Asianet Suvarna News Asianet Suvarna News

ಕೊರೊನಾ ವೈರಸ್ ಪತ್ತೆ ಮಾಡಿ ಬಂಧನಕ್ಕೊಳಗಾಗಿದ್ದ ವೈದ್ಯ ನಿಗೂಢ ಸಾವು

ಮಾರಕ ಕೊರೊನಾ ವೈರಸ್ ಪತ್ತೆ ಮಾಡಿದ್ದ ವೈದ್ಯ ಸಾವು/ ವೈರಸ್ ನಿಂದಲೇ ಮೃತಪಟ್ಟಿದ್ದಾರೆ ಎಂದು ಮೊದಲು ವರದಿ/ ಬೇರೆ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಶಂಕೆ/ ಚೀನಾ ಮಾಧ್ಯಮಗಳಲ್ಲಿ ಗೊಂದಲ

coronavirus chinese media confusion over doctor death
Author
Bengaluru, First Published Feb 7, 2020, 12:09 AM IST

ವುಹಾನ್​(ಫೆ. 06)  ಕೊರೊನಾ ವೈರಸ್  ಮೊದಲು ಪತ್ತೆಹಚ್ಚಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಪೊಲೀಸರಿಂದ ಬಂಧಿಯಾಗಿದ್ದ ಚೀನಾದ ವೈದ್ಯ ಇದೀಗ ವೈರಸ್​ನಿಂದಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಚೀನಾ ಮಾಧ್ಯಮಗಳಲ್ಲಿ ಈ ಸುದ್ದಿ ಗೊಂದಲ ಸೃಷ್ಟಿಸಿದೆ.

ಬೇರೆ ಕಾರಣದಿಂದ ತೀವ್ರ ಅಸ್ವಸ್ಥಗೊಂಡಿದ್ದ ವೈದ್ಯ ನಿಧನರಾಗಿದ್ದಾರೆ ಎನ್ನಲಾಗಿದೆ. ವೆನ್​ಲಿಯಾಂಗ್​ ಹೆಸರಿನ ಡಾಕ್ಟರ್ ಅಸುನೀಗಿದ್ದಾರೆ.

ಕೊರೊನಾಗೆ ಸಿಕ್ತು ಔಷಧ; 48 ಗಂಟೆಯಲ್ಲಿ ರೋಗ ಮಂಗಮಾಯ

ವುಹಾನ್​ನಲ್ಲಿ ಸಾರ್ಸ್​ ರೀತಿಯ ರೋಗ ಹರಡುತ್ತಿರುವ ಶಂಕೆ ವ್ಯಕ್ತಪಡಿಸಿದ್ದ ವೈದ್ಯ ಮೊದಲ ಬಾರಿ ಮಾರಕ ವೈರಸ್ ಕತೆ ಹೇಳಿದ್ದ.  ಕೊರೊನಾ ವೈರಸ್​ ಸೋಂಕಿನಿಂದಲೇ ಗುರುವಾರ ಸಾವಿಗೀಡಾಗಿದ್ದಾರೆ ಎಂದು ಚೀನಾದಲ್ಲಿ ಸುದ್ದಿ ಹಬ್ಬಿತ್ತು.

34 ವರ್ಷದ ವೆನ್​ಲಿಯಾಂಗ್​ ಮೂಲತಃ ಕಣ್ಣಿನ ಡಾಕ್ಟರ್. ವುಹಾನ್​ನ ಕೇಂದ್ರೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಡಿಸೆಂಬರ್ 30ರ ವೇಳೆ ಈ ಮಾರಕ ವೈರಸ್ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

ಚೀನಾದ ಕೇಂದ್ರ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್​ನಲ್ಲಿ ಮೊದಲ ಬಾರಿಗೆ ವೈರಸ್​ ಸೋಂಕು ಕಾಣಿಸಿಕೊಂಡಾಗ ವೆನ್​ಲಿಯಾಂಗ್ ಮೊದಲು ವರದಿ ನೀಡಿದ್ದರು. ಕಳೆದ ವರ್ಷ ಡಿಸೆಂಬರ್​​ನಲ್ಲೇ ವರದಿಯನ್ನು ನೀಡಿದ್ದರು. ಚೀನಾದ ಮೆಸೆಜಿಂಗ್​ ಆ್ಯಪ್​ ವೀಚ್ಯಾಟ್​ ಮೂಲಕವು ಇತರೆ ವೈದ್ಯರಿಗೂ ಮಾಹಿತಿಯನ್ನು ತಿಳಿಸಿದ್ದರು.

Follow Us:
Download App:
  • android
  • ios