Asianet Suvarna News Asianet Suvarna News

ಎಚ್ಚರ...! ಮೊಬೈಲ್‌, ನೋಟಿನ ಮೇಲೆ 28 ದಿನ ಇರುತ್ತೆ ಕೊರೋನಾ!

ಮೊಬೈಲ್‌, ನೋಟಿನ ಮೇಲೆ 28 ದಿನ ಇರುತ್ತೆ ಕೊರೋನಾ| ಆಸ್ಪ್ರೇಲಿಯಾ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಅಧ್ಯಯನ| 20 ಡಿಗ್ರಿ ಇದ್ದರೆ ಸಕ್ರಿಯ| 40 ಡಿಗ್ರಿ ಇದ್ದರೆ 1 ದಿನ ಆಯಸ್ಸು ಚಳಿಗಾಲದಲ್ಲಿ ಅಪಾಯ?

Coronavirus can survive for a month on mobile phone screens and banknotes study suggests pod
Author
Bangalore, First Published Oct 13, 2020, 7:33 AM IST
  • Facebook
  • Twitter
  • Whatsapp

ನವದೆಹಲಿ(ಅ.13): ನಿಮ್ಮ ಮೊಬೈಲ್‌ ಫೋನ್‌ ಅನ್ನು ಕಂಡಕಂಡವರಿಗೆಲ್ಲಾ ನೀಡುವುದು ಹಾಗೂ ನೋಟುಗಳಿಗೆ ಎಂಜಲು ಹಚ್ಚುವ ಮುನ್ನ ಎಚ್ಚರ. ವಿಶ್ವವನ್ನೇ ನಡುಗಿಸಿರುವ ಕೊರೋನಾ ವೈರಸ್‌ ಮೊಬೈಲ್‌ ಫೋನ್‌ ಸ್ಕ್ರೀನ್‌, ಬ್ಯಾಂಕ್‌ ನೋಟು, ಸ್ಟೇನ್‌ಲೆಸ್‌ ಸ್ಟೀಲ್‌ ವಸ್ತುಗಳ ಮೇಲೆ ಬರೋಬ್ಬರಿ 28 ದಿನಗಳ ಕಾಲ ಬದುಕಬಲ್ಲದು ಎಂದು ಸಂಶೋಧನೆಯೊಂದು ತಿಳಿಸಿದೆ.

ಹತ್ತಿಯಂತಹ ರಂಧ್ರಗಳು ಇರುವ ವಸ್ತುಗಳಿಗೆ ಹೋಲಿಸಿದರೆ ಕಡಿಮೆ ತಾಪಮಾನ ಹಾಗೂ ರಂಧ್ರಗಳು ಇಲ್ಲದ ವಸ್ತುಗಳು ಅಥವಾ ಗಾಜು, ಸ್ಟೇನ್‌ಲೆಸ್‌ ಸ್ಟೀಲ್‌ ಹಾಗೂ ವೀನೈಲ್‌ನಂತಹ ಮೆತ್ತನೆಯ ಮೇಲ್ಮೈ ಮೇಲೆ ಅಧಿಕ ಹೊತ್ತು ಈ ವೈರಸ್‌ ಜೀವ ಹೊಂದಿರುತ್ತದೆ. ಸಾಮಾನ್ಯ ಜ್ವರದ ವೈರಸ್‌ ಇಂತಹ ಮೇಲ್ಮೈಗಳ ಮೇಲೆ ಹೆಚ್ಚೆಂದರೆ 17 ದಿನ ಬದುಕಿರುತ್ತದೆ. ಅದಕ್ಕಿಂತ ಅಧಿಕ ದಿನ ಕೊರೋನಾ ಇರುತ್ತದೆ ಎಂದರೆ ಈ ವೈರಸ್‌ ಎಷ್ಟುಶಕ್ತಿಶಾಲಿ ಎಂಬುದು ತಿಳಿಯುತ್ತದೆ ಎಂದು ಆಸ್ಪ್ರೇಲಿಯಾದ ರೋಗ ಸನ್ನದ್ಧತಾ ಕೇಂದ್ರ (ಎಸಿಡಿಪಿ) ನಡೆಸಿರುವ ಸಂಶೋಧನೆಯಿಂದ ತಿಳಿದು ಬಂದಿದೆ. ಈ ಕುರಿತ ಅಧ್ಯಯನ ವರದಿ ವೈರಾಲಜಿ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಚಳಿಗಾಲದಲ್ಲಿ ಪ್ರತಾಪ?:

ಕೋಣೆಯ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಇದ್ದರೆ ವೈರಸ್‌ ಹೆಚ್ಚು ಸಕ್ರಿಯವಾಗಿರುತ್ತದೆ. ಅಂತಹ ವಾತಾವರಣದಲ್ಲಿ ಮೊಬೈಲ್‌ ಫೋನ್‌ ಸ್ಕ್ರೀನ್‌ನಲ್ಲಿರುವ ಗಾಜು, ನೋಟುಗಳಲ್ಲಿ 28 ದಿನಗಳ ಕಾಲ ಇರುತ್ತದೆ. ಪ್ಲಾಸ್ಟಿಕ್‌ ನೋಟುಗಳಿಗೆ ಹೋಲಿಸಿದರೆ ಕಾಗದದ ನೋಟುಗಳ ಮೇಲೆ ವೈರಸ್‌ ಹೆಚ್ಚು ದಿನ ಜೀವ ಹೊಂದಿರುತ್ತದೆ ಎಂದು ಎಸಿಡಿಪಿ ಉಪ ನಿರ್ದೇಶಕ ಡೆಬ್ಬಿ ಈಗಲ್ಸ್‌ ತಿಳಿಸಿದ್ದಾರೆ.

30ರಿಂದ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಪರೀಕ್ಷೆ ಮಾಡಲಾಗಿದೆ. ಉಷ್ಣಾಂಶ ಅಧಿಕವಾದಂತೆ ವೈರಸ್‌ ಜೀವಿತಾವಧಿ ತಗ್ಗಿರುವುದು ಕಂಡುಬಂದಿದೆ. ನೇರ ಬಿಸಿಲಿನ ಕಿರಣಗಳು ಬಿದ್ದರೆ ವೈರಸ್‌ ನಿಷ್ಕಿ್ರಯವಾಗುತ್ತದೆ ಎಂದು ವರದಿ ತಿಳಿಸಿರುವುದು ಮಹತ್ವ ಪಡೆದುಕೊಂಡಿದೆ.

"

ಇದಕ್ಕೆ ಇಂಬು ನೀಡುವಂತೆ ಬೇಸಿಗೆಯಲ್ಲಿ ಭಾರತದಲ್ಲಿ ತಾಪಮಾನ ಹೆಚ್ಚಿದ್ದಾಗ ವೈರಸ್‌ ಹಾವಳಿ ಅಧಿಕವಾಗಿರಲಿಲ್ಲ. ಬೇಸಿಗೆ ಕಡಿಮೆಯಾಗಿ ಮಳೆಗಾಲ ಶುರುವಾದ ಬಳಿಕ ಜತೆಗೆ ಲಾಕ್‌ಡೌನ್‌ ಸಡಿಲಗೊಂಡ ನಂತರ ದೇಶದಲ್ಲಿ ವೈರಸ್‌ ಅಬ್ಬರ ಅಧಿಕವಾಗಿದೆ. 20 ಡಿಗ್ರಿಗಿಂತ ಕಡಿಮೆ ತಾಪಮಾನದ ವಾತಾವರಣದಲ್ಲಿ ವೈರಸ್‌ ಹಾವಳಿ ಹೆಚ್ಚು ಎಂದು ಸಂಶೋಧನೆ ತಿಳಿಸಿರುವುದರಿಂದ ಭಾರತದಲ್ಲಿ ಚಳಿಗಾಲದಲ್ಲಿ ವೈರಸ್‌ ಹಾವಳಿ ಇನ್ನಷ್ಟುಹೆಚ್ಚಾಗಲಿದೆಯೇ ಎಂಬ ಆತಂಕ ಹೆಚ್ಚಾಗುವಂತಾಗಿದೆ.

ಚಳಿಗಾಲದಲ್ಲಿ ಅಪಾಯ? 

- ಮೊಬೈಲ್‌ ಪರದೆ, ಕಾಗದದ ನೋಟಲ್ಲಿ ಜೀವಂತ

- 20 ಡಿಗ್ರಿ ತಾಪದಲ್ಲಿ ಕೊರೋನಾ ವೈರಸ್‌ ಸಕ್ರಿಯ

- 28 ದಿನಗಳ ವರೆಗೂ ಸಕ್ರಿಯವಾಗಿರುವ ಸಾಧ್ಯತೆ

- 30-40 ಡಿಗ್ರಿ ತಾಪ ಇದ್ದರೆ ವೈರಸ್‌ ಆಯಸ್ಸು ಕಮ್ಮಿ

- ಚಳಿಗಾಲ ಬರುತ್ತಿರುವ ಕಾರಣ ಅಪಾಯದ ಭೀತಿ

Follow Us:
Download App:
  • android
  • ios