋಲ್ನುಪಿರಾವಿರ್‌ ಗುಳಿಗೆ  ಸೇರ್ಪಡೆ ಇಲ್ಲ:  ನವದೆಹಲಿ: ಕೋವಿಡ್‌ ಸೋಂಕಿತರ ಚಿಕಿತ್ಸೆಗೆಂದು ಅಭಿವೃದ್ಧಿಪಡಿಸಲಾದ ವಿಶ್ವದ ಮೊದಲ ಮಾತ್ರೆ ಮೋಲ್ನುಪಿರಾವಿರ್‌ ಅನ್ನು, ದೇಶದ ಕೋವಿಡ್‌ ಚಿಕಿತ್ಸಾ ಪಟ್ಟಿಯಲ್ಲಿ ಸೇರಿಸದೇ ಇರಲು ರಾಷ್ಟ್ರೀಯ ಕೋವಿಡ್‌  ಕಾರ್ಯಪಡೆ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಾತ್ರೆ ಸೇವೆನೆಯಿಂದ ಹೆಚ್ಚಿನ ಪರಿಣಾಮಗಳು ಕಂಡುಬಂದಿಲ್ಲ ಮತ್ತು ಮಾತ್ರೆಯ ಸುರಕ್ಷತೆ ಬಗ್ಗೆ ಇನ್ನೂ ಅನುಮಾನ ಇರುವ ಕಾರಣ ಈ ನಿರ್ಧಾರಕ್ಕೆ  ಬರಲಾಗಿದೆ ಎನ್ನಲಾಗಿದೆ.ಭಾರತದ ಔಷಧ ನಿಯಂತ್ರಣ ಸಂಸ್ಥೆ ತುರ್ತು ಸಮಯದಲ್ಲಿ ಮೊಲ್ನುಪಿರವಿರ್‌ ಬಳಕೆಗೆ ಡಿ. 28 ರಂದು ಅನುಮೋದನೆ
ನೀಡಿತ್ತು.


ಸತತ 3ನೇ ದಿನ 1.50 ಲಕ್ಷ ಕೇಸು:   ದೇಶದಲ್ಲಿ ಮಂಗಳವಾರ 1.68 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, 227 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸತತ ಮೂರನೇ ದಿನವೂ ದೇಶದಲ್ಲಿ 1.50 ಲಕ್ಷಕ್ಕಿಂತ ಹೆಚ್ಚಿನ ಕೇಸು ದಾಖಲಾದಂತೆ ಆಗಿದೆ.  ಆದರೆ ಸೋಮವಾರಕ್ಕೆ ಹೋಲಿಸಿದರೆ ಕೊರೋನಾ ಕೇಸುಗಳ ಸಂಖ್ಯೆ 11 ಸಾವಿರದಷ್ಟುತಗ್ಗಿದೆ. ಸೋಮವಾರ 1,79,723 ಕೇಸು ದೃಢಪಟ್ಟಿದ್ದರೆ, ಮಂಗಳವಾರ ಅದು 1,68,063ಕ್ಕೆ ಇಳಿದಿದೆ. ಆದರೆ ಕೇವಲ 69,959 ಜನ ಗುಣಮುಖರಾದ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 8,21,446ಕ್ಕೇರಿದೆ. ಇದು 208 ದಿನ (7 ತಿಂಗಳ) ಗರಿಷ್ಠ. ಒಂದೇ ದಿನದಲ್ಲಿ 97,827 ಸಕ್ರಿಯ ಪ್ರಕರಣ ಹೆಚ್ಚಿವೆ. ಇನ್ನು 277 ಜನರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇ.10.64ರಷ್ಟುದಾಖಲಾಗಿದೆ ಹಾಗೂ ಗುಣಮುಖರ ಪ್ರಮಾಣ ಶೇ.96.36ಕ್ಕೆ ಇಳಿದಿದೆ.

ಒಮಿಕ್ರೋನ್‌ ಸಂಖ್ಯೆ 4661ಕ್ಕೇರಿಕೆ:  ಈ ನಡುವೆ, 428 ಒಮಿಕ್ರೋನ್‌ ಪ್ರಕರಣಗಳು ಮಂಗಳವಾರ ವರದಿಯಾಗಿವೆ. ಹೀಗಾಗಿ ಒಮಿಕ್ರೋನ್‌ ಪೀಡಿತರ ಸಂಖ್ಯೆ 4461ಕ್ಕೇರಿದೆ. ಈ ಪೈಕಿ 1711 ಜನರು
ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲೇ ಅತ್ಯಧಿಕ 147 ಒಮಿಕ್ರೋನ್‌ ಪ್ರಕರಣ ಈವರೆಗೆ ದೃಢಪಟ್ಟಿವೆ.

 

 

 

Latest Videos
Follow Us:
Download App:
  • android
  • ios