ಕೊರೋನಾ ವೈರಸ್‌ ಅನ್ನು ಗಂಡನ ಮಾತು ಕೇಳದ ಪತ್ನಿ| ಭದ್ರತಾ ಸಚಿವನ ಹೇಳಿಕೆಗೆ ಆಕ್ರೊಶ

ಜಕಾರ್ತಾ(ಮೇ.31): ಕೊರೋನಾ ವೈರಸ್‌ ಅನ್ನು ಬೇರೆ ಯಾವುದಕ್ಕೆ ಹೋಲಿಸಿದರೂ ಏನೂ ಆಗುತ್ತಿರಲಿಲ್ಲ. ಆದರೆ, ಇಂಡೋನೇಷ್ಯಾದ ಸಚಿವರೊಬ್ಬರು ಕೊರೋನಾ ವೈರಸ್‌ ಅನ್ನು ಗಂಡನ ಮಾತು ಕೇಳದ ಪತ್ನಿಗೆ ಹೋಲಿಸಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತನ್ನ 10 ಸಾವಿರ ಕಾರ್ಮಿಕರನ್ನು ಫ್ಲೈಟಲ್ಲಿ ತವರಿಗೆ ಕಳುಹಿಸಿದ ಕೃಷಿಕ

ಸ್ಥಳೀಯ ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್‌ ಮೂಲಕ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾ ಭದ್ರತಾ ಸಚಿವ ಮೊಹಮ್ಮದ್‌ ಮಹಫುದ್‌ ಎನ್ನುವವರು, ‘ಕೊರೋನಾ ವೈರಸ್‌ ನಿಮ್ಮ ಹೆಂಡತಿ ಇದ್ದ ಹಾಗೆ. ಆರಂಭದಲ್ಲಿ ನೀವು ನಿಮ್ಮ ಪತ್ನಿಯನ್ನು ನಿಯಂತ್ರಣದಲ್ಲಿ ಇಡಲು ಯತ್ನಿಸುತ್ತೀರಿ. ಆದರೆ, ಅದು ನಿಮ್ಮಿಂದ ಸಾಧ್ಯವಿಲ್ಲ ಎಂದು ಮನವರಿಕೆಯಾಗುತ್ತದೆ. ಬಳಿಕ ನೀವು ಆಕೆಯ ಜೊತೆ ಬದುಕುವುದನ್ನು ಕಲಿಯುತ್ತೀರಿ. ಕೊರೋನಾ ವೈರಸ್‌ ಕೂಡ ಅದೇ ರೀತಿ. ನಾವು ವೈರಸ್‌ಗೆ ಹೊಂದಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಸದ್ಯ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಚಿವರು ತಮ್ಮ ಮಾತು ಹಿಂಪಡೆಯಬೇಕೆಂಬ ಒತ್ತಾಯ ಕೇಳಿ ಬಂದಿದೆ.